ಬೆಂಕಿ ಉಗುಳೋ ಜಲಪಾತವಿದು, ವಿಶ್ವದ ಅತ್ಯಂತ ವಿಶಿಷ್ಟ ಫಾಲ್ಸ್!

First Published | Jan 24, 2024, 3:59 PM IST

ಯೊಸೆಮೈಟ್ ಫೈರ್ಫಾಲ್  ಅದ್ಭುತವಾದ ನೈಸರ್ಗಿಕ ಜಲಧಾರೆಯಾಗಿದ್ದು, ಇದನ್ನ ಫೈರ್ ಫಾಲ್ ಅಂತಾನೂ ಕರೀತಾನೆ, ಯಾಕಂದ್ರೆ, ಈ ಜಲಪಾತದಿಂದ ನೀರು ಬೀಳುತ್ತಿದ್ದರೆ, ಅಗ್ನಿಯೇ ಹರಿದು ಬರುವಂತೆ ಕಾಣಿಸುತ್ತೆ. ಅಷ್ಟಕ್ಕೂ ಈ ಜಲಪಾತ ಎಲ್ಲಿ ಅನ್ನೋದನ್ನು ನೋಡೋಣ.
 

ಯುಎಸ್ ರಾಜ್ಯ ಕ್ಯಾಲಿಫೋರ್ನಿಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ (Yosemite National Park) ಒಂದು ಸೀಸನಲ್ ಜಲಪಾತವಿದೆ, ಇದನ್ನು ಹಾರ್ಸ್ಟೇಲ್ ಜಲಪಾತ ಎಂದು ಕರೆಯಲಾಗುತ್ತದೆ. ಈ ಜಲಪಾತ ಇದರ ವಿಶಿಷ್ಟತೆಯಿಂದಾಗಿಯೇ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತೆ. ಅಷ್ಟಕ್ಕೂ ಅದರ ವಿಶೇಷತೆ ಏನು ಅಂತೀರಾ? 
 

ಹಾರ್ಸ್ಟೇಲ್ ಜಲಪಾತವನ್ನು (horsetail falls) ಫೈರ್ ಜಲಪಾತ ಅಂತಾನೂ ಕರೆಯಲಾಗುತ್ತೆ. ಇದೊಂದು ಸೀಸನಲ್ ಫೈರ್ ಜಲಪಾತ. ಅಂದ್ರೆ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ, ಈ ಜಲಪಾತದ ಬೀಳುವ ತೊರೆಗಳು ಕೆಂಪು-ಕಿತ್ತಳೆ ದೀಪಗಳಿಂದ ಹೊಳೆಯುತ್ತವೆ, ಅವುಗಳನ್ನ ನೋಡಿದ್ರೆ, ಬೆಂಕಿಯೇ ನೀರಿನಂತೆ ಧುಮ್ಮಿಕ್ಕುವಂತೆ ಕಾಣಿಸುತ್ತೆ. ಅದಕ್ಕಾಗಿಯೇ ಇದನ್ನ ವಿಶಿಷ್ಟ ಜಲಪಾತ ಅನ್ನೋದು. ಆದಾಗ್ಯೂ, ಈ ಅದ್ಭುತ ದೃಶ್ಯದ ರಹಸ್ಯವು ತುಂಬಾ ಆಘಾತಕಾರಿಯಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ
 

Tap to resize

ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಯೊಸೆಮೈಟ್ ಫೈರ್ ಫಾಲ್ ವೀಡಿಯೊವನ್ನು ಬಳಕೆದಾರರು ಪೋಸ್ಟ್ ಮಾಡಿದ್ದಾರೆ, ಅದರ ಶೀರ್ಷಿಕೆ ಹೀಗಿದೆ, ಯೊಸೆಮೈಟ್‌ನ  ಹಾರ್ಸ್ಟೇಲ್ ಫಾಲ್ಸ್ ಬೆಂಕಿಯಂತೆ ಹೊಳೆಯುತ್ತದೆ. ಈ ಪರಿಣಾಮವನ್ನು ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ ಮಾತ್ರ ನೋಡಬಹುದು. ಈ ಜಲಪಾತ ಸೂರ್ಯಾಸ್ತದ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಬೆಂಕಿಯೇ ಹರಿಯುವಂತೆ ಹರಿದು ಬರುತ್ತದೆ ಎಂದು ಬರೆದುಕೊಂಡಿದ್ದಾರೆ. 
 

ಯೊಸೆಮೈಟ್ ಫೈರ್ ಫಾಲ್ ರಹಸ್ಯವೇನು?
ಯೊಸೆಮೈಟ್ ಫೈರ್ ಫಾಲ್ (Yosemite firefall) ನ್ಯಾಚುರಲ್ ಆಪ್ಟಿಕಲ್ ಇಲ್ಯೂಶನ್ (Natural Optical Illusion) ಆಗಿದ್ದು, ಇದು ಸೂರ್ಯಾಸ್ತಮಾನದ ಕಿರಣಗಳು ಹಾರ್ಸ್ಟೇಲ್ ಜಲಪಾತದಿಂದ ಬೀಳುವ ತೊರೆಗಳಿಗೆ ಸರಿಯಾದ ಕೋನದಲ್ಲಿ ಪ್ರತಿಫಲಿಸಿದಾಗ, ಅಂದರೆ ಸೂರ್ಯನ ಕಿರಣಗಳು ಈ ಜಲಪಾತದ ನೀರಿನ ಮೇಲೆ ಬಿದ್ದಾಗ ಇದು ಸಂಭವಿಸುತ್ತದೆ. 

ಸೂರ್ಯನ ಬೆಳಕು ನಿಖರವಾಗಿ ಜಲಪಾತದ ಮೇಲೆ ಬೀಳುತ್ತದೆ. ಇದರಿಂದ ಜಲಪಾತದ ನೀರಿನಲ್ಲಿ ಕೆಂಪು-ಕಿತ್ತಳೆ ಹೊಳಪನ್ನು ಉಂಟುಮಾಡುತ್ತದೆ, ಇದು ಜಲಪಾತಕ್ಕೆ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತದೆ ಎಂದು Sfgate.com ವರದಿ ಮಾಡಿದೆ. ಈ ಅದ್ಭುತ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.
 

ನಿಜವಾಗಿ ಸೂರ್ಯಾಸ್ತಮಾನದ ಬೆಳಕು ಈ ಭ್ರಮೆಯನ್ನು ಸೃಷ್ಟಿಸುತ್ತದೆ. ಜನರು ಅದರ ಚಿತ್ರಗಳನ್ನು ತೆಗೆದುಕೊಂಡಾಗ, ಯೊಸೆಮೈಟ್ ಫೈರ್ ಫಾಲ್ ನಿಜವಾಗಿಯೂ ಬೆಂಕಿಯಿಂದ ಮಾಡಲ್ಪಟ್ಟಿದೆಯೇ ಎನ್ನುವಂತೆ ಕಾಣಿಸುತ್ತೆ. ಎಷ್ಟು ಅದ್ಭುತವಾಗಿದೆ ಅಲ್ವಾ? ಈ ಪ್ರಕೃತಿ ಸೌಂದರ್ಯ. 
 

ಯೊಸೆಮೈಟ್ ಫೈರ್ ಫಾಲ್ ಯಾವಾಗ ಕಾಣಿಸಿಕೊಳ್ಳುತ್ತದೆ?
ಯೊಸೆಮೈಟ್ ಫೈರ್ ಫಾಲ್ ನೋಡಲು ಉತ್ತಮ ಸಮಯವೆಂದರೆ ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರತಿವರ್ಷ ಫೆಬ್ರವರಿ 10 ರಿಂದ 27 ರವರೆಗೆ ನೋಡಬಹುದು. ಸಂಜೆ 5:30 ರ ಸುಮಾರಿಗೆ ಸೂರ್ಯ ಮುಳುಗಿದಾಗ (after sunset), ಅದರ ಬೆಳಕು ಜಲಪಾತಕ್ಕೆ ಅಪ್ಪಳಿಸುತ್ತದೆ. ಆ ಸಂದರ್ಭದಲ್ಲಿ, ಈ ಅದ್ಭುತ ನೋಟವನ್ನು ಕೇವಲ 3 ನಿಮಿಷಗಳ ಕಾಲ ನೋಡಲು ಸಿಗುತ್ತೆ, ಆದ್ದರಿಂದ ಜನರು ಅದನ್ನು ನೋಡಲು ಸಂಜೆ 4 ಗಂಟೆಯಿಂದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಾರೆ. 
 

Latest Videos

click me!