ಟಾಯ್ಲೆಟ್ ಮಾಡಿ ಫ್ಲಶ್ ಮಾಡೋ ಹಾಗಿಲ್ಲ, ಜಗತ್ತನ್ನು ಬೆರಗುಗೊಳಿಸುವ ವಿಚಿತ್ರ ಕಾನೂನುಗಳು

First Published Jan 12, 2023, 4:54 PM IST

ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಅನೇಕ ನಿಯಮಗಳಿವೆ, ಕಾನೂನುಗಳಿವೆ. ಎಲ್ಲವೂ ವಿಭಿನ್ನವಾಗಿರುತ್ತೆ, ಆ ದೇಶದ ಆಚರಣೆಗೆ ತಕ್ಕಂತೆ ಇರುತ್ತದೆ. ಆದರೆ ಕೆಲವೊಂದು ಕಾನೂನುಗಳ ಬಗ್ಗೆ ತಿಳಿದ್ರೆ ಅಯ್ಯೋ ಇದೆಂಥಾ ಕಾನೂನು, ಹೀಗೂ ಕಾನೂನು ಇರುತ್ತಾ? ಇದನ್ನೆಲ್ಲಾ ಜನ ಫಾಲೋ ಮಾಡ್ತಾರ ಅಂತ ನಿಮಗೆ ಅನಿಸೋದು ಖಚಿತಾ. ಅಂತಹ ಬೆರಗುಗೊಳಿಸುವ ವಿಚಿತ್ರ ಕಾನೂನುಗಳ (weird laws around the world) ಬಗ್ಗೆ ತಿಳಿಯೋಣ.

ಬೌದ್ಧ ಪ್ರತಿಮೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಅಪರಾಧ (Selfie with Buddha statue)
ಭಾರತದ ನೆರೆಯ ದೇಶವಾದ ಶ್ರೀಲಂಕಾದಲ್ಲಿ, ಬೌದ್ಧ ಪ್ರತಿಮೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಮತ್ತು ಅದನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಕಾನೂನುಬಾಹಿರ. ನೀವು ಶ್ರೀಲಂಕಾಕ್ಕೆ ಹೋದ್ರೆ ಈ ತಪ್ಪನ್ನು ಯಾವತ್ತೂ ಮಾಡ್ಲೇ ಬೇಡಿ.

ಟಾಯ್ಲೆಟ್ ಫ್ಲಶಿಂಗ್ ಒಂದು ಅಪರಾಧ (flushing toilet)

ಏನಪ್ಪಾ ಇದು ಟಾಯ್ಲೆಟ್ ಫ್ಲಶ್ ಮಾಡೋದು ಅಪರಾಧಾನ? ಅಂತಾ ಕೇಳ್ಬೇಡಿ. ಹೌದು, ಯುರೋಪಿನ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನಲ್ಲಿ, ರಾತ್ರಿ ಸುಮಾರು ಹತ್ತು ಗಂಟೆಯ ನಂತರ ಟಾಯ್ಲೆಟ್ ಫ್ಲಶ್ ಮಾಡುವುದು ಕಾನೂನುಬಾಹಿರ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಸರ್ಕಾರವು ಅದನ್ನು ಶಬ್ದ ಮಾಲಿನ್ಯದ ವರ್ಗಕ್ಕೆ ಸೇರಿಸುತ್ತದೆ. 

ನೀಲಿ ಜೀನ್ಸ್ ಧರಿಸುವುದು ಅಪರಾಧ (wearing blue jeans)

ಇದು ಕೂಡ ಅಪರಾಧನಾ? ಏನಪ್ಪಾ ಇದು ಅಂದ್ಕೊಂಡ್ರಾ? ಉತ್ತರ ಕೊರಿಯಾದಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ನೀಲಿ ಜೀನ್ಸ್ ಧರಿಸುವುದು  ಕಾನೂನುಬಾಹಿರವಾಗಿದೆ. ನೀಲಿ ಜೀನ್ಸ್ ಧರಿಸೋದನ್ನು ನಾಗರಿಕತೆಗೆ ವಿರುದ್ಧ ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.

ಮುಖವನ್ನು ಮುಚ್ಚುವುದು ಅಪರಾಧ (covering face)

ಡೆನ್ಮಾರ್ಕ್ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಲಾಗದ ದೇಶವಾಗಿದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಯಾರಾದರೂ ಹಾಗೆ ಮಾಡಿದರೆ, ಸರ್ಕಾರವು ಅದನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತದೆ. ಇದು ಅಪರಾಧ ಎನ್ನಲಾಗುತ್ತೆ. 

ಹಣದ ಮೇಲೆ ಕಾಲಿಡುವುದು ಕಾನೂನುಬಾಹಿರ (steps on Currency)

ಭಾರತದಲ್ಲೂ ನಾವು ಹಣದ ಮೇಲೆ ಕಾಲಿಡೋದಿಲ್ಲ, ಯಾಕಂದ್ರೆ ಹಣವನ್ನು ನಾವು ಲಕ್ಷ್ಮೀ ಎಂದು ಪೂಜಿಸುತ್ತೇವೆ. ಆದರೆ ಜಗತ್ತಿನಲ್ಲಿ ಒಂದು ದೇಶ ಇದೆ, ಅಲ್ಲಿ ಹಣದ ಮೇಲೆ ಕಾಲಿಡುವುದು ಶಿಕ್ಷಾರ್ಹ ಅಪರಾಧ. ಈ ದೇಶದ ಹೆಸರು ಥೈಲ್ಯಾಂಡ್. ಇಲ್ಲಿ ನೋಟುಗಳ ಮೇಲೆ ರಾಜಮನೆತನದ ಚಿತ್ರವಿದೆ, ಆದ್ದರಿಂದ ಒಂದು ಹೆಜ್ಜೆ ಇಡುವುದು ಅಪರಾಧ. 

ಕಾರು ಚಲಾಯಿಸುವುದು ಕಾನೂನು ಬಾಹಿರ (women driving car)

ಸೌದಿ ಅರೇಬಿಯಾವು ಮಹಿಳೆಯರಿಗೆ ಕಾರುಗಳನ್ನು ಚಲಾಯಿಸುವ ಸ್ವಾತಂತ್ರ್ಯವನ್ನು ಇತ್ತೀಚಿನ ಕೆಲವು ವರ್ಷಗಳವರೆಗೂ ಹೊಂದಿಲ್ಲವಾಗಿತ್ತು. ಕೇವಲ ಪುರುಷರು ಮಾತ್ರ ಕಾರು ಚಲಾಯಿಸುವ ಹಕ್ಕನ್ನು ಹೊಂದಿದ್ದರು. ಆದಾಗ್ಯೂ, ಈ ಕಾನೂನನ್ನು ಕೆಲವು ವರ್ಷಗಳ ಹಿಂದೆ ಬದಲಾಯಿಸಲಾಗಿದೆ.         

ಮಲಗುವ ಮೊದಲು ಸ್ನಾನ ಮಾಡದೇ ಇರೋದು ಅಪರಾಧ (bathing before sleep)

ಹೌದು, ಅಮೆರಿಕದಲ್ಲಿ ಒಂದು ನಗರವಿದೆ, ಅಲ್ಲಿ ಮಲಗುವ ಮೊದಲು ಸ್ನಾನ ಮಾಡಲೇಬೇಕು ಎನ್ನುವ ರೂಲ್ಸ್ ಇದೆ. ಯಾರಾದರೂ ಸ್ನಾನ ಮಾಡದಿದ್ದರೆ, ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನಿಮಗೆ ಸ್ನಾನ ಮಾಡೋದು ಇಷ್ಟ ಇಲ್ಲಾಂದ್ರೂ ಆ ಜಾಗಕ್ಕೆ ನೀವು ಹೋದ್ರೆ ಸ್ನಾನ ಮಾಡೋದನ್ನು ಮರಿಬೇಡಿ.

ಜನ್ಮದಿನವನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ (remembering birthday)

ಪೆಸಿಫಿಕ್ ಮಹಾಸಾಗರದಲ್ಲಿ ಯಾರಾದರೂ ತನ್ನ ಕುಟುಂಬದ ಸದಸ್ಯನ ಜನ್ಮದಿನವನ್ನು ನೆನಪಿಸಿಕೊಳ್ಳದಿದ್ದರೆ, ಅದನ್ನು ಕಾನೂನು ಅಪರಾಧ ಎಂದು ಪರಿಗಣಿಸಲಾಗುತ್ತೆ. ನಿಮಗೆ ನಿಮ್ಮ ಹಾಗೂ ನಿಮ್ಮ ಮನೆಯವರ ಜನ್ಮದಿನ ಯಾವಾಗ ಎಂದು ನೆನಪಿದೆ ಅಲ್ವಾ? 

click me!