ಹೆಲೋ ಬೆಂಗಳೂರು… ಈ ವೀಕೆಂಡ್‌ಗೆ ಟ್ರಾವೆಲ್ ಮಾಡೋ ಪ್ಲ್ಯಾನ್ ಇದ್ರೆ… ಈ ತಾಣಗಳು ಬೆಸ್ಟ್

First Published | Jan 22, 2024, 12:11 PM IST

ನೀವು ಬೆಂಗಳೂರಲ್ಲಿ ವಾಸಿಸ್ತಿದ್ದೀರಾ? ಈ ವಾರ ಗಣರಾಜ್ಯೋತ್ಸವದ ಲಾಂಗ್ ವೀಕೆಂಡ್ ಗೆ ಮೂರು ದಿನಗಳ ಟ್ರಿಪ್ ಎಂಜಾಯ್ ಮಾಡಬೇಕು ಎಂದು ಯೋಚ್ನೆ ಮಾಡಿದ್ರೆ, ಇಲ್ಲಿದೆ ನಿಮಗೆ ಬೆಸ್ಟ್ ತಾಣಗಳ ವರದಿ. 
 

ಈ ಬಾರಿಯ ಗಣರಾಜ್ಯೋತ್ಸವದ ಲಾಂಗ್ ವೀಕೆಂಡ್ (long weekend plan) ಎಂಜಾಯ್ ಮಾಡಲು ನಾವು ನಿಮಗೆ ಸಹಾಯ ಮಾಡ್ತೀವಿ, ನೀವು ಬೆಂಗಳೂರಿನವರು ಆಗಿದ್ರೆ, ಇವತ್ತೆ ಎಲ್ಲಿಗೆ ಹೋಗೋದು ಪ್ಲ್ಯಾನ್ ಮಾಡಿ. ಇಲ್ಲಿ ಒಂದಿಷ್ಟು ತಾಣಗಳ ಲಿಸ್ಟ್ ಇದೆ, ನಿಮ್ಮ ಆಯ್ಕೆ ಯಾವುದು? 
 

ಮೈಸೂರು (Mysore)
ಬೆಂಗಳೂರಿನಿಂದ 140 ಕಿ.ಮೀ ದೂರದಲ್ಲಿರುವ ಮೈಸೂರು, ಅಲ್ಲಿನ ಸುಂದರ ವಾತಾವರಣ, ಅರಮನೆಗಳ ಬೀಡು ಮತ್ತು ಅಲ್ಲಿನ ಮಾರ್ಕೆಟ್ ಗಳಿಂದಾಗಿ ಪ್ರಸಿದ್ಧಿ ಪಡೆದಿದೆ. ಚಾಮುಂಡಿ ಬೆಟ್ಟ ಮತ್ತು ದಸರಾ ಉತ್ಸವವೂ ನಗರದಲ್ಲಿ ಪ್ರಸಿದ್ಧ. ಇಲ್ಲಿಗೆ ನೀವು ಈ ವೀಕೆಂಡ್ ಹೋಗಬಹುದು.

Tap to resize

ಊಟಿ (Ooty)
ಸುಮಾರು 270 ಕಿ.ಮೀ ದೂರದಲ್ಲಿರುವ ಊಟಿ ನೀಲಗಿರಿ ಬೆಟ್ಟಗಳಲ್ಲಿನ ಒಂದು ಆಕರ್ಷಕ ಗಿರಿಧಾಮ. ಚಹಾ ತೋಟಗಳು, ಆಹ್ಲಾದಕರ ಹವಾಮಾನ ಮತ್ತು ಕಣ್ಣಿಗೆ ಹಬ್ಬ ನೀಡುವ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಚುಮು ಚುಮು ಚಳಿಯಲ್ಲಿ ನೀವಿಲ್ಲಿಗೆ ಹೋಗಿ ಬರಬಹುದು. 

ಹಂಪಿ (Hampi)
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ಬೆಂಗಳೂರಿನಿಂದ ಸುಮಾರು 340 ಕಿ.ಮೀ ದೂರದಲ್ಲಿದೆ. ಬಂಡೆಗಳ ನಡುವೆ ಪ್ರಾಚೀನ ಅವಶೇಷಗಳು ಮತ್ತು ದೇವಾಲಯಗಳು ಇದನ್ನು ವಿಶಿಷ್ಟ ಮತ್ತು ಐತಿಹಾಸಿಕವಾಗಿ ಮಹತ್ವದ ತಾಣವನ್ನಾಗಿ ಮಾಡಿವೆ. 
 

ಚಿಕ್ಕಮಗಳೂರು (Chikmagaluru)
ಬೆಂಗಳೂರಿನಿಂದ ಸುಮಾರು 240 ಕಿ.ಮೀ ದೂರದಲ್ಲಿರುವ ಚಿಕ್ಕಮಗಳೂರು ಕಾಫಿ ತೋಟಗಳು, ಸೊಂಪಾದ ಬೆಟ್ಟಗಳು ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಆಹ್ಲಾದಕರ ಹವಾಮಾನ, ಜಲಪಾತಗಳು ಅದ್ಭುತವಾಗಿವೆ.

ವಯನಾಡ್ (Wayanad)
ಬೆಂಗಳೂರಿನಿಂದ 270 ಕಿ.ಮೀ ದೂರದಲ್ಲಿರುವ ಕೇರಳದ ಗಿರಿಧಾಮವಾದ ವಯನಾಡ್ ಸುಂದರವಾಗಿದೆ. ಈ ಸುಂದರ ತಾಣವು ಜಲಪಾತಗಳು, ಮಸಾಲೆ ತೋಟಗಳು ಮತ್ತು ಸುಂದರವಾದ ದೃಶ್ಯಾವಳಿಗಳಿಗೆ ಪ್ರಸಿದ್ಧವಾಗಿವೆ. ವಯನಾಡ್ ನಲ್ಲಿ ಚಾರಣ ಮತ್ತು ವನ್ಯಜೀವಿಗಳು ಲಭ್ಯವಿದೆ. 

ಸಕಲೇಶಪುರ (Sakleshpur)
ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿರುವ ಸಕಲೇಶಪುರದಲ್ಲಿ ಕಾಫಿ ತೋಟಗಳು, ಚಾರಣ ಮಾರ್ಗಗಳು ಮತ್ತು ಉತ್ತಮ ತಾಪಮಾನವನ್ನು ಹೊಂದಿರುವ ಗಿರಿಧಾಮವಾಗಿದೆ. ಈ ಪ್ರದೇಶವು ಪ್ರಶಾಂತವಾಗಿದ್ದು, ಪ್ರಕೃತಿಯನ್ನು ಎಂಜಾಯ್ ಮಾಡಲು ಈ ಸ್ಥಳ ಅತ್ಯುತ್ತಮವಾಗಿದೆ. 

ಕೂರ್ಗ್ (Coorg)
ಕೂರ್ಗ್ ಬೆಂಗಳೂರಿನಿಂದ 250 ಕಿ.ಮೀ ದೂರದಲ್ಲಿರುವ ಸುಂದರ ಗಿರಿಧಾಮವಾಗಿದ್ದು, ಸೊಂಪಾದ ಸಸ್ಯವರ್ಗ, ಕಾಫಿ ತೋಟಗಳು ಮತ್ತು ಮಂಜಿನ ಬೆಟ್ಟಗಳನ್ನು ಹೊಂದಿದೆ. ಪ್ರಕೃತಿ ಪ್ರೇಮಿಗಳು ಮತ್ತು ಶಾಂತಿ ಮತ್ತು ಶಾಂತತೆಯನ್ನು ಬಯಸುವವರು ಇದನ್ನು ಖಂಡಿತಾ ಇಷ್ಟಪಡ್ತಾರೆ. 

Latest Videos

click me!