ಈ ದೇಗುಲದಲ್ಲಿ ಇಲಿಗಳಿಗೆ ಮೊದಲ ನೈವೇದ್ಯ… ಅದು ತಿಂದು ಬಿಟ್ಟದ್ದು ಭಕ್ತರಿಗೆ ಪ್ರಸಾದ

First Published | Sep 5, 2023, 6:16 PM IST

ಭಾರತದಲ್ಲಿ ಅನೇಕ ಧಾರ್ಮಿಕ ಸ್ಥಳಗಳಿವೆ, ಅವುಗಳ ಇತಿಹಾಸವು ತುಂಬಾನೆ ಆಸಕ್ತಿದಾಯಕವಾಗಿದೆ. ಅಂತಹ ಒಂದು ಸ್ಥಳ ಕರ್ಣಿಮಾತಾ ಮಂದಿರ. ಈ ಯಾತ್ರಾ ಸ್ಥಳವು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಹಳ ಪ್ರಸಿದ್ಧವಾಗಿದೆ. ಏನಿದರ ವಿಶೇಷತೆ ಅನ್ನೋದನ್ನು ತಿಳಿಯೋಣ.
 

ರಾಜಸ್ಥಾನದ ಬಿಕಾನೇರ್ ನಲ್ಲಿರುವ ಕರ್ಣಿ ಮಾತಾ ದೇವಾಲಯವು (Karni Mata Temple) ಇಲಿಗಳ ಕಾರಣದಿಂದಾಗಿ ದೇಶಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. ಇಲ್ಲಿ ಭಕ್ತರಿಗೆ ಇಲಿಗಳ ಎಂಜಲು ಪ್ರಸಾದವನ್ನು ಅರ್ಪಿಸಲಾಗುತ್ತೆ.  ಆದ್ದರಿಂದ ಈ ದೇವಾಲಯಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
 

ರಾಜಸ್ಥಾನವು (Rajasthan) ತನ್ನ ಸೌಂದರ್ಯದಿಂದ ಪ್ರವಾಸಿಗರ ಮನಸ್ಸನ್ನು ಸೆಳೆಯುವಲ್ಲಿ ಎಂದಿಗೂ ಮುಂದಿರುತ್ತೆ.. ಇದು ತನ್ನ ನೈಸರ್ಗಿಕ ಸೌಂದರ್ಯದಿಂದ, ಕಲೆ, ರಾಯಲ್ ಲುಕ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಆದರೂ, ಬೇಸಿಗೆಯಲ್ಲಿ, ಇಲ್ಲಿಗೆ ಬರಲು ಜನರು ಹೆದರುತ್ತಾರೆ. ಯಾಕಂದ್ರೆ ವಿಪರೀತ ಬಿಸಿಲಿನಿಂದಾಗಿ , ಇಲ್ಲಿ ನಡೆದಾಡಲು ಕಷ್ಟವಾಗುತ್ತೆ. 
 

Tap to resize

ರಾಜಸ್ಥಾನವು ಧಾರ್ಮಿಕ ಸ್ಥಳಗಳಿಗೆ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ.ಇಲ್ಲೊಂದು ಇಲಿಗೆ ಸಂಬಂಧಿಸಿದ ದೇಗುಲ ಇದೆ.  ಹೌದು, ಕರ್ಣಿ ಮಾತಾ ದೇವಾಲಯವು ರಾಜಸ್ಥಾನದ ಬಿಕಾನೇರ್ ನಲ್ಲಿದೆ. ಇದು ಪ್ರವಾಸಿಗರಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಈ ದೇವಾಲಯವು ಕರ್ಣಿ ದೇವಿಗೆ ಸಮರ್ಪಿತವಾಗಿದೆ.
 

ಈ ದೇವಾಲಯದ ವಿಶೇಷತೆಯೆಂದರೆ 20 ಸಾವಿರಕ್ಕೂ (20 thousand rats) ಹೆಚ್ಚು ಇಲಿಗಳು ಇಲ್ಲಿ ವಾಸಿಸುತ್ತವೆ ಮತ್ತು ಪೂಜೆಯ ನಂತರ ಅವುಗಳಿಗೆ ನೈವೇದ್ಯ ನೀಡಲಾಗುತ್ತೆ. ನೀವು ಇಲ್ಲಿ ಕೆಲವು ಬಿಳಿ ಇಲಿಗಳನ್ನು ಸಹ ಕಾಣಬಹುದು. ಈ ಇಲಿಗಳನ್ನು ದೇವಾಲಯದಲ್ಲಿ ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ಇಲಿಗಳನ್ನು ಭಕ್ತರು ಕಾಬಾ ಎಂದೂ ಕರೆಯಲಾಗುತ್ತದೆ.
 

ಕರ್ಣಿ ಮಾತಾ ದೇವಾಲಯವನ್ನು 20 ನೇ ಶತಮಾನದಲ್ಲಿ ಬಿಕಾನೇರ್ ನ ಮಹಾರಾಜ ಗಂಗಾ ಸಿಂಗ್ ನಿರ್ಮಿಸಿದರು. ಈ ದೇವಾಲಯವು ಬಹಳ ಸುಂದರವಾಗಿದೆ. ಈ ದೇವಾಲಯದ ಮುಖ್ಯ ದ್ವಾರವನ್ನು ಬೆಳ್ಳಿಯಿಂದ ಮಾಡಲಾಗಿದ್ದು, ಕರ್ಣಿ ಮಾತಾಗೆ ಚಿನ್ನದ ಗೋಪುರ ನಿರ್ಮಿಸಲಾಗಿದೆ. ಇಲಿಗಳ ಬೆಳ್ಳಿಯ ಮೂರ್ತಿಗಳನ್ನು ಇಲ್ಲಿ ಪೂಜಿಸಲಾಗುತ್ತೆ. . 
 

ಕರ್ಣಿ ಮಾತೆಯನ್ನು ದೇಶ್ನೋಕ್ ದೇವಾಲಯದಲ್ಲಿ ಪೂಜಿಸಲಾಗುತ್ತದೆ. 20 ಸಾವಿರಕ್ಕೂ ಹೆಚ್ಚು ಇಲಿಗಳು ಇಲ್ಲಿ ವಾಸಿಸುತ್ತವೆ ಎನ್ನಲಾಗುತ್ತೆ. ಕೆಲವು ಬಿಳಿ ಇಲಿಗಳೂ ಇವೆ. ಈ ದೇವರ ಪರಮ ಭಕ್ತ ಸತ್ತರೆ, ಅವನು ಕರ್ಣಿ ಮಾತಾ ದೇವಾಲಯದಲ್ಲಿ ಇಲಿಯಾಗಿ ಜನಿಸುತ್ತಾನೆ ಎನ್ನುವ ನಂಬಿಕೆ ಇದೆ. 
 

ಕರ್ಣಿ ಮಾತಾ ದೇಗುಲವನ್ನು ಬಿಕಾನೇರ್ ರಾಜಮನೆತನದ ಕುಲದೇವಿ ಎಂದು ಕರೆಯಲಾಗುತ್ತದೆ ಮತ್ತು ಇಲ್ಲಿ ವಾಸಿಸುವ ಬಿಳಿ ಇಲಿಗಳನ್ನು ತಾಯಿಯ ವಾಹನಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ದೇವಾಲಯವು ಇಲಿ ದೇವಾಲಯ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ.
 

ರಾಜಸ್ಥಾನದ ಬಿಕಾನೇರ್ ನಿಂದ ಸುಮಾರು 30 ಕಿ.ಮೀ. ದೇಶ್ನೋಕ್ ನಲ್ಲಿರುವ ಈ ದೇವಾಲಯವನ್ನು ಇಲಿಗಳ ತಾಯಿ, ಇಲಿಗಳ ದೇವಾಲಯ ಮತ್ತು ಮೂಶಕ್ ದೇವಾಲಯ (Mooshak Temple) ಎಂದೂ ಕರೆಯಲಾಗುತ್ತದೆ. ಇಲ್ಲಿ ಇಲಿಗಳನ್ನು ಕಾಬಾ ಎಂದು ಕರೆಯಲಾಗುತ್ತದೆ. ಇಲಿ ದೇವಾಲಯದಲ್ಲಿ ಸುಮಾರು 25,000 ಇಲಿಗಳಿವೆ. ಇಲ್ಲಿ ಒಂದೊಂದು ಹೆಜ್ಜೆ ಇಡುವ ಮುನ್ನ, ಇಲ್ಲಿಗಳಿಗೆ ಏನೂ ಪೆಟ್ಟಾಗದಂತೆ ನೋಡಿಕೊಳ್ಳಬೇಕು. 
 

Latest Videos

click me!