ಮಕ್ಕಳ ಹೊಂದುವುದು, ಬೆಳೆಸುವುದು ಸುಲಭವಲ್ಲ. ಆದರೆ ಒಮ್ಮೆ ನೀವು ಜಪಾನ್‌ನ ನಾಗಿ ನಗರಕ್ಕೆ ಹೋದರೆ, ಮಗು ಮಾಡೋದು, ಬೆಳೆಸೋದು ಎಲ್ಲವೂ ಸುಲಭವಾಗುತ್ತೆ. ಇದು ವಿಶ್ವದ ಒಂದು ವಿಶಿಷ್ಟ ನಗರವಾಗಿದ್ದು, ಅಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಮಕ್ಕಳನ್ನು ಹೊಂದಲು ಮತ್ತು ಮಕ್ಕಳನ್ನು ಬೆಳೆಸಲು ಕಲಿಸಲಾಗುತ್ತಿದೆ. ಹೀಗೆ ಕಲಿಸೋದಕ್ಕೆ ಅವರಿಂದ ಫೀಸ್ ಕೂಡ ತೆಗೆದುಕೊಳ್ಳಲಾಗುತ್ತದೆ. ಮೊದಲ ಮಗುವಿಗೆ $ 420, ಎರಡನೇ ಮಗುವಿಗೆ $ 210. ಇದಕ್ಕಿಂತ ಹೆಚ್ಚು ಮಕ್ಕಳಿದ್ದರೆ, ಹಣವಿಲ್ಲ.
ಇಲ್ಲಿ ಪ್ರತಿಯೊಬ್ಬ ಮಹಿಳೆಯೂ ತಾಯಿ. ಅವರ ಬಳ ಸಾಕಷ್ಟು ಮಕ್ಕಳು ಬರುತ್ತಾರೆ, ಅವಳು ಎಲ್ಲರ ಮಕ್ಕಳನ್ನು ತಾಯಿಯಂತೆ ನೋಡಿಕೊಳ್ಳುತ್ತಾಳೆ. ಯಾರಾದರೂ ತಮ್ಮ ಮಕ್ಕಳನ್ನು ಇಲ್ಲಿನ ಶಾಲೆಗೆ ದಾಖಲಿಸಿದರೆ, ಮಕ್ಕಳಿಗೆ ಲಕ್ಷ ರೂಪಾಯಿಗಳ ಸ್ಟೈಫಂಡ್ ಕೂಡ ನೀಡಲಾಗುತ್ತದೆ. ಇದು ಜನನ ಪ್ರಮಾಣವನ್ನು ಹೆಚ್ಚಿಸಲು ಮಾಡಿರುವಂತಹ ಒಂದು ಕೆಲಸ. ಈ ಗ್ರಾಮವು ಪ್ರಪಂಚದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಇಲ್ಲಿನ ವಿಶಿಷ್ಟತೆಯಿಂದಾಗಿಯೇ ಇಲ್ಲಿಗೆ ಹಲವಾರು ಪೋಷಕರು ಬೇರೆ ಬೇರೆ ಕಡೆಗಳಿಂದ ಬರುತ್ತಾರೆ.
ಜನಸಂಖ್ಯೆಯನ್ನು (increase birth rate) ಹೆಚ್ಚಿಸಲು ಎಲ್ಲಾ ರೀತಿಯ ಉಡುಗೊರೆಗಳನ್ನು ನೀಡುವ ದೇಶಗಳಲ್ಲಿ ಜಪಾನ್ ಕೂಡ ಒಂದು. ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಲು ಯುವಕರಿಗೆ ಮನವಿ ಮಾಡಲಾಗುತ್ತಿದೆ. ಏಕೆಂದರೆ ಈ ದೇಶದ ಜನಸಂಖ್ಯೆಯ ಸುಮಾರು 30 ಪ್ರತಿಶತದಷ್ಟು ಜನರು ವಯಸ್ಸಾದವರಾಗಿದ್ದಾರೆ. 2% ರಷ್ಟು ಜನರು 100 ವರ್ಷ ದಾಟಿದ್ದಾರೆ. ಹಾಗಾಗಿ ನಾಗಿ ನಗರದಲ್ಲಿ ಈ ಹೊಸ ಕ್ರಮವನ್ನು ಅಳವಡಿಸಲಾಗಿದೆ.
ನಾಗಿ ನಗರದಲ್ಲಿನ (Nagi Town) ಜನನ ಪ್ರಮಾಣವು ಜಪಾನ್ ನಲ್ಲಿ ಅತ್ಯಧಿಕವಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, 6,000 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ನಗರದ ಪೋಷಕರು ಮಕ್ಕಳನ್ನು ಹೊಂದುವ ತಂತ್ರಗಳನ್ನು ಕಲಿಯಲಿದ್ದಾರೆ. ಅವುಗಳನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಅವರು ಮಾಹಿತಿಯನ್ನು ಪಡೆಯುತ್ತಿದ್ದಾರೆ.
ನಾಗಿ ನಗರದಲ್ಲಿ ಒಂದು ಸಮಿತಿ ಇದೆ, ಅದು ಮಕ್ಕಳನ್ನು ನೋಡಿಕೊಳ್ಳುತ್ತದೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತದೆ, ಇದರಿಂದ ಅವರ ಮನಸ್ಸು ಮತ್ತು ದೇಹವು ಸರಿಯಾಗಿ ಅಭಿವೃದ್ಧಿ ಹೊಂದಬಹುದು. ಈ ನಗರದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆಯರೂ ತಾಯಿಯಾಗಿ ಕೆಲಸ ಮಾಡುತ್ತಾರೆ ಮತ್ತು ಜನರು ಅವರ ಮೇಲೆ ಎಷ್ಟು ನಂಬಿಕೆ ಹೊಂದಿದ್ದಾರೆ ಎಂದರೆ ದೇಶದ ದೂರದ ಪ್ರದೇಶಗಳಿಂದ ಜನರು ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸಲು ಕರೆತರುತ್ತಾರೆ.
ನಾಗಿ ಈ ಹಿಂದೆ ಹೀಗಿರಲಿಲ್ಲ
ನಾಗಿ ಹಿಂದೆ ಹೀಗೆ ಇರಲಿಲ್ಲ. ಕೇವಲ 5 ವರ್ಷಗಳ ಹಿಂದೆ, ಜಪಾನ್ ನ ಇತರ ನಗರಗಳಂತೆ ಇಲ್ಲಿ ಜನನ ಪ್ರಮಾಣ ಬಹಳ ಕಡಿಮೆ ಇತ್ತು. ಆದರೆ ಈ ಮಧ್ಯೆ, ಸರ್ಕಾರವು ಒಂದು ಪ್ರಮುಖ ಘೋಷಣೆಯನ್ನು ಮಾಡಿತು. ಮಕ್ಕಳನ್ನು ಹೊಂದುವ ದಂಪತಿಗಳಿಗೆ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ಬಹುಮಾನವಾಗಿ ನೀಡಲು ಪ್ರಾರಂಭಿಸಿತು.
ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಪ್ರತಿ ಮಗುವಿನ ಜನನದೊಂದಿಗೆ ಬಹುಮಾನದ ಮೊತ್ತವು ಹೆಚ್ಚಾಗುತ್ತದೆ. ನೀವು ಮೊದಲ ಮಗುವನ್ನು ಹೊಂದಿದ್ದರೆ, 60 ಸಾವಿರ ರೂಪಾಯಿ ಮತ್ತು 5 ನೇ ಮಗುವನ್ನು ಹೊಂದಿದ್ದರೆ, 2.5 ಲಕ್ಷ ರೂ. ಆ ಬಳಿಕ ಪರಿಸ್ಥಿತಿ ಬದಲಾಯಿತು. ಬಳಿಕ ಜಪಾನಿನಲ್ಲೇ ಅತಿ ಹೆಚ್ಚು ಜನನ ಪ್ರಮಾಣ ಇಲ್ಲಿ ಕಂಡು ಬಂದಿತು. ಅದರ ನಂತರ, ಮಕ್ಕಳನ್ನು ಹೊಂದುವ ಮತ್ತು ಅವರನ್ನು ಬೆಳೆಸುವ ತಂತ್ರಗಳನ್ನು ಕಲಿಯಲು ಜನರು ಇಲ್ಲಿಗೆ ಬರಲು ಪ್ರಾರಂಭಿಸಿದರು.
ಜನರು ಮಕ್ಕಳನ್ನು ಇಲ್ಲೆ ಶಾಲೆಗೆ ಸಹ ದಾಖಲಿಸುತ್ತಾರೆ
ಜಪಾನಿನ ವಿವಿಧ ಭಾಗದ ಜನರು ತಮ್ಮ ಮಕ್ಕಳನ್ನು ಇಲ್ಲಿಯೇ ಶಾಲೆಗೆ ದಾಖಲಿಸುತ್ತಾರೆ. ಈ ಮಕ್ಕಳಿಗೆ ವಾರ್ಷಿಕವಾಗಿ 80 ಸಾವಿರದಿಂದ 1.5 ಲಕ್ಷ ರೂಪಾಯಿಗಳವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಇದು ಪ್ರತಿ ಮುಂದಿನ ಮಗುವಿನ ಜನನದೊಂದಿಗೆ ದ್ವಿಗುಣಗೊಳ್ಳುತ್ತದೆ. ಅಂದರೆ, ಮೊದಲ ಮಗುವಿನ ಜನನದ ಸಮಯದಲ್ಲಿ $ 879 ಪಡೆದರೆ, ಮೂರನೇ ಮಗುವಿನ ಜನನದ ನಂತರ 3,518 ಪಾವತಿಸಲಾಗುತ್ತದೆ. ಇದಲ್ಲದೆ, ಮಕ್ಕಳಿಗೆ ವಸತಿ ಮತ್ತು ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ.