ಈ ಗ್ರಾಮದಲ್ಲಿ ನವದಂಪತಿ ಸ್ಮಶಾನದಲ್ಲಿ ಪೂಜೆ ಮಾಡೋದು ಸಂಪ್ರದಾಯ!

First Published | Aug 30, 2023, 4:18 PM IST

ಭಾರತದಲ್ಲಿ ವಿವಾಹವು ಅನೇಕ ವಿಭಿನ್ನ ಪದ್ಧತಿಗಳಲ್ಲಿ ನಡೆಯುತ್ತದೆ. ಇಂದು ನಾವು ನಿಮಗೆ ಒಂದು ವಿಶಿಷ್ಟ ಸಂಪ್ರದಾಯದ ಬಗ್ಗೆ ಹೇಳಲಿದ್ದೇವೆ. ಈ ಮದುವೆ ಸಂಪ್ರದಾಯದಲ್ಲಿ ಸ್ಶಶಾನಕ್ಕೆ ಪ್ರಾಮುಖ್ಯತೆ ಇದೆ.
 

ಭಾರತದಲ್ಲಿ ಮದುವೆ (Indian marriage tradition) ಸಮಯದಲ್ಲಿ ಅನೇಕ ಪದ್ಧತಿಗಳು ನಡೆಯುತ್ತವೆ, ಭಾರತದ ಉದ್ದಗಲಕ್ಕೂ ನೋಡಿದ್ರೆ ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯವಿದೆ. ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಭಾರತೀಯರು ಕಪ್ಪು ಬಟ್ಟೆಗಳನ್ನು ಸಹ ಧರಿಸುವುದಿಲ್ಲ. ಅದನ್ನು ಅಶುಭ ಎನ್ನಲಾಗುತ್ತದೆ. ಆದರೆ ಸ್ಮಶಾನದಲ್ಲಿ ಮದುವೆಯ ಆಚರಣೆ ನಡೆಯುವ ಬಗ್ಗೆ ಕೇಳಿದ್ದೀರಾ ನೀವು?
 

ಭಾರತದಲ್ಲಿ ಒಂದು ವಿಶಿಷ್ಟ ಹಳ್ಳಿ ಇದೆ, ಅದು ವಿಚಿತ್ರ ಪದ್ಧತಿಗೆ ಹೆಸರುವಾಸಿಯಾಗಿದೆ. ಈ ಹಳ್ಳಿಯಲ್ಲಿ, ಹೊಸದಾಗಿ ಮದುವೆಯಾದ ದಂಪತಿಗಳು ಮದುವೆಯ ನಂತರ ತಮ್ಮ ಕುಲ ದೇವಿಯ ದೇವಸ್ಥಾನಕ್ಕೆ ಹೋಗುವುದಿಲ್ಲ, ಆದರೆ ಮೊದಲ ಪೂಜೆಯನ್ನು ಮಾಡಲು ಸ್ಮಶಾನಕ್ಕೆ (cremation ground) ಹೋಗುತ್ತಾರೆ. ಶಾಕ್ ಆಯ್ತ, ಆದ್ರೆ ಇದು ನಿಜಾ.

Latest Videos


ಯಾವ ಊರಲ್ಲಿ ಈ ಸಂಪ್ರದಾಯವಿದೆ?
ಇಂತಹ ವಿಚಿತ್ರ ಸಂಪ್ರದಾಯ ನಡೆಯೋದು ರಾಜಸ್ಥಾನದ ಜೈಸಲ್ಮೇರ್ (Jaisalmair Rajasthan) ನಿಂದ 6 ಕಿ.ಮೀ ದೂರದಲ್ಲಿರುವ ಬಡಾ ಬಾಗ್ ಗ್ರಾಮದಲ್ಲಿ. ಈ ಹಳ್ಳಿಯಲ್ಲಿ, ಮದುವೆ ನಂತರದ ಈ ಸಂಪ್ರದಾಯ ಶತಮಾನಗಳಿಂದ ನಡೆಯುತ್ತಿದೆ, ಈಗ ಮಾತ್ರವಲ್ಲ. ಹಲವು ವರ್ಷಗಳಿಂದ ನವವಿವಾಹಿತ ದಂಪತಿ ಪೂಜೆಗಾಗಿ ಸ್ಮಶಾನಕ್ಕೆ ಕಳುಹಿಸಲಾಗುತ್ತಿದೆ. 
 

ಈ ಗ್ರಾಮದ ಜನರು ಸ್ಮಶಾನದಲ್ಲಿ ಏಕೆ ಪೂಜಿಸುತ್ತಾರೆ?
ಬಡಾ ಬಾಗ್ ಗ್ರಾಮದ ಜನರು ಇಲ್ಲಿನ ಸ್ಮಶಾನವನ್ನು ಬಹಳ ವಿಶೇಷವೆಂದು ಪರಿಗಣಿಸುತ್ತಾರೆ. ಈ ಗ್ರಾಮದ ಜನರು ಇದು ರಾಜಮನೆತನದ ಕುಟುಂಬದ ಸ್ಮಶಾನ ಎಂದು ನಂಬುತ್ತಾರೆ. ಅಲ್ಲಿ 103 ರಾಜರು ಮತ್ತು ರಾಣಿಯರ ನೆನಪಿಗಾಗಿ ಗೋಪುರಗಳನ್ನು ನಿರ್ಮಿಸಲಾಗಿದೆ. 

ರಾಜ ರಾಣಿಯರ ಮೇಲಿನ ಗೌರವದಿಂದಾಗಿ ಈ ಗ್ರಾಮದಲ್ಲಿ ವಾಸಿಸುವ ಜನರು ಈ ಗ್ರಾಮದ ಸ್ಮಶಾನದೊಂದಿಗೆ ವಿಶೇಷ ಸಂಬಂಧ ಹೊಂದಿದ್ದಾರೆ. ಈ ಕಾರಣದಿಂದಾಗಿ ಅವರು ಹೊಸದಾಗಿ ಮದುವೆಯಾದ ದಂಪತಿಗಳನ್ನು (married couples) ಮದುವೆಯಾದ ತಕ್ಷಣ ಪೂಜೆಗಾಗಿ ಸ್ಮಶಾನಕ್ಕೆ ಕರೆತರುತ್ತಾರೆ. ಹೊಸದಾಗಿ ಮದುವೆಯಾದ ದಂಪತಿಗಳು ಪೂಜಿಸುತ್ತಾರೆ.

ಮದುವೆ ಮಾತ್ರವಲ್ಲ, ಯಾವುದೇ ಶುಭ ಕಾರ್ಯಗಳು ನಡೆದರೂ, ಇಲ್ಲಿನ ಜನರು ಸ್ಮಶಾನಕ್ಕೆ ಬರುತ್ತಾರೆ. ಯಾವುದೇ ನವವಿವಾಹಿತ ವ್ಯಕ್ತಿ ಮದುವೆಯಾದ ತಕ್ಷಣ ಇಲ್ಲಿಗೆ ಬಂದು ಪೂಜಿಸಿದರೆ, ಅವರು ಸ್ವರ್ಗೀಯ ರಾಜರು ಮತ್ತು ರಾಣಿಯರ ಆಶೀರ್ವಾದ ಪಡೆಯುತ್ತಾರೆ ಮತ್ತು ಅವರ ಜೀವನದಲ್ಲಿ ಸಂತೋಷ ಉಳಿಯುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ. ಪ್ರತಿ ಹುಣ್ಣಿಮೆಯಂದು, ಇಲ್ಲಿ ವಾಸಿಸುವ ಗ್ರಾಮಸ್ಥರು ಈ ಸ್ಮಶಾನದಲ್ಲಿ ಪೂಜಿಸುತ್ತಾರೆ. 

click me!