ನೀವು ಆಫ್ ಬೀಟ್ ತಾಣಗಳನ್ನು (offbeat places) ನೋಡಲು ಇಷ್ಟಪಡುತ್ತಿದ್ದರೆ, ಇಂದು ನಾವು ಅಂತಹ ಒಂದು ಸ್ಥಳದ ಬಗ್ಗೆ ನಿಮಗೆ ಹೇಳಲಿದ್ದೇವೆ,ಈ ಸುಂದರ ಜಾಗ ಅಲ್ಲಿನ ವಿಶೇಷತೆಗಳು ಖಂಡಿತಾ ನಿಮಗೆ ಇಷ್ಟವಾಗುತ್ತೆ. ನಾವು ಹೇಳ್ತಾ ಇರೋದು ಮೇಘಾಲಯದ ಕಾಂಗ್ಥಾಂಗ್ ಗ್ರಾಮದ ಬಗ್ಗೆ, ಇದನ್ನು 'ವಿಸ್ಲಿಂಗ್ ವಿಲೇಜ್' (whisling village) ಎಂದೂ ಕರೆಯಲಾಗುತ್ತದೆ, ಏಕೆಂದರೆ ಇಲ್ಲಿ ಜನರು ಪರಸ್ಪರರನ್ನು ಹೆಸರಿನಿಂದ ಕರೆಯುವುದಿಲ್ಲ ಬದಲಾಗಿ ಶಿಳ್ಳೆ ಅಥವಾ ವಿಶಿಲ್ ಹೊಡೆಯುವ ಮೂಲಕ ಕರೆಯುತ್ತಾರೆ. ಕಾಂಗ್ಥಾಂಗ್ ಪೂರ್ವ ಖಾಸಿ ಬೆಟ್ಟಗಳಲ್ಲಿರುವ ಒಂದು ಸುಂದರವಾದ ಪ್ರದೇಶವಾಗಿದೆ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಿಂದ ಸುಮಾರು 60 ಕಿಮೀ ಪ್ರಯಾಣಿಸುವ ಮೂಲಕ, ನೀವು ಈ ಶಾಂತ, ಸುಂದರ ಮತ್ತು ಅನನ್ಯ ಹಳ್ಳಿಯನ್ನು ತಲುಪಬಹುದು.