ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲೂ ನಡೆಯುತ್ತೆ ಬ್ಲ್ಯಾಕ್ ಮ್ಯಾಜಿಕ್

First Published | Jan 11, 2023, 4:45 PM IST

ಬ್ಲ್ಯಾಕ್ ಮ್ಯಾಜಿಕ್ (Black Magic) ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿಯೂ ಪ್ರಸಿದ್ಧ. ನೀವು ಹೊರಗೆ ಬೇರೆ ದೇಶಗಳಿಗೆ ಟ್ರಾವೆಲ್ ಮಾಡುತ್ತಿದ್ದರೆ, ಅಲ್ಲಿನ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ನೀವು ಗಮನ ಹರಿಸೋದು ಮುಖ್ಯ. ಇಲ್ಲಾಂದ್ರೆ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. 

ಬ್ಲ್ಯಾಕ್ ಮ್ಯಾಜಿಕ್ ಎಂಬುದು ಪ್ರತಿಯೊಬ್ಬರೂ ತಪ್ಪಿಸಲು ಬಯಸುವ ವಿಷಯ. ಜನರೂ ಅದರ ಬಗ್ಗೆ ತುಂಬಾ ಭಯಗೊಂಡಿರುತ್ತಾರೆ. ಭಾರತದಲ್ಲಿ ಬ್ಲ್ಯಾಕ್ ಮ್ಯಾಜಿಕ್ (black magic) ಮಾಡುವ ಅನೇಕ ಸ್ಥಳಗಳಿವೆ, ಇದರಲ್ಲಿ ಅಸ್ಸಾಂನ ಮಯೋಂಗ್ ಗ್ರಾಮದಲ್ಲಿ ಬ್ಲ್ಯಾಕ್ ಮ್ಯಾಜಿಕ್ ಹೆಚ್ಚಾಗಿ ಅಭ್ಯಾಸ ಮಾಡಲಾಗುತ್ತದೆ, ಇನ್ನು ವಾರಣಾಸಿಯ ಅನೇಕ ಘಾಟ್ಗಳಲ್ಲಿ ಸಹ ಬ್ಲ್ಯಾಕ್ ಮ್ಯಾಜಿಕ್ ಅಭ್ಯಾಸ ಮಾಡಲಾಗುತ್ತದೆ. 

ಆದರೆ ಇದೆಲ್ಲವೂ ನಮ್ಮ ದೇಶದಲ್ಲಿ ಮಾತ್ರ ನಡೆಯುತ್ತೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಪ್ರಪಂಚದಲ್ಲಿ ಇಂದಿಗೂ ಬ್ಲ್ಯಾಕ್ ಮ್ಯಾಜಿಕ್ ಮಾಡುವ ಅನೇಕ ದೇಶಗಳಿವೆ. ಯಾವೆಲ್ಲಾ ದೇಶಗಳಲ್ಲಿ ಬ್ಲ್ಯಾಕ್ ಮ್ಯಾಜಿಕ್ ಹೆಚ್ಚಾಗಿ ನಡೆಯುತ್ತೆ ತಿಳಿಯೋಣ.

Tap to resize

ಕ್ಯಾಟಮಾಕೊ, ಮೆಕ್ಸಿಕೊ (Catemaco, Mexico)

ಮೆಕ್ಸಿಕೋದ ಕ್ಯಾಟಮಾಕೊ ಸುಂದರವಾದ ಜಲಪಾತಗಳು ಮತ್ತು ಅದ್ಭುತ ಕಡಲತೀರಗಳಿಂದ ಸುತ್ತುವರೆದಿದೆ, ಆದರೆ ಈ ಸ್ಥಳವನ್ನು ಪ್ರಸಿದ್ಧಗೊಳಿಸುವ ಮತ್ತೊಂದು ವಿಷಯ ಮತ್ತು ಅದು ಇಲ್ಲಿನ ಬ್ಲ್ಯಾಕ್ ಮ್ಯಾಜಿಕ್ ಆಗಿದೆ. ಇದನ್ನು ಸಾಮಾನ್ಯವಾಗಿ ಪುರುಷರು ಮತ್ತು ಮಾಂತ್ರಿಕರು ಮಾಡುತ್ತಾರೆ. ಇಲ್ಲಿ ಬ್ಲ್ಯಾಕ್ ಮ್ಯಾಜಿಕ್ ವರ್ಷವಿಡೀ ಇರುತ್ತದೆ. ಇಲ್ಲಿ ದೊಡ್ಡ ಮಹಾಪೌರರು ಸಹ ಬ್ಲ್ಯಾಕ್ ಮ್ಯಾಜಿಕ್ ತಿಳಿದಿದ್ದಾರೆ.

ಹರ್ಜ್ ಪರ್ವತಗಳು, ಉತ್ತರ ಜರ್ಮನಿ (Harz Mountains, Northern Germany)

ಉತ್ತರ ಜರ್ಮನಿಯಲ್ಲಿರುವ ಮೌಂಟ್ ಹರ್ಜ್ ಪರ್ವತದ ಅತ್ಯುನ್ನತ ಶಿಖರ ಬಹಳ ಹಿಂದಿನಿಂದಲೂ ಬ್ಲ್ಯಾಕ್ ಮ್ಯಾಜಿಕ್ ಮಾಡೋದ್ರಲ್ಲಿ ಫೇಮಸ್. ಬ್ಲ್ಯಾಕ್ ಮ್ಯಾಜಿಕ್ ಪ್ರಾಚೀನ ಸ್ಯಾಕ್ಸನ್ ದೇವರು ವೊಡೆನ್ ಬಲಿದಾನದೊಂದಿಗೆ ಸಂಬಂಧ ಹೊಂದಿದೆ ಎಂದು ಕೆಲವರು ಹೇಳುತ್ತಾರೆ. ಇಷ್ಟೇ ಅಲ್ಲ, ಪ್ರತಿ ವರ್ಷ ಏಪ್ರಿಲ್ 30 ರಂದು ಮಾಟ ಮಂತ್ರ ಮಾಡುವವರು ಸಹ ಇಲ್ಲಿಗೆ ಬರುತ್ತಾರೆ ಎನ್ನಲಾಗುತ್ತೆ.

ನ್ಯೂ ಓರ್ಲಿಯನ್ಸ್, ಯುಎಸ್ಎ ( New Orleans, USA)

ನ್ಯೂ ಓರ್ಲಿಯನ್ಸ್ ಅನ್ನು ಅಮೇರಿಕದಲ್ಲಿ ಬ್ಲ್ಯಾಕ್ ಮ್ಯಾಜಿಕ್ ನ ನಿಜವಾದ ಮನೆ ಎಂದು ಪರಿಗಣಿಸಲಾಗಿದೆ. ಒಂದಾನೊಂದು ಕಾಲದಲ್ಲಿ ಮೇರಿ ಲಾವೆಯು ಎಂಬ ಒಬ್ಬ ಪಾದ್ರಿ ಇದ್ದರು, ಅವನು ಈ ಎಲ್ಲ ವಿಷಯಗಳಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದನು ಎನ್ನಲಾಗಿದೆ. ಇಂದು ನೀವು ಅವರ ಸಮಾಧಿಯನ್ನು ಅಲ್ಲಿ ನೋಡಬಹುದು, ಅದರ ಮೇಲೆ ಜನರು 'ಎಕ್ಸ್' ಎಂದು ಬರೆಯುತ್ತಾ ಹೋಗುತ್ತಾರೆ, ಹಾಗೆ ಬರೆಯುವವರು ಅವರು ಸಹಾಯ ಮಾಡುತ್ತಾರೆ ಎಂದು ಜನರು ನಂಬುತ್ತಾರೆ.

ಸಿಕಿಜೋರ್, ಫಿಲಿಪೈನ್ಸ್ (Siquijor, Philippines)

ಇಲ್ಲಿ ಬ್ಲ್ಯಾಕ್ ಮ್ಯಾಜಿಕ್ ಅನ್ನು ತೆಗೆದು ಹಾಕುವ ಸಂಪ್ರದಾಯ ಕೂಡ ಇದೆ. ಇಲ್ಲಿ ಒಂದು ವಾರದ ಉತ್ಸವ ನಡೆಯುತ್ತೆ, ಇದರಲ್ಲಿ ಪ್ರತಿ ಶುಕ್ರವಾರ ಬ್ಲ್ಯಾಕ್ ಮ್ಯಾಜಿಕ್ ಮಾಡಲಾಗುತ್ತದೆ. ಅನೇಕ ಆಚರಣೆಗಳು ಮತ್ತು ಗಿಡಮೂಲಿಕೆಗಳೊಂದಿಗೆ ಬ್ಲ್ಯಾಕ್ ಮ್ಯಾಜಿಕ್ ಅನ್ನು ಇಲ್ಲಿ ಅಭ್ಯಾಸ ಮಾಡಲಾಗುತ್ತದೆ.

ಫಿಲಿಪ್ಪೀನ್ಸ್ (Philippines)

ಮಾಟಮಂತ್ರವು ಫಿಲಿಪೈನ್ಸ್ ನಲ್ಲಿಯೂ ಸಹ ಸಾಮಾನ್ಯ. ಇದನ್ನು ಒಳ್ಳೆಯದು ಮತ್ತು ಕೆಟ್ಟದ್ದಕ್ಕಾಗಿ ಇಲ್ಲಿ ಮಾಡಲಾಗುತ್ತದೆ. ಫಿಲಿಪ್ಪೀನ್ಸ್ ನಲ್ಲಿ ಮಾಟಮಂತ್ರವನ್ನು ಕುಲಂ ಎಂದು ಕರೆಯಲಾಗುತ್ತದೆ. ಮಂಗ್ಕುಕುಲಂ ತಮ್ಮ ಶತ್ರುಗಳಿಗೆ ಹಾನಿ ಮಾಡಲು ಎಲ್ಲಾ ರೀತಿಯ ಮಾಟಮಂತ್ರವನ್ನು ನಡೆಸುತ್ತದೆ, ವೂಡೂ ಗೊಂಬೆಗಳ ಬಳಕೆಯ ಮೂಲಕ ಮಾಟಮಂತ್ರ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಜನರಿಗೆ ಸಹಾಯ ಮಾಡಲು ಇಲ್ಲಿ ಮಾಟಮಂತ್ರವನ್ನು ಸಹ ಮಾಡಲಾಗುತ್ತದೆ.

Latest Videos

click me!