Unique Airport: ಪ್ರಪಂಚದಾದ್ಯಂತದ ವಿಮಾನಗಳು ಕಾಂಕ್ರೀಟ್ ರನ್‌ವೇಗಳಲ್ಲಿ ಇಳಿಯುತ್ತವೆ. ಅದರಲ್ಲೇನಿದೆ ವಿಶೇಷ ಎನ್ನಬೇಡಿ. ಪ್ರಪಂಚದ ಈ ಒಂದು ಸುಂದರ ಸ್ಥಳದಲ್ಲಿ, ವಿಮಾನಗಳು ರನ್ ವೇನಲ್ಲಿ ಅಲ್ಲ ಬದಲಾಗಿ, ನೇರವಾಗಿ ಕಡಲತೀರದ ಮರಳಿನ ಮೇಲೆ ಇಳಿಯುತ್ತವೆ. ಆ ಸುಂದರ ತಾಣ ಯಾವುದು ಗೊತ್ತಾ?
ಏನಿದು ಪ್ರಶ್ನೆ ವಿಮಾನ ಎಲ್ಲಿ ಲ್ಯಾಂಡ್ ಆಗುತ್ತೆ ಅಂದ್ರೆ ರನ್ ವೇ ನಲ್ಲಿ ತಾನೆ? ಎಂದು ನೀವು ಹೇಳಬಹುದು. ಆದರೆ ಇವತ್ತು ನಿಮಗೊಂದು ವಿಶೇಷವಾದ ವಿಮಾನ ನಿಲ್ದಾಣದ ಕುರಿತು ಮಾಹಿತಿ ನೀಡುತ್ತಿದ್ದೇವೆ. ಇಲ್ಲಿ ವಿಮಾನಗಳು ಖಂಡಿತವಾಗಿಯೂ ಕಾಂಕ್ರೀಟ್ ನಿಂದ ಮಾಡಿದ ರನ್ ವೇನಲ್ಲಿ ಇಳಿಯೋದಿಲ್ಲ. ಮತ್ತೆಲ್ಲಿ ಇಳಿಯುತ್ತೆ ಗೊತ್ತಾ?
26
ಸ್ಕಾಟ್’ಲ್ಯಾಂಡಿನ ಬಾರ್ರಾ ದ್ವೀಪ
ಈ ವಿಶಿಷ್ಟ ವಿಮಾನ ನಿಲ್ದಾಣವು ಇರುವುದು ಸ್ಕಾಟ್ಲೆಂಡ್‌ನ ಔಟರ್ ಹೆಬ್ರೈಡ್ಸ್‌ನಲ್ಲಿರುವ ಬಾರ್ರಾ ದ್ವೀಪದಲ್ಲಿ. ಈ ಪುಟ್ಟ ಸುಂದರ ದ್ವೀಪಕ್ಕೆ ಭೇಟಿ ನೀಡಬೇಕೆಂದರೆ, ನೀವು ವಿಮಾನದಲ್ಲಿ ಪ್ರಯಾಣಿಸಿ, ಮರಳಿನ ತೀರದಲ್ಲಿ ಲ್ಯಾಂಡ್ ಆಗಬೇಕು. ಇಲ್ಲಿ ಹಾರಾಟದ ಸಮಯವನ್ನು ಸಂಚಾರದಿಂದಲ್ಲ, ಬದಲಾಗಿ ಸಮುದ್ರ ಉಬ್ಬರವಿಳಿತಗಳಿಂದ ನಿರ್ಧರಿಸಲಾಗುತ್ತದೆ.
36
ಒಂದು ವಿಶಿಷ್ಟ ಮರಳಿನ ರನ್‌ವೇ
ಸಮುದ್ರ ಉಬ್ಬರವಿಳಿತದ ಸಮಯದಲ್ಲಿ, ಈ ರನ್‌ವೇ ಸಂಪೂರ್ಣವಾಗಿ ಮುಳುಗಿರುತ್ತದೆ. ನೀರು ಕಡಿಮೆಯಾದ ನಂತರ, ಮರಳಿನ ಮೇಲೆ ವಿಮಾನಗಳ ಮಾರ್ಗವನ್ನು ಗುರುತಿಸಲು ಮರದ ಕಂಬಗಳನ್ನು ಬಳಸಲಾಗುತ್ತದೆ. ಈ ಸುಂದರ ಅನುಭವ ಪಡೆಯಲು ನೀವು ಸ್ಕಾಟ್ ಲ್ಯಾಂಡ್ ಗೆ ಭೇಟಿ ನೀಡಬೇಕಾಗುತ್ತದೆ.
ವಿಮಾನಗಳು ನಿಗದಿತ ಸಮಯಕ್ಕೆ ಲಭ್ಯವಿಲ್ಲದಿದ್ದಾಗ, ಅಥವಾ ಅಲ್ಲಿ ಬರದೇ ಇದ್ದಾಗ, ಸಮುದ್ರದ ಉಬ್ಬರ ಇಳಿತ ಇದ್ದಾಗ ಈ ರನ್‌ವೇ ಸಾರ್ವಜನಿಕರಿಗೆ ತೆರೆದಿರುತ್ತದೆ. ಜನರು ಅಲ್ಲಿ ಸುತ್ತಲೂ ನಡೆದುಕೊಂಡು ಹೋಗಬಹುದು ಮತ್ತು ಸಮುದ್ರದ ಸುಂದರ ನೋಟಗಳನ್ನು ಆನಂದಿಸಬಹುದು. ಸಮುದ್ರದ ಅಲೆಗಳ ಜೊತೆ ಆಟ ಆಡಲೂ ಬಹುದು.
56
ಭೇಟಿ ನೀಡಲು ಉತ್ತಮ ಸ್ಥಳ
ಬಾರ್ರಾ ದ್ವೀಪವು ಬಿಳಿ ಮರಳು ಮತ್ತು ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಐತಿಹಾಸಿಕ ಕಿಸಿಮುಲ್ ಕೋಟೆ ಮತ್ತು ರುಚಿಕರವಾದ ಸ್ಥಳೀಯ ಸಮುದ್ರಾಹಾರವನ್ನು ಆನಂದಿಸಬಹುದು. ಈ ಪ್ರದೇಶವು ಯಾವುದೋ ಪೈಂಟಿಂಗ್ ನಂತೆ ಭಾಸವಾಗುತ್ತದೆ. ನಿಮಗೆ ಟ್ರಾಫಿಕ್ ನಿಂದ ದೂರವಾಗಿರುವ ಸುಂದರ ಸಮುದ್ರ ತೀರಕ್ಕೆ ತೆರಳಬೇಕು ಅಂದ್ರೆ, ಖಂಡಿತವಾಗಿಯೂ ಇಲ್ಲಿಗೆ ಭೇಟಿ ನೀಡಬಹುದು.
66
ಈ ಮಾಂತ್ರಿಕ ದ್ವೀಪವನ್ನು ತಲುಪುವುದು ಹೇಗೆ?
ಈ ಮ್ಯಾಜಿಕಲ್ ಬಾರ್ರಾ ದ್ವೀಪಕ್ಕೆ ಮೇ ಮತ್ತು ಸೆಪ್ಟೆಂಬರ್ ನಡುವಿನ ಸಮಯ ಭೇಟಿ ನೀಡಲು ಉತ್ತಮ ಸಮಯವಾಗಿದೆ. ನೀವು ಗ್ಲ್ಯಾಸ್ಗೋದಿಂದ ವಿಮಾನದಲ್ಲಿ ಹೋಗಿ ಈ ಬೀಚ್ ರನ್‌ವೇಯಲ್ಲಿ ನೇರವಾಗಿ ಇಳಿಯಬಹುದು, ಅಥವಾ ನೀವು ದೋಣಿ ಮೂಲಕ ಇಲ್ಲಿಗೆ ತಲುಪಬಹುದು. ಆಯ್ಕೆ ನಿಮ್ಮದು. ಆದರೆ ಒಂದು ವಿಶಿಷ್ಟ ಅನುಭವ ಪಡೆಯಲು ಖಂಡಿತವಾಗಿಯೂ ವಿಮಾನದಲ್ಲಿ ಸಂಚಾರ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.