Published : Aug 10, 2025, 02:50 PM ISTUpdated : Aug 10, 2025, 02:52 PM IST
KSTDC Travel Package: ಮೈಸೂರಿನಿಂದ ತಿರುಪತಿಗೆ ಎರಡು ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಒಂದು ದಿನದ ತಿರುಪತಿ ಟ್ರಿಪ್ ಮತ್ತು ಮೂರು ದಿನಗಳ ತಿರುಪತಿ-ಕಾಳಹಸ್ತಿ ಟ್ರಿಪ್ ಪ್ಯಾಕೇಜ್‌ಗಳು ಲಭ್ಯವಿದೆ. ಈ ಪ್ಯಾಕೇಜ್‌ಗಳ ಬೆಲೆ ಮತ್ತು ಇತರ ಮಾಹಿತಿಯನ್ನು ತಿಳಿದುಕೊಳ್ಳಿ.
ಮೈಸೂರು ಭಾಗದ ಜನತೆಗೆ KSTDC ಎರಡು ವಿಶೇಷ ಟೂರ್ ಪ್ಯಾಕೇಜ್ ನೀಡುತ್ತಿದೆ. ಈ ಟ್ರಾವೆಲ್ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುವ ಮೂಲಕ ಸುಲಭವಾಗಿ ತಿರುಮಲದಲ್ಲಿರುವ ಬಾಲಾಜಿಯ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ. ಈ ಟ್ರಾವೆಲ್ ಪ್ಯಾಕೇಜ್ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
26
ಮೈಸೂರಿನಿಂದ ಪ್ರತಿದಿನವೂ ಇರುತ್ತೆ ಬಸ್
KSTDCಯ 2+2 ಸೀಟರ್ ಹೊಂದಿರುವ ಎಸಿ ಬಸ್ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ. ಮೈಸೂರಿನ ಮಯೂರ ಹೊಯ್ಸಳ ಹೋಟ್‌ಲ್‌ನ KSTDC ಕಚೇರಿಯಿಂದ ತಿರುಪತಿಗೆ ಬಸ್ ಹೊರಡುತ್ತದೆ. ಮಾರ್ಗ ಮಧ್ಯೆ ತಿಂಡಿ ಮತ್ತು ಟೀ ಸೇವನೆಗಾಗಿ ಬಸ್ ಸ್ಟಾಪ್ ಮಾಡಲಾಗುತ್ತದೆ.
36
ತಿಂಡಿ ಮತ್ತು ಊಟದ ವ್ಯವಸ್ಥೆ
ಬೆಳಗಿನ ಜಾವ 2 ಗಂಟೆ ಬಸ್ ತಿರುಪತಿಗೆ ತಲುಪುತ್ತದೆ. ಇಲ್ಲಿ ಪ್ರಯಾಣಿಕರಿಗೆ ಫ್ರೆಶ್ ಆಗಲು ಹೋಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗಿನ ಜಾವ 4.30ಕ್ಕೆ ದೇವಸ್ಥಾನದತ್ತ ಕರೆದುಕೊಂಡು ಹೋಗಲಾಗುತ್ತದೆ. ಬೆಟ್ಟದ ಮೇಲೆ ಸ್ಥಳೀಯ ಬಸ್ ಬಳಕೆ ಮಾಡಬೇಕಾಗುತ್ತದೆ. ಈ ಬಸ್ ಚಾರ್ಜ್ ನಿಮ್ಮ ಪ್ಯಾಕೇಜ್‌ನಲ್ಲಿಯೇ ಒಳಗೊಂಡಿರುತ್ತದೆ.
ದರ್ಶನದ ಬಳಿಕ ಮಧ್ಯಾಹ್ನ 2 ಗಂಟೆಗೆ ಲಂಚ್ ಬ್ರೇಕ್ ನೀಡಲಾಗುತ್ತದೆ. ಸಂಜೆ 5 ಗಂಟೆಯಿಂದ 6 ಗಂಟೆ ನಡುವೆ ಪದ್ಮಾವತಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ. (ಇದು ತಿರುಮಲದಲ್ಲಿ ಭಕ್ತರ ಜನಸಂದಣಿ ಮತ್ತು ದರ್ಶನದ ಮೇಲೆ ನಿಗದಿಯಾಗಿರುತ್ತದೆ). ಇಲ್ಲಿಂದ ಮತ್ತೆ ಮೈಸೂರಿಗೆ ಪ್ರಯಾಣ ಆರಂಭವಾಗುತ್ತದೆ.
56
ಟೂರ್ ಪ್ಯಾಕೇಜ್ ದರ ಎಷ್ಟು?
ಮೈಸೂರು ಟು ತಿರುಪತಿ ಒಂದು ದಿನದ ಟೂರ್ ಪ್ಯಾಕೇಜ್ ಬೆಲೆ 2,935 ರೂಪಾಯಿ ಆಗಿದೆ. ಈ ಪ್ರಯಾಣದ ಟಿಕೆಟ್‌ನ್ನು KSTDC ವೆಬ್‌ಸೈಟ್ ಅಥವಾ ನೇರವಾಗಿ ಕಚೇರಿಗೆ ತೆರಳಿ ಬುಕ್ ಮಾಡಬಹುದಾಗಿದೆ.
66
ಮೈಸೂರು-ಕಾಳಹಸ್ತಿ ಪ್ಯಾಕೇಜ್
ಕೆಎಸ್‌ಟಿಡಿಸಿ ಮೈಸೂರಿನ ಜನತೆಗೆ KSTDC ಮತ್ತೊಂದು ಟೂರ್ ಪ್ಯಾಕೇಜ್ ನೀಡಿದೆ. ಇದು ಮೂರು ದಿನದ ಪ್ಯಾಕೇಜ್ ಆಗಿದ್ದು, ಕಾಳಹಸ್ತಿ ಮತ್ತು ತಿರುಪತಿಗೆ ಭೇಟಿ ನೀಡಬಹುದು. 3 ರಾತ್ರಿ ಮತ್ತು 2 ಹಗಲು ಪ್ರಯಾಣವನ್ನು ಹೊಂದಿರುತ್ತದೆ. ಈ ಟೂರ್ ಪ್ಯಾಕೇಜ್ ಬೆಲೆ ಒಬ್ಬರಿಗೆ 5,400 ರೂಪಾಯಿ, 2 ಟಿಕೆಟ್‌ಗೆ 4,500 ರೂ. ಮತ್ತು 3 ಟಿಕೆಟ್ ಬುಕಿಂಗ್‌ಗೆ 4,340 ರೂಪಾಯಿ ಆಗಿದೆ.