Travel
ಹಿಂದೂ ಧರ್ಮದಲ್ಲಿ ಹಲವಾರು ನದಿಗಳನ್ನು ಪವಿತ್ರ ಎಂದು ಹೇಳಲಾಗುತ್ತೆ. ನದಿಗಳಿಗೆ ಸನಾತನ ಧರ್ಮದಲ್ಲಿ ತಾಯಿ ಸ್ಥಾನವನ್ನು ನೀಡಲಾಗಿದೆ. ಇದೇ ನದಿಗಳಿಗೆ ಸಂಬಂಧಿಸಿದ ಶಾಪದ ಬಗ್ಗೆ ತಿಳಿಯಿರಿ.
ಭಾರತದಲ್ಲಿ ಹಲವು ಪವಿತ್ರ -ಪುಣ್ಯ ನದಿಗಳಿವೆ. ಅವುಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆಯುತ್ತೆ. ಆದರೆ ಆ ನದಿಗಳು ಇಂದಿಗೂ ಶಾಪಗ್ರಸ್ತವಾಗಿವೆ.
ದುರ್ವಾಸ ಮುನಿಗಳ ಶಾಪದಂತೆ ಕಲಿಯುಗ ಬರುವವರೆಗೆ ಸರಸ್ವತಿ ನದಿ ಕಣ್ಮರೆಯಾಗಿರುತ್ತಾಳೆ, ಕಲ್ಕಿಯ ಅವತಾರದ ಬಳಿಕವಷ್ಟೇ ಸರಸ್ವತಿ ಮತ್ತೆ ಭೂಮಿ ಮೇಲೆ ಕಾಣಿಸುತ್ತಾಳೆ.
ಸುಳ್ಳು ಹೇಳಿದ ಫಲ್ಗು ನದಿಯನ್ನು ಯಾರೂ ಪೂಜಿಸದಂತೆ ಸೀತೆ ಶಾಪ ನೀಡಿದಳಂತೆ. ಅದಕ್ಕೆ ಇಲ್ಲಿ ಪಿಂಡದಾನದಂತಹ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತೆ.
ಕೋಸಿನದಿಯಿಂದಾಗಿ ತನ್ನ ತಪೋಭಂಗವಾದ ಹಿನ್ನೆಲೆಯಲ್ಲಿ ಋಷಿಯೊಬ್ಬರು ಈ ನದಿಗೆ ಶಾಪ ನೀಡಿದ್ದರು. ಅದರಂತೆ ಈ ನದಿಯಲ್ಲಿ ಸ್ನಾನ ಮಾಡಿದವರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ.
ಗಂಗಾ ನದಿಗೆ ಪಾರ್ವತಿ ದೇವಿ ಶಾಪ ನೀಡಿದ್ದರು. ಗಂಗೆ ಜನರ ಪಾಪವನ್ನೇನು ದೂರ ಮಾಡುತ್ತಾಳೆ, ಆದರೆ ಅವರ ಪಾಪವನ್ನು ಹೊತ್ತು ಗಂಗೆ ಜೀವನಪೂರ್ತಿ ಕಷ್ಟ ಪಡುವ ಶಾಪ ಪಡೆದಿದ್ದಾಳೆ.
ರಾಜ ರತಿದೇವ್ ಸಾವಿರಾರು ಪ್ರಾಣಿಗಳನ್ನು ಕೊಂದು ಈ ನದಿಯಲ್ಲಿ ರಕ್ತವನ್ನು ಹರಿಯಲು ಬಿಟ್ಟ ಎನ್ನಲಾಗಿದ್ದು, ಬಳಿಕ ಇದನ್ನು ಶಾಪಗ್ರಸ್ತ ನದಿ ಎಂದು ಪರಿಗಣಿಸಲಾಯಿತು.
ಪುರಾಣ ಕಾಲದಲ್ಲಿ ಋಷಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದಾಗ, ಯುವಕರು ಬಂದು ತಪೋಭಂಗ ಮಾಡಿದ್ದರಂತೆ, ಆವಾಗ ಋಷಿ ಈ ನದಿಗೆ ಅಶುದ್ಧ ಮತ್ತು ಪಾಪಿ ಎಂದು ಶಾಪ ನೀಡಿದ್ದರಂತೆ.