ಭಾರತವು ಸಂಸ್ಕೃತಿ, ಕಲೆ ಮತ್ತು ವಿಜ್ಞಾನದ ಪರಂಪರೆಯಲ್ಲಿ ಎಷ್ಟು ಶ್ರೀಮಂತವಾಗಿದೆಯೆಂದರೆ, ವಿಶ್ವದ ಅನೇಕ ದೇಶಗಳ ವಿದ್ವಾಂಸರು ನಮ್ಮಿಂದ ಜ್ಞಾನವನ್ನು ಪಡೆದಿದ್ದಾರೆ. ಆದರೆ ಅನೇಕ ಬಾರಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು (western culture) ನೋಡುವಾಗ, ನಾವು ನಮ್ಮ ಪರಂಪರೆಯನ್ನು ಮರೆಯುತ್ತೇವೆ. ವಾಸ್ತುಶಿಲ್ಪಗಳು ಮತ್ತು ವಿಜ್ಞಾನದ ವಿಷಯಕ್ಕೆ ಬಂದಾಗ, ನಾವು ವಿದೇಶಗಲ್ಲಿನ ಅದ್ಭುತಗಳನ್ನೇ ಹೆಸರಿಸುತ್ತೇವೆ ಮತ್ತು ಅಲ್ಲಿನ ಕಟ್ಟಡಗಳನ್ನು ಮೆಚ್ಚುತ್ತೇವೆ. ಆದರೆ ಭೌತಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಷ್ಯ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಅಚ್ಚರಿಯ ಕಟ್ಟಗಳನ್ನು ಹೊಂದಿರುವ ಅದೆಷ್ಟೋ ತಾಣಗಳು ಭಾರತದಲ್ಲಿ ಇಂದಿಗೂ ಜನರಿಗೆ ತಿಳಿಯದೇ ಉಳಿದೆ ಎಂದು ನಿಮಗೆ ತಿಳಿದಿದೆಯೇ?