ಹಿಂದೂಗಳ ಈ ಧಾರ್ಮಿಕ ಸ್ಥಳ ಸಂಜೆಯಾಗುತ್ತಿದ್ದಂತೆ ಭಯ ಹುಟ್ಟಿಸುವ ಸ್ಮಶಾನವಾಗುತ್ತೆ!

Published : Jun 21, 2023, 03:47 PM IST

ನೆರೆಯ ರಾಷ್ಟ್ರವಾದ ನೇಪಾಳದಲ್ಲಿ 2 ಭಯಾನಕ ಸ್ಥಳಗಳಿವೆ, ಅಲ್ಲಿ ಸೂರ್ಯ ಮುಳುಗಿದ ತಕ್ಷಣ ಯಾರೂ ಹೋಗಲು ಧೈರ್ಯ ಮಾಡೋದೆ ಇಲ್ಲ. ಇನ್ನು ರಾತ್ರಿಯಂತೂ ಬಿಡಿ. ಈ ನಿಗೂಢ ಸ್ಥಳಗಳ ಕಥೆಯನ್ನು ತಿಳಿದುಕೊಳ್ಳೋಣ. 

PREV
18
ಹಿಂದೂಗಳ ಈ ಧಾರ್ಮಿಕ ಸ್ಥಳ ಸಂಜೆಯಾಗುತ್ತಿದ್ದಂತೆ ಭಯ ಹುಟ್ಟಿಸುವ ಸ್ಮಶಾನವಾಗುತ್ತೆ!

ವಿಶ್ವದ ಹೆಚ್ಚಿನ ದೇಶವು ಹಲವಾರು ರಹಸ್ಯಗಳಿಂದ (mysterious places) ತುಂಬಿದೆ. ಕೆಲವು ಕಡೆ ನಿಗೂಢತೆ ಅಡಗಿದರೆ, ಮತ್ತೆ ಕೆಲವೆಡೆ ಭಯಾನಕತೆ ಅಡಗಿದೆ. ಅಂತಹ ನಿಗೂಢ ಭಯಾನಕ ಸ್ಥಳಗಳಲ್ಲಿ ಪೆರುವಿನ ನಜ್ಕಾ ಲೈನ್ಸ್, ಸ್ಕಾಟ್ಲೆಂಡ್ನ ಲಾಕ್ ನೆಸ್, ಪೂರ್ವ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ ಮುಂತಾದ ಅನೇಕ ಸ್ಥಳಗಳು ಸೇರಿವೆ. ಇಂದು ನೇಪಾಳದಲ್ಲಿರುವ ಅಂತಹ ಭಯಾನಕ ಸ್ಥಳದ ಬಗ್ಗೆ ತಿಳಿಯೋಣ.

28

ಭಾರತದ ನೆರೆಯ ದೇಶಗಳಲ್ಲಿ ಒಂದಾದ ನೇಪಾಳದಲ್ಲಿ ಅನೇಕ ಭಯಾನಕ ಮತ್ತು ನಿಗೂಢ ಸ್ಥಳಗಳಿವೆ, ಅವುಗಳ ಬಗ್ಗೆ ಓದಿದ ಮತ್ತು ಕೇಳಿದ ನಂತರ ಭಯ ಹುಟ್ಟೋದು ಖಚಿತ. ನೇಪಾಳದಲ್ಲಿ ಅಂತಹ 2 ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ನಿಮಗೂ ಭಯಾನಕ ತಾಣಗಳ ಬಗ್ಗೆ ತಿಳಿಯೋಕೆ ಆಸಕ್ತಿ ಇದ್ದರೆ, ಬನ್ನಿ ಅಂತಹ ತಾಣಗಳ ಬಗ್ಗೆ ತಿಳಿದುಕೊಳ್ಳೋಣ. 

38

ಆರ್ಯ ಘಾಟ್, ಪಶುಪತಿನಾಥ ದೇವಾಲಯ  
ನೇಪಾಳದಲ್ಲಿ ನಿಗೂಢ ಮತ್ತು ಭಯಾನಕ ಸ್ಥಳದ ಬಗ್ಗೆ ಹೇಳೋದಾದರೆ, ಪಶುಪತಿನಾಥ ದೇವಾಲಯದ ಬಳಿ ಇರುವ ಆರ್ಯ ಘಾಟ್ ಬಗ್ಗೆ ಹೇಳದೇ ಇದ್ದರೆ ಹೇಗೆ?. ಪಶುಪತಿನಾಥ ದೇವಾಲಯ (Pashupathinath Temple) ನೇಪಾಳ ಮತ್ತು ಭಾರತದ ಜನರ ಪ್ರಮುಖ ಯಾತ್ರಾ ಸ್ಥಳ (religious place) ಎನ್ನಬಹುದು. ಶವ ಸಂಸ್ಕಾರ ನಡೆಸಲು ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ಬರುತ್ತಾರೆ.

48

ಆರ್ಯ ಘಾಟ್ ನ ನಿಗೂಢ ಕಥೆ  
ಆರ್ಯ ಘಾಟ್ ನ (Arya Ghat) ನಿಗೂಢ ಕಥೆ ತುಂಬಾನೆ ಆಸಕ್ತಿದಾಯಕವಾಗಿದೆ. ಈ ಘಾಟ್ ನಲ್ಲಿ ಪ್ರತಿದಿನ ಒಂದು ಡಜನ್ ಗೂ ಹೆಚ್ಚು ಜನರು ತಮ್ಮ ಕುಟುಂಬ ಸದಸ್ಯರನ್ನು ಅಂತ್ಯಕ್ರಿಯೆ ಮಾಡಲು ಬರುತ್ತಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಹೆಚ್ಚಿನ ಶವ ಸಂಸ್ಕಾರ ನಡೆಯುವುದರಿಂದ ದೆವ್ವದ ಉಪಟಳ ಕೂಡ ಇಲ್ಲಿ ಹೆಚ್ಚಾಗಿ ಕಂಡು ಬರುತ್ತೆ. 

58

ಮಧ್ಯರಾತ್ರಿಯಲ್ಲಿ ಇಲ್ಲಿ ಜನರ ಧ್ವನಿ ಮತ್ತು ಕಿರುಚಾಟಗಳು ಕೇಳುತ್ತವೆ ಎಂದು ಸ್ಥಳೀಯರು ನಂಬುತ್ತಾರೆ. ಸೂರ್ಯ ಮುಳುಗಿದ ಕೂಡಲೇ ಈ ಘಾಟ್ ಭಯಾನಕ ಸಮಾಧಿಯಾಗಿ ರೂಪಾಂತರಗೊಳ್ಳುತ್ತದೆ ಮತ್ತು ಎಲ್ಲೆಡೆ ಮೌನವಿರುತ್ತದೆ. ಜನ ಅತ್ತ ಸುಳಿಯಲು ಸಹ ಭಯ ಪಡ್ತಾರೆ. ಆರ್ಯಘಾಟ್ ಬಗ್ಗೆ ಮತ್ತೊಂದು ಕಥೆಯೆಂದರೆ ಬಿಳಿ ಬಟ್ಟೆ ಧರಿಸಿದ ಕೆಲವರು ಮಧ್ಯರಾತ್ರಿಯಲ್ಲಿ ಘಾಟ್ ಸುತ್ತಲೂ ತಿರುಗಾಡುತ್ತಿರೋದನ್ನು ಸಹ ಕೆಲವರು ನೋಡಿದ್ದಾರಂತೆ. 

68

ದೇವಿ ಘಾಟ್, ಚಿತ್ವಾನ್
ನೇಪಾಳದ ಎರಡನೇ ಅತ್ಯಂತ ನಿಗೂಢ ಸ್ಥಳವೆಂದರೆ ಚಿತ್ವಾನ್ ನಲ್ಲಿರುವ ದೇವಿ ಘಾಟ್ (Devi Ghat). ಪಶುಪತಿನಾಥ ದೇವಾಲಯದಂತೆ, ದೇವಿ ಘಾಟ್ ಅನ್ನು ಹಿಂದೂ ಸಂಸ್ಕೃತಿ ಮತ್ತು ಧರ್ಮದ ಪ್ರಸಿದ್ಧ ಕೇಂದ್ರವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ.

78

ದೇವಿಘಾಟ್ ನ ನಿಗೂಢ ಕಥೆ  
ದೇವಿಘಾಟ್ ನ ನಿಗೂಢ ಕಥೆಯನ್ನು ತುಂಬಾ ಭಯಾನಕವೆಂದು ಪರಿಗಣಿಸಲಾಗಿದೆ. 2009 ರಲ್ಲಿ, ವ್ಯಕ್ತಿಯ ತಲೆಬುರುಡೆ ಈ ಜಾಗದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತದೆ. ಈ ಘಟನೆಯ ನಂತರ, ಈ ಸ್ಥಳವನ್ನು ದೆವ್ವದ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಯಿತು.

88

ದೇವಿ ಘಾಟ್ ಬಗ್ಗೆ ಮತ್ತಷ್ಟು ಭಯಾನಕ ಕಥೆಗಳೂ ಕೇಳಿ ಬರುತ್ತೆ. ಅಂದ್ರೆ ಕೆಲವು ಮಹಿಳೆಯರು ಮಧ್ಯರಾತ್ರಿಯಲ್ಲಿ ಇಲ್ಲಿ ತಾವಾಗಿಯೇ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ ಎಂದು ಜನರು ನಂಬುತ್ತಾರೆ. ಮಹಿಳೆಯರು ನೃತ್ಯ ಮಾಡುವಾಗ, ಸುತ್ತಲೂ ಬೆಂಕಿಯೂ ಹತ್ತಿಕೊಳ್ಳುತ್ತಂತೆ. ಈ ಚಟುವಟಿಕೆಗಳಿಂದಾಗಿ, ಈ ಜಾಗವು ಸೂರ್ಯ ಮುಳುಗಿದ ಕೂಡಲೇ ಭಯಾನಕ ತಾಣವಾಗಿ ಬದಲಾಗುತ್ತದೆ.

Read more Photos on
click me!

Recommended Stories