ಭೂಮಿ -ಆಕಾಶ ಸಂಗಮವಾಗುವ ಇಂತಹ ಅದ್ಭುತ ತಾಣ ಎಲ್ಲೂ ನೋಡಿರೋಲ್ಲ!

First Published | Jan 6, 2024, 6:02 PM IST

ಸಮುದ್ರ ತೀರಕ್ಕೆ ಹೋದಾಗ ಸಮುದ್ರ ಆಚೆ ನೋಡಿದಾಗ ಆಕಾಶ, ಭೂಮಿ ಒಂದಾಗೋದನ್ನು ನೋಡಿ ವಾವ್ ಎಂದಿರುತ್ತೀರಿ. ಆದರೆ ನೀವೊಮ್ಮೆ ಸಲಾರ್ ಡಿ ಉಯುನಿಗೆ ಹೋದ್ರೆ, ಇಲ್ಲಿನ ಆಕಾಶ ಭೂಮಿಯ ಅದ್ಭುತ ಸಂಗಮ ನೋಡಿ ಬೆರಗಾಗೋದು ಗ್ಯಾರಂಟಿ. 
 

ಸಲಾರ್ ಡಿ ಉಯುನಿ (Salar De Uyuni) ವಿಶ್ವದ ಅತಿದೊಡ್ಡ ಉಪ್ಪು ತುಂಬಿರುವ ಮೈದಾನವಾಗಿದ್ದು, 10,000 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ. ಇದನ್ನು ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ (Natural Mirror) ಎಂದೂ ಕರೆಯಲಾಗುತ್ತದೆ, ಏಕೆಂದರೆ ಮಳೆಗಾಲದ ದಿನಗಳಲ್ಲಿ ಇಲ್ಲಿ ನೀರು ತುಂಬಿದಾಗ, ಭೂಮಿಯು ಕನ್ನಡಿಯಂತೆ ಕಾಣುತ್ತದೆ, ಇದರಲ್ಲಿ ಆಕಾಶದ ಪ್ರತಿಬಿಂಬವನ್ನು ಕಾಣಬಹುದು.
 

ಸಲಾರ್ ಡಿ ಉಯುನಿಯನ್ನು ವಿಶ್ವದ ಅದ್ಭುತ ಎಂದು ಕರೆಯಲಾಗುತ್ತದೆ, ಏಕೆಂದರೆ ಇಲ್ಲಿ ಭೂಮಿ ಕನ್ನಡಿಯಂತೆ ಕಾಣುತ್ತದೆ, ಇದರಲ್ಲಿ ಆಕಾಶದ ಪ್ರತಿಬಿಂಬವನ್ನು ಕಾಣಬಹುದು. ಅದನ್ನು ನೋಡಿದಾಗ, ಆಕಾಶ ಮತ್ತು ಭೂಮಿ ಇಲ್ಲಿಯೇ ಸಂಗಮವಾಗುತ್ತಿದೆಯೇ ಎಂಬಂತೆ ತೋರುತ್ತದೆ. ಈ ಸ್ಥಳವು ಅದ್ಭುತ ಸೌಂದರ್ಯಕ್ಕೆ ಪ್ರಪಂಚದಾದ್ಯಂತ ಪ್ರಸಿದ್ಧ. ಇದನ್ನು ನೋಡಿ ನೀವು ಶಾಕ್ ಆಗೋದು ಖಚಿತ. 
 

Tap to resize

ಭಾರತದಲ್ಲಿ ರಣ್ ಆಫ್ ಕಛ್ ಇದೆಯಲ್ವಾ? ಅದೇ ರೀತಿ ಸಲಾರ್ ಡಿ ಉಯುನಿಯಲ್ಲಿ ಸಾವಿರಾರು ಕಿಲೋಮೀಟರ್ ಗಳವರೆಗೂ ಬರಿ ಬಿಳಿ ಉಪ್ಪಿನ ಭೂಮಿಯನ್ನೇ ಕಾಣಬಹುದು. ಮಳೆ ಬಂದಾಗ ಕನ್ನಡಿಯಂತಾಗುವ ಈ ತಾಣ ಪ್ರವಾಸಿಗರನ್ನು (travel place) ಕೈ ಬೀಸಿ ಕರೆಯುತ್ತದೆ. 
 

ಬೊಲಿವಿಯಾದ (Bolivia) ಸಲಾರ್ ಡಿ ಉಯುನಿ ಅತ್ಯಂತ ಸುಂದರವಾದ ದೃಶ್ಯಾವಳಿಗಳಿಗೆ ಹೆಸರುವಾಸಿ. ಇದು ವಿಶ್ವದ ಅತಿದೊಡ್ಡ ಉಪ್ಪು ಮೈದಾನವಾಗಿದ್ದು, ಬಹಳ ಹಿಂದೆಯೇ ಆವಿಯಾದ ಸರೋವರಗಳಿಂದ ಬಿಡುಗಡೆಯಾದ ಉಪ್ಪಿನ ಭೂಮಿ ಇದಾಗಿದೆ
 

ಉಪ್ಪಿನ ದಪ್ಪ ಪದರವು ಇಲ್ಲಿನ ದಿಗಂತದವರೆಗೆ ವಿಸ್ತರಿಸಿದಂತೆ ಕಾಣುತ್ತದೆ. ಇಲ್ಲಿ ನೆಲವು ಉಪ್ಪಿನ ಗಟ್ಟಿಯಾದ ಪದರಗಳಿಂದ ಆವೃತವಾಗಿದೆ. ವರ್ಷದ ಕೆಲವು ಸಮಯಗಳಲ್ಲಿ, ಸುತ್ತಮುತ್ತಲಿನ ಸರೋವರಗಳು ಉಕ್ಕಿ ಹರಿದಾಗ, ಈ ಸ್ಥಳಕ್ಕೂ ನೀರು ಬಂದು ಸೇರುತ್ತದೆ. ಆ ಸಂದರ್ಭದಲ್ಲಿ ಈ ಬಿಳಿ ಉಪ್ಪಿನ ಭೂಮಿಯಲ್ಲಿ ಆಕಾಶದ ಪ್ರತಿಬಿಂಬವನ್ನು ಕಾಣಬಹುದು.  
 

ಇಲ್ಲಿರುವ ಫೋಟೋಗಳನ್ನು ನೋಡಿದಾಗ ನಿಮಗೂ ಒಂದು ಬಾರಿಯಾದರೂ ಇಂತಹ ಅದ್ಭುತ ತಾಣಕ್ಕೆ ಭೇಟಿ ನೀಡಲೇಬೇಕು ಎಂದು ಅನಿಸೋದಿಲ್ಲವೇ? ಇದರಲ್ಲಿ ಬಿಳಿ ಮೋಡಗಳಿಂದ ನೀಲಿ ಆಕಾಶದ ಪ್ರತಿಬಿಂಬ, ಸಂಜೆಯ ರಂಗಿನ ಪ್ರತಿಬಿಂಬ, ರಾತ್ರಿಯ ನಕ್ಷತ್ರಗಳ ಪ್ರತಿಬಿಂಬ ಕೆಳಗಿನ ನೀರಿನ ಮೇಲೆ ಸ್ಪಷ್ಟವಾಗಿ ರೂಪುಗೊಳ್ಳುವುದನ್ನು ಕಾಣಬಹುದು. ಇದು ನೀವು ಹಿಂದೆಂದೂ ನೋಡದ ಅದ್ಭುತ ಲೋಕವನ್ನು ಸೃಷ್ಟಿಸುತ್ತದೆ. . 
 

ಸಲಾರ್ ಡಿ ಉಯುನಿ ಕುರಿತು ಇಂಟ್ರೆಸ್ಟಿಂಗ್ ವಿಷಯಗಳು
ವಿಶ್ವದ ಅತಿದೊಡ್ಡ ಉಪ್ಪು ಮೈದಾನ: ಸಲಾರ್ ಡಿ ಉಯುನಿಯನ್ನು ಸಲಾರ್ ಡಿ ತುನುಪಾ ಎಂದೂ ಕರೆಯಲಾಗುತ್ತದೆ. ಈ ಸ್ಥಳವು ವಿಶ್ವದ ಅತಿದೊಡ್ಡ ಉಪ್ಪು ಗಣಿಯಾಗಿದ್ದು (salt mine), ಇದು 10,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ಬೊಲಿವಿಯಾದ ಡೇನಿಯಲ್ ಕ್ಯಾಂಪೋಸ್ ಪ್ರಾಂತ್ಯದಲ್ಲಿದೆ.

ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ: ಮಳೆಗಾಲದಲ್ಲಿ, ಉಪ್ಪು ಬಯಲಿನ ಮೇಲ್ಮೈಯಲ್ಲಿ ನೀರು ಸಂಗ್ರಹವಾಗುತ್ತದೆ, ಇದು ದೈತ್ಯ ಕನ್ನಡಿಯನ್ನು ರೂಪಿಸುತ್ತದೆ, ಇದು ಆಕಾಶ ಮತ್ತು ಮೋಡಗಳನ್ನು ಪ್ರತಿಬಿಂಬಿಸುತ್ತದೆ. ಇದನ್ನು ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ (natural mirror)ಎಂದು ಕರೆಯಲಾಗುತ್ತದೆ. ಇದನ್ನು 'ಆಕಾಶದ ಕನ್ನಡಿ' ಎಂದೂ ಕರೆಯುತ್ತಾರೆ.
 

Latest Videos

click me!