ಭಾರತದ ಈ ನಗರದಲ್ಲಿ ಪ್ರತಿದಿನವೂ ಮೊಳಗುತ್ತೆ ರಾಷ್ಟ್ರ ಗೀತೆ… ಇಡೀ ನಗರವೇ 52 ಸೆಕೆಂಡು ಸ್ತಬ್ಧ

First Published | Feb 18, 2024, 7:03 PM IST

ಭಾರತದಲ್ಲಿ ಪ್ರತಿದಿನ ಬೆಳಿಗ್ಗೆ 8:30ಕ್ಕೆ ರಾಷ್ಟ್ರಗೀತೆಯನ್ನು ನುಡಿಸುವ ನಗರವೊಂದಿದೆ. ಈ ಸಮಯದಲ್ಲಿ ಆ ನಗರದ ಪ್ರತಿಯೊಬ್ಬ ವ್ಯಕ್ತಿಯು 52 ಸೆಕೆಂಡುಗಳ ಕಾಲ ನಿಲ್ಲುತ್ತಾನೆ. ಆತ ಯಾವುದೇ ಸ್ಥಳದಲ್ಲಿರಲಿ, ಏನೇ ಕೆಲಸ ಮಾಡುತ್ತಿರಲಿ ಎದ್ದು ನಿಲ್ಲುವುದನ್ನು ಮಾತ್ರ ತಪ್ಪಿಸೋದಿಲ್ಲ. 
 

ಭಾರತದಲ್ಲಿ ಅನೇಕ ನಗರಗಳಿವೆ, ಅವುಗಳು ತಮ್ಮದೇ ಆದ ಆಚರಣೆಗಳಿಂದ ಜನಪ್ರಿಯತೆ ಪಡೆಯುವ ಮೂಲಕ ಜನರನ್ನು ಆಕರ್ಷಿಸುತ್ತದೆ. ಇದೇ ರೀತಿಯ ನಗರವೊಂದು ವಿಶಿಷ್ಟ ಕಾರಣಕ್ಕಾಗಿ ದೇಶದ ಜನರ ಆಕರ್ಷಣೆಯ ಕೇಂದ್ರವಾಗಿದೆ. ನೀವು ಸಹ ಅದರ ಬಗ್ಗೆ ತಿಳಿದ್ರೆ ಅಚ್ಚರಿ ಪಡೋದು ಖಚಿತ. ವಿಶ್ವದ ಪ್ರತಿಯೊಂದು ದೇಶವು ತನ್ನದೇ ಆದ ರಾಷ್ಟ್ರಗೀತೆಯನ್ನು ಹೊಂದಿದೆ. ಭಾರತವು ಸಹ ರಾಷ್ಟ್ರಗೀತೆಯನ್ನು (national Anthem) ಹೊಂದಿದೆ,   ಭಾರತದ ರಾಷ್ಟ್ರಗೀತೆಯನ್ನು ಹಾಡುವ ಒಟ್ಟು ಅವಧಿ 52 ಸೆಕೆಂಡುಗಳು. ಅದನ್ನು ಕೇಳಿದ ತಕ್ಷಣ ನಿಮಗೂ ಗೂಸ್ ಬಂಪ್ಸ್ ಬಾರದೆ ಇರದು ಅಲ್ವಾ? 
 

ರಾಷ್ಟ್ರಗೀತೆಯ ಚರ್ಚೆ ಈಗ ಯಾಕೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು ಅಲ್ವಾ?. ವಿಷಯ ಏನಂದ್ರೆ ಭಾರತದ ಈ ನಗರದಲ್ಲಿ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಮತ್ತು ರಾಷ್ಟ್ರಗೀತೆ ಪ್ರಾರಂಭವಾದ ತಕ್ಷಣ, ನಗರದ ಪ್ರತಿಯೊಬ್ಬರೂ 52 ಸೆಕೆಂಡುಗಳ ಕಾಲ ತಾವು ಇರುವಲ್ಲಿಯೇ ನಿಲ್ಲುತ್ತಾರೆ. 
 

Tap to resize

ತೆಲಂಗಾಣದ ನಲ್ಗೊಂಡ (Nalgonda, Telangana) ಎಂದು ಕರೆಯಲ್ಪಡುವ ನಗರದಲ್ಲಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಧ್ವನಿವರ್ಧಕದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಈ ಸಮಯದಲ್ಲಿ ಇಡೀ ಪಟ್ಟಣ 52 ಸೆಕೆಂಡುಗಳ ಕಾಲ ಸ್ಥಗಿತಗೊಳ್ಳುತ್ತದೆ. ಈ ನಗರದಲ್ಲಿ, ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡುತ್ತಾರೆ. ಇದೊಂದು ದೇಶಭಕ್ತಿಯ ನಗರ ಎಂದೇ ಹೇಳಬಹುದು.
 

ನಗರದ ವಿವಿಧ ಭಾಗಗಳಲ್ಲಿ ರಾಷ್ಟ್ರಗೀತೆಗಾಗಿಯೇ 12 ದೊಡ್ಡ ಧ್ವನಿವರ್ಧಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಇದರಿಂದ ಹತ್ತಿರದಲ್ಲಿ ವಾಸಿಸುವ ಜನರು ರಾಷ್ಟ್ರಗೀತೆಯನ್ನು ಕೇಳಬಹುದು ಮತ್ತು ತಮ್ಮ ಕೆಲಸವನ್ನು ಬಿಟ್ಟು ನಿಂತು ರಾಷ್ಟ್ರಗೀತೆಯನ್ನು ಹಾಡಬಹುದು. ಮುಂದಿನ ದಿನಗಳಲ್ಲಿ ನಗರದ ಇತರ ಭಾಗಗಳಲ್ಲಿಯೂ ಧ್ವನಿವರ್ಧಕಗಳನ್ನು ಅಳವಡಿಸುವ ಯೋಜನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. 
 

ಪ್ರತಿದಿನ ರಾಷ್ಟ್ರಗೀತೆಯನ್ನು ಗೌರವಿಸುವುದು (respect national anthem)ತಮ್ಮ ಧ್ಯೇಯ ಎಂದು ಅಲ್ಲಿನ ಜನರು ಹೇಳುತ್ತಾರೆ. ಮೊದಲನೆಯದಾಗಿ, ಜಮ್ಮಿಕುಂಟ್ ಎಂಬ ಸ್ಥಳದಿಂದ ಪ್ರತಿದಿನ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತಿತ್ತು. ಇದರಿಂದ ಪ್ರೇರಿತರಾಗಿ, ನಲ್ಗೊಂಡದ 'ಜನಗಣ ಮಾನವನ್ ಉತ್ಸವ್' ಸಮಿತಿಯು ಇದನ್ನು ಪ್ರಾರಂಭಿಸಿತು. ಇದನ್ನು ಮೊದಲು ಜನವರಿ 2021 ರಲ್ಲಿ ಪರೀಕ್ಷಿಸಲಾಯಿತು. ನಗರದಲ್ಲಿ ರಾಷ್ಟ್ರಗೀತೆ ಪ್ರಸಾರವಾದಾಗ, ಸಮಿತಿಯ ಕಾರ್ಯಕರ್ತರು ನಗರದ ವಿವಿಧ ಭಾಗಗಳಲ್ಲಿ ತ್ರಿವರ್ಣ ಧ್ವಜದೊಂದಿಗೆ ನಿಲ್ಲುತ್ತಾರೆ.
 

ರಾಷ್ಟ್ರಗೀತೆಯನ್ನು ನುಡಿಸಿದಾಗ, ಅದು ನಗರವಾಸಿಗಳಿಗೆ ರೋಮಾಂಚನವನ್ನುಂಟು ಮಾಡೋದು ನಿಜ. ಸಾಮಾನ್ಯವಾಗಿ, ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವಾಗ ನಾವು ರಾಷ್ಟ್ರಗೀತೆಯನ್ನು ಹಾಡುತ್ತೇವೆ. ಆದರೆ ಇಲ್ಲಿ ಪ್ರತಿದಿನವೂ ದೇಶಪ್ರೇಮ ಮೊಳಗುತ್ತದೆ. ಜನರು ಇಲ್ಲಿ ಬಾವುಟಕ್ಕೆ ನಮಸ್ಕರಿಸುವುದನ್ನು ಕಾಣಬಹುದು.
 

ಸೋಶಿಯಲ್ ಮೀಡೀಯಾದಲ್ಲಿ (social media) ಹೆಚ್ಚಾಗಿ ಅಲ್ಲಿನ ಚಿತ್ರಗಳು ಶೇರ್ ಆಗುತ್ತಲೇ ಇರುತ್ತದೆ. ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದರೆ ಮತ್ತು ಅದರ ಬಗ್ಗೆ ತಿಳಿದಿಲ್ಲದಿದ್ದರೆ, ಖಂಡಿತವಾಗಿಯೂ ನೀವು ಶಾಖ್ ಆಗುತ್ತೀರಿ. ಆದರೆ ಈ ಸಂಪ್ರದಾಯವು ಕಳೆದ 2 ವರ್ಷಗಳಿಂದ ನಡೆಯುತ್ತಿದೆ. ಜನರು ಅದನ್ನು ಚೆನ್ನಾಗಿ ಅನುಸರಿಸುತ್ತಾರೆ. ವಾಹನಗಳು ಸಹ ರಸ್ತೆಯಲ್ಲಿ ಓಡುವುದನ್ನು ನಿಲ್ಲಿಸುತ್ತವೆ.

Latest Videos

click me!