ಇಡೀ ಜಗತ್ತಿನಲ್ಲಿ ಅನೇಕ ಸ್ಥಳಗಳಿವೆ, ಅವುಗಳ ರಹಸ್ಯವನ್ನು ಇಂದಿಗೂ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.. ಇದನ್ನು ನಂಬಲು ಕಷ್ಟ. ಆದರೆ ಇದು ನಿಜ. ವಿಜ್ಞಾನಿಗಳು ಸಹ ಈ ರಹಸ್ಯಗಳನ್ನು ಪರಿಹರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇಂದು ನಾವು ಅಂತಹ ಸ್ಥಳಗಳ ಬಗ್ಗೆ ನಿಮಗೆ ಹೇಳುತ್ತೇವೆ.
ಹಾವುಗಳ ದ್ವೀಪ (Snake Island)
ಬ್ರೆಜಿಲ್ನಲ್ಲಿ ಒಂದು ದ್ವೀಪವಿದೆ, ಅದು ಸಾವಿರಾರು ವಿಷಕಾರಿ ಹಾವುಗಳಿಂದ ತುಂಬಿದೆ. ಈ ದ್ವೀಪದ ಹೆಸರು ಇಲಾಹ ಡಾ ಕ್ವಿಮಡಾ. ಇಲ್ಲಿ ಇಷ್ಟೊಂದು ಹಾವುಗಳ ಯಾಕಿವೆ? ಅನ್ನೋದನ್ನು, ಇಲ್ಲಿಯವರೆಗೆ ಯಾರಿಗೂ ತಿಳಿಯಲು ಸಾಧ್ಯವಾಗಿಲ್ಲ. ಈ ದ್ವೀಪವನ್ನು ಹಾವುಗಳ ದ್ವೀಪ ಎಂದೂ ಕರೆಯಲಾಗುತ್ತದೆ.
ಬರ್ಮುಡಾ ಟ್ರೈ ಆಂಗಲ್ (Bermuda Triangle)
ಬರ್ಮುಡಾ ಟ್ರೈ ಆಂಗಲ್ ನ್ನು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ನಿಗೂಢ ಸ್ಥಳವೆಂದು ಪರಿಗಣಿಸಲಾಗಿದೆ. ಈ ನಿಗೂಢ ಸ್ಥಳದ ಬಗ್ಗೆ ಅನೇಕ ಚಲನಚಿತ್ರಗಳನ್ನು ಸಹ ಮಾಡಲಾಗಿದೆ. ಇಲ್ಲಿ ಸಾಕಷ್ಟು ಗುರುತ್ವಾಕರ್ಷಣೆ ಇದೆ. ಅದರ ಮೇಲೆ ಏನಾದರೂ ಹಾದು ಹೋದರೆ, ಈ ತ್ರಿಕೋನವು ಅದನ್ನು ತನ್ನೊಳಗೆ ಸೆಳೆದುಕೊಳ್ಳುತ್ತೆ. ಹಲವಾರು ಅಪಘಾತಗಳು ಸಹ ಇಲ್ಲಿ ನಡೆದಿವೆ.
ಡೆಡ್ ಸಿ (Dead sea)
ಜೋರ್ಡಾನ್ ನಲ್ಲಿ ಡೆಡ್ ಸೀ ಎಂದು ಕರೆಯಲ್ಪಡುವ ಒಂದು ಸರೋವರ ಇದೆ. ಇದು ಯಾರೂ ಈಜಲು ಸಾಧ್ಯವಿಲ್ಲದ ಸರೋವರ. ಯಾಕಂದ್ರೆ ಒಬ್ಬ ವ್ಯಕ್ತಿಯು ಅದರಲ್ಲಿ ಈಜಲು ಹೋದ ತಕ್ಷಣ, ಅವನು ಸ್ವಯಂಚಾಲಿತವಾಗಿ ಮೇಲಕ್ಕೆ ಬರುತ್ತಾನೆ. ಈ ಸರೋವರ ಸತ್ತಂತೆ ನಿಶ್ಚಲವಾಗಿರೋದ್ರಿಂದ ಇದನ್ನ ಡೆಡ್ ಸಿ ಎನ್ನಲಾಗುತ್ತೆ. ಅಲ್ಲದೇ ಇಲ್ಲಿನ ನೀರು ಎಷ್ಟೊಂದು ಉಪ್ಪಾಗಿರುತ್ತೆ ಅಂದ್ರೆ ಇಲ್ಲಿ ಜಲಚರಗಳು, ಗಿಡಗಳು ಸಹ ಬೆಳೆಯೋದಿಲ್ಲ.
ಬ್ಲಡ್ ಫಾಲ್ಸ್ (Blood Falls)
ಈ ಸ್ಥಳವು ಅಂಟಾರ್ಕ್ಟಿಕಾದಲ್ಲಿದೆ. ಇಲ್ಲಿ ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ, ಈ ಕಾರಣದಿಂದಾಗಿ ಈ ಜಲಪಾತದಿಂದ ಬೀಳುವ ನೀರಿನ ಬಣ್ಣ ರಕ್ತದಂತೆ ಕೆಂಪು ಬಣ್ಣದ್ದಾಗಿದೆ. ಹಾಗಾಗಿ ಇದನ್ನ ಬ್ಲಡ್ ಫಾಲ್ಸ್ ಎನ್ನಲಾಗುತ್ತೆ.
ಚೋಲುಲಾದ ಗ್ರೇಟ್ ಪಿರಮಿಡ್ (Cholula pyramid)
ಈ ಪಿರಮಿಡ್ ಮೆಕ್ಸಿಕೊದಲ್ಲಿದೆ. ಅದರ ನಿಗೂಢ, ರಹಸ್ಯಮಯ ವಿಷಯ ಏನಂದ್ರೆ ಅದನ್ನು ಯಾರು ಮತ್ತು ಏಕೆ ನಿರ್ಮಿಸಿದರು ಅನ್ನೋದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಅದಕ್ಕೆ ಯಾವುದೇ ಇತಿಹಾಸವಿಲ್ಲ. ಇದು ಪಿರಮಿಡ್ ದೇವಾಲಯವಿದ್ದಂತೆ ಕಾಣುತ್ತೆ.
ಡೆತ್ ವ್ಯಾಲಿ (Death Valley)
ಡೆತ್ ವ್ಯಾಲಿಯನ್ನು ವಿಶ್ವದ ಅತ್ಯಂತ ಬಿಸಿಯಾದ ಸ್ಥಳವೆಂದು ಕರೆಯಲಾಗುತ್ತದೆ, ಅಲ್ಲಿ ಯಾರೂ ವಾಸಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ ಇಲ್ಲಿನ ತಾಪಮಾನವು 130 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇಲ್ಲಿ ಯಾರಾದ್ರೂ ಹೇಗೆ ವಾಸಿಸ್ತಾರೆ ಅಲ್ವಾ?
ದಾನಕಿಲ್ ಮರುಭೂಮಿ (Danakil desert)
ದಾನಕಿಲ್ ಮರುಭೂಮಿಯಲ್ಲಿ ಕನಿಷ್ಠ ತಾಪಮಾನವು ವರ್ಷಪೂರ್ತಿ 48 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 40 ಇದ್ರೇನೆ ನಮಗೆ ತಡೊಯೋಕೆ ಆಗಲ್ಲ, ಆದರೆ ಈ ಜಾಗದ ಕನಿಷ್ಠ ತಾಪಮಾನ 48 ಡಿಗ್ರಿಯಂತೆ. ಇನ್ನು ಕೆಲವೊಮ್ಮೆ ಇಲ್ಲಿನ ತಾಪಮಾನವು 145 ಡಿಗ್ರಿ ಸೆಲ್ಸಿಯಸ್ ವರೆಗೆ ಹೋಗುತ್ತದೆ. ಅಷ್ಟೇ ಅಲ್ಲ, ಇಲ್ಲಿನ ಕೊಳಗಳ ನೀರು ಯಾವಾಗಲೂ ಕುದಿಯುತ್ತಲೇ ಇರುತ್ತದೆ ಎನ್ನಲಾಗುತ್ತೆ.