ಗಂಗಾ ನದಿಯ ನೀರಲ್ಲಿ ಕೀಟಗಳೇ ಹುಟ್ಟೋದಿಲ್ಲ ಯಾಕೆ ಗೊತ್ತಾ?

Published : Aug 19, 2023, 03:13 PM IST

ನೀರು ತುಂಬಾ ಸಮಯ ಒಂದೇ ಜಾಗದಲ್ಲಿ ಇದ್ದರೆ, ಅದರಲ್ಲಿ ಕೀಟಗಳು, ಹುಳಗಳು ಬೆಳೆಯುತ್ತದೆ. ಆದರೆ ನಿಮಗೊಂದು ಕುತೂಹಲಕಾರಿ ಅಂಶ ಗೊತ್ತಾ? ಗಂಗಾನದಿಯಲ್ಲಿ ಕೀಟಗಳು ಎಂದಿಗೂ ಬೆಳೆಯೋದೆ ಇಲ್ಲವಂತೆ. ಯಾಕೆ ಅನ್ನೋದನ್ನು ತಿಳಿಯೋಣ.   

PREV
18
ಗಂಗಾ ನದಿಯ ನೀರಲ್ಲಿ ಕೀಟಗಳೇ ಹುಟ್ಟೋದಿಲ್ಲ ಯಾಕೆ ಗೊತ್ತಾ?

ಗಂಗಾ ನದಿಯನ್ನು (Ganga River) ಭಾರತದಲ್ಲಿ ಬಹಳ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಗಂಗಾನದಿಯ ನೀರು ಎಷ್ಟು ಸಮಯದವರೆಗೆ ಇದ್ದರೂ, ಅದರಲ್ಲಿ ಎಂದಿಗೂ ಕೀಟಗಳು ಬೆಳೆಯೋದೆ ಇಲ್ಲ ಅನ್ನೋದು ನಿಮಗೆ ಗೊತ್ತಾ? ಹೌದು, ಇದರ ಹಿಂದಿರುವ ಕುತೂಹಲಕಾರಿ ವಿಷ್ಯಗಳ ಬಗ್ಗೆ ತಿಳಿಯೋಣ. 

28

ಅಕ್ಬರ್ ಸಹ ಗಂಗಾ ನೀರನ್ನು ಕುಡಿಯುತ್ತಿದ್ದನಂತೆ 
ಇತಿಹಾಸಕಾರರ ಪ್ರಕಾರ, ಅಕ್ಬರ್ ಸ್ವತಃ ಗಂಗಾ ನೀರನ್ನು ಕುಡಿಯುತ್ತಿದ್ದನೆಂಬ ಮಾತು ಕೇಳಿ ಬರುತ್ತೆ. ಅಷ್ಟೇ ಅಲ್ಲ, ಅವನು ತನ್ನ ಆಸ್ಥಾನಕ್ಕೆ ಬರುವ ಅತಿಥಿಗಳಿಗೆ ಸಹ ಗಂಗಾ ನದಿಯ ನೀರನ್ನು ಕುಡಿಯಲು ನೀಡುತ್ತಿದ್ದನು ಎಂದು ಹೇಳಲಾಗುತ್ತದೆ.   
 

38

ಗಂಗಾ ನದಿಯು ಎಲ್ಲಿ ಹುಟ್ಟುತ್ತದೆ?  
ಭಾರತದ ಅತ್ಯಂತ ಪವಿತ್ರ ನದಿಯಾದ ಗಂಗಾ ಗಂಗೋತ್ರಿ ಹಿಮನದಿಯ ಆಳದಿಂದ ಹುಟ್ಟುತ್ತದೆ. ಇದನ್ನು ಗಂಗಾ ಎಂದು ಕರೆಯಲಾಗುತ್ತದೆ. ಗಂಗಾ ನದಿ ಜನರ ಜೀವನದಲ್ಲಿ ಸ್ವಚ್ಚತೆಯನ್ನು ತರುತ್ತೆ ಎನ್ನಲಾಗಿದೆ. ಇದನ್ನು ಅತ್ಯಂತ ಪವಿತ್ರ ನದಿ ಎಂದು ಸಹ ಕರೆಯಲಾಗುತ್ತೆ. 

48

ಗಂಗಾ ನೀರಿನ ಮಹತ್ವ  (Importance of Ganga River)
ಗಂಗಾನದಿಯನ್ನು ಪವಿತ್ರ ನದಿ ಎಂದು, ಇದರಲ್ಲಿ ಮಿಂದರೆ ಪಾಪಗಳು ಪರಿಹಾರವಾಗುತ್ತೆ ಎಂದು ಹೇಳಲಾಗುತ್ತೆ. ಗಂಗಾಜಲದ ಪ್ರಮುಖ ಲಕ್ಷಣವೆಂದರೆ ಅದು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಇದು ಪಾಪಗಳನ್ನು ಶುದ್ಧೀಕರಿಸುತ್ತದೆ ಮತ್ತು ಮೋಕ್ಷವನ್ನು ನೀಡುತ್ತದೆ. 

58

ವಿಜ್ಞಾನ ಏನು ಹೇಳುತ್ತದೆ?  
ವೈಜ್ಞಾನಿಕ ಪುರಾವೆಗಳ (scientific reason) ಪ್ರಕಾರ, ಗಂಗಾ ನದಿಯು ಗೋಮುಖ ಖಂಡದಿಂದ ಪ್ರಾರಂಭವಾಗಿ ಬಯಲು ಪ್ರದೇಶವನ್ನು ತಲುಪುತ್ತದೆ. ಇದು ವಿವಿಧ ರೀತಿಯ ಸಸ್ಯವರ್ಗ ಅಂದರೆ ಗಿಡಮೂಲಿಕೆಗಳ ಮೇಲೆ ಹರಿಯುವ ಮೂಲಕ ತನ್ನ ಮಾರ್ಗವನ್ನು ತಲುಪುತ್ತದೆ.  

68

ಗಂಗಾನದಿಯಲ್ಲಿ ಯಾಕೆ ಕೀಟಗಳು ಹುಟ್ಟೋದಿಲ್ಲ
ಗಂಗಾ ನೀರು ಗುಣಪಡಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಜೀವಿಗಳು ನದಿಯ ನೀರು ಕೊಳಕಾಗದಂತೆ ತಡೆಯುತ್ತವೆ ಮತ್ತು ಮಾಲಿನ್ಯಕಾರಕವನ್ನು ತೆಗೆದುಹಾಕುತ್ತವೆ.  ಹಾಗಾಗಿ ಈ ನೀರಿನಲ್ಲಿ ಕೀಟಗಳು ಹುಟ್ಟೋದಿಲ್ಲ.
 

78

ಪಾಪಗಳಿಂದ ಮುಕ್ತಿ 
ಧಾರ್ಮಿಕ ಗ್ರಂಥಗಳ ಪ್ರಕಾರ, ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳನ್ನು ತೊಡೆದುಹಾಕಬಹುದು ಎಂದು ಹೇಳಲಾಗುತ್ತೆ. ಅದಕ್ಕಾಗಿಯೇ ಹೆಚ್ಚಿನ ಜನರು ಸಾವನ್ನಪ್ಪಿದ ನಂತರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಬಿಡುತ್ತಾರೆ.

88

ಗಂಗಾಜಲದಲ್ಲಿ ವೈರಸ್ 
ಗಂಗಾ ನೀರಿನಲ್ಲಿರುವ ವೈರಸ್  (virus in Ganga river) ನೀರಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ, ಇದರಿಂದಾಗಿ ಅದರ ಶುಚಿತ್ವವನ್ನು ಯಾವಾಗಲೂ ಕಾಪಾಡಿಕೊಳ್ಳಲಾಗುತ್ತದೆ.  ನೀರು ಯಾವಾಗಲೂ ಶುದ್ಧವಾಗಿರುತ್ತೆ. 
 

Read more Photos on
click me!

Recommended Stories