ಚಳಿಗಾಲದಲ್ಲಿ ಬೇಸಿಗೆಯ ಬಿಸಿಯನ್ನು ಎಂಜಾಯ್ ಮಾಡಲು ಈ ತಾಣಗಳು ಬೆಸ್ಟ್

First Published | Jan 13, 2023, 2:52 PM IST

ಚಳಿ, ಚಳಿ… ಅಬ್ಬಾ ಎಂಥಾ ಚಳಿಯಪ್ಪಾ ಇದು ಎಂದು ನಿಮಗೆ ಅನಿಸಿರಬಹುದು ಅಲ್ವಾ? ಇಂತಹ ಚಳಿಯನ್ನು ತಪ್ಪಿಸಿ, ಬೆಚ್ಚಗಿನ ವಾತಾವರಣದಲ್ಲಿ ಸ್ವಲ್ಪ ದಿನವಾದರೂ ಎಂಜಾಯ್ ಮಾಡಲು ಬಯಸಿದ್ರೆ ನೀವು ಭಾರತದ ಈ ಸುಂದರ ತಾಣಗಳಿಗೆ ಭೇಟಿ ನೀಡಬಹುದು. ಯಾವೆಲ್ಲಾ ತಾಣಗಳಿಗೆ ಭೇಟಿ ನೀಡಬಹುದು ಅನ್ನೋದನ್ನು ನೋಡೋಣ.
 

ಚಳಿಗಾಲ ತುಂಬಾ ಆಹ್ಲಾದಕರವಾಗಿರುತ್ತದೆ. ಆದರೆ ತೀವ್ರವಾದ ಶೀತವು ಬೀಳಲು ಪ್ರಾರಂಭಿಸಿದಾಗ, ಈ ಚಳಿಗಾಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜನರು ಸ್ವಲ್ಪ ಬೆಚ್ಚಗಿನ ವಾತಾವರಣವಿರುವ ಸ್ಥಳವನ್ನು ಹುಡುಕುತ್ತಾರೆ. ಅಲ್ಲಿ ಆರಾಮವಾಗಿ ಎಂಜಾಯ್ ಮಾಡಬಹುದು. ನೀವು ಚಳಿಗಾಲದಲ್ಲಿ ಹಿಮಾವೃತ ಕಣಿವೆಗಳಲ್ಲಿ (snow valley) ಎಂಜಾಯ್ ಮಾಡಲು ಬಯಸದಿದ್ದರೆ ಮತ್ತು ಚಳಿಯನ್ನು ತಪ್ಪಿಸಲು ಮತ್ತು ಬಿಸಿಯಾದ ಸ್ಥಳಕ್ಕೆ ಹೋಗಲು ಬಯಸಿದರೆ, ನೀವು ನಿಮ್ಮ ರಜಾದಿನಗಳನ್ನು ಪ್ಲ್ಯಾನ್ ಮಾಡಬಹುದಾದ ಅಂತಹ ಸ್ಥಳಗಳನ್ನು ನಾವು ನಿಮಗೆ ಹೇಳುತ್ತೇವೆ…

ಪಾಂಡಿಚೇರಿ (Pndicherry)

ಪಾಂಡಿಚೇರಿ ಚಳಿಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳ. ಇಲ್ಲಿನ ಹವಾಮಾನ ತುಂಬಾ ಬಿಸಿಯೂ ಅಲ್ಲ ಅಥವಾ ತುಂಬಾ ತಂಪಾಗಿಲ್ಲ. ಇಲ್ಲಿ ನೀವು ಸ್ಕೂಬಾ ಡೈವಿಂಗ್ ನಂತಹ ಅನೇಕ ಸಾಹಸ ಜಲ ಕ್ರೀಡೆಗಳನ್ನು ಸಹ ಆಡಬಹುದು. ಇದರೊಂದಿಗೆ, ನೀವು ಸುಂದರವಾದ ಪರಿಸರದಲ್ಲಿ ಸಹ ಎಂಜಾಯ್ ಮಾಡಬಹುದು.

Tap to resize

ಮುಂಬೈ (Mumbai)

ಕಡಲ ತೀರದಲ್ಲಿ ನೆಲೆಗೊಂಡಿರುವುದರಿಂದ, ಮುಂಬೈನ ತಾಪಮಾನವು ಯಾವಾಗಲೂ ಬಿಸಿಯಾಗಿರುತ್ತದೆ. ಇಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿರುತ್ತೆ. ತಾಜ್ ಅರಮನೆ, ಗೇಟ್ ವೇ ಆಫ್ ಇಂಡಿಯಾ ಛತ್ರಪತಿ ಶಿವಾಜಿ ಟರ್ಮಿನಸ್ ನಂತಹ ಸ್ಥಳಗಳು ಇಲ್ಲಿನ ಜನರ ಆಕರ್ಷಣೆಯ ಕೇಂದ್ರವಾಗಿದೆ. ಜುಹು, ಚೌಪಾಟಿ, ಮರೈನ್ ವಾಕ್ ಮತ್ತು ಇಲ್ಲಿನ ಆಹಾರವು ಜನರನ್ನು ಸಾಕಷ್ಟು ಆಕರ್ಷಿಸುತ್ತದೆ.

ಜೈಸಲ್ಮೇರ್ (Jaisalmer)

ರಾಜಸ್ಥಾನದ ಸೌಂದರ್ಯವು ಎಷ್ಟೊಂದು ಆಕರ್ಷಕ ಅನ್ನೋದು ನಿಮಗೆ ಗೊತ್ತಿದೆ. ಚಳಿಗಾಲದಲ್ಲಿ ನೀವು ಭವ್ಯವಾದ ಕೋಟೆಗಳು, ಭವ್ಯವಾದ ಮಹಲುಗಳು, ವರ್ಣರಂಜಿತ ಮಾರುಕಟ್ಟೆಗಳು, ಶಾಂತ ಸರೋವರಗಳು ಮತ್ತು ಬೃಹತ್ ಮರುಭೂಮಿಗಳನ್ನು ನೋಡಲು ಬಯಸಿದರೆ, ನೀವು ಜೈಸಲ್ಮೇರ್ ಗೆ ಭೇಟಿ ನೀಡಬಹುದು. ಜೀಪ್ ಸಫಾರಿ, ಡ್ಯೂನ್ ಮತ್ತು ಒಂಟೆ ಸಫಾರಿ ಇಲ್ಲಿ ಬಹಳ ಜನಪ್ರಿಯವಾಗಿವೆ.

ರಣ್, ಕಛ್ (Rann, Kuch)

ಚಳಿಗಾಲದಲ್ಲಿ ಕಛ್‌ಗೆ ಭೇಟಿ ನೀಡುವುದು ಸಹ ಅತ್ಯಂತ ವಿನೋದಮಯವಾಗಿರುತ್ತೆ. ಇಲ್ಲಿನ ಪರಿಸರ ನೋಡಿದ್ರೆ ಹೇಗಿರುತ್ತೆ ಅಂದ್ರೆ, ಹಿಮದಿಂದ ಆವೃತವಾಗಿರುವಂತಿರುತ್ತೆ, ಆದರೆ ಇಲ್ಲಿನ ತಾಪಮಾನವೂ ಉತ್ತಮವಾಗಿದೆ. ಡಿಸೆಂಬರ್ ತಿಂಗಳಿನಿಂದ, 3 ತಿಂಗಳ ವಾರ್ಷಿಕ ರನ್ ಉತ್ಸವ್ ಸಹ ಇಲ್ಲಿ ನಡೆಯುತ್ತೆ. ಅಲ್ಲಿ ನೀವು ಒಂಟೆ ಮೇಲೆ ಕುಳಿತು ಬಿಳಿ ಮರುಭೂಮಿಯ ನೋಟವನ್ನು ನೋಡಬಹುದು. ನೀವು ವೈಲ್ಡ್ ಏಸ್ ಅಭಯಾರಣ್ಯವನ್ನು ಸಹ ನೋಡಬಹುದು.

ಗೋವಾ (Goa)

ಗೋವಾವು ಒಂದು ಹಾಟ್ ತಾಣ. ಅಲ್ಲಿ ಹೆಚ್ಚಿನ ಜನರು ಹೋಗಲು ಇಷ್ಟಪಡುತ್ತಾರೆ. ಸಮುದ್ರ ತೀರದಲ್ಲಿ ನೆಲೆಗೊಂಡಿರುವುದರಿಂದ, ಇಲ್ಲಿನ ತಾಪಮಾನವು ವರ್ಷವಿಡೀ ಬಿಸಿಯಾಗಿರುತ್ತದೆ .ಹಾಗಾಗಿ, ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಗೋವಾಕ್ಕೆ ಹೋಗಬಹುದು.

ಮಂಗಳೂರು (Mangalore)

ಮಂಗಳೂರು ಸಹ ಕಡಲ ತಟದಲ್ಲಿರುವ ಊರಾಗಿದೆ. ಇಲ್ಲಿ ನೀವು ನಿಮ್ಮ ರಜೆಯನ್ನು ಎಂಜಾಯ್ ಮಾಡಲು ಬರಬಹುದು. ಇಲ್ಲಿ ಚಳಿಯಂತೂ ಇಲ್ಲ, ಆದರೆ ಸೆಕೆಯನ್ನು ನೀವು ಸಹಿಸಿಕೊಳ್ಳಬೇಕು ಅಷ್ಟೆ. ಇಲ್ಲಿನ ಬೀಚ್ ಗಳಲ್ಲಿ ನೀವು ಎಂಜಾಯ್ ಮಾಡಬಹುದು, ದೇಗುಲಗಳಿಗೆ ಭೇಟಿ ನೀಡಬಹುದು. ಜೊತೆಗೆ ಇಲ್ಲಿನ ಬೆಸ್ಟ್ ಸೀ ಫುಡ್ ಗಳನ್ನು ತಿನ್ನುತ್ತಾ ನೀವು ಎಂಜಾಯ್ ಮಾಡಬಹುದು.

Latest Videos

click me!