ಇವೇ ನೋಡಿ ಕರ್ನಾಟಕದಲ್ಲಿರೋ ಏಳು ಅದ್ಭುತಗಳು… ನೀವು ಈ ತಾಣಗಳನ್ನ ನೋಡಿದ್ದೀರಾ?

First Published | Nov 5, 2024, 10:56 AM IST

ಪ್ರಪಂಚದ ಏಳು ಅದ್ಭುತಗಳ ಬಗ್ಗೆ ನೀವು ಶಾಲೆಯ ಪಠ್ಯ ಪುಸ್ತಕಗಳಲ್ಲಿ ಬಹಳಷ್ಟು ತಿಳ್ಕೊಂಡಿದ್ದೀರಿ. ಈವಾಗ ಕರ್ನಾಟಕದ ಅದ್ಭುತಗಳ ಬಗ್ಗೆ ತಿಳಿಯೋ ಸಮಯ.  ಕರ್ನಾಟಕದಲ್ಲಿರೋ ಆ ಅದ್ಭುತಗಳು ಯಾವುವು ಅನ್ನೋದನ್ನ ನೋಡೋಣ. 
 

1 . ಹಿರೇಬೆಣಕಲ್ (Hirebenakal Dolmens)
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್‌ ಶಿಲಾ ಸಮಾಧಿ’ಗಳ ತಾಣ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಕನ್ನಡಿಗರಿಗೆ ಅಪರಿಚಿತವಾಗಿರುವ ಈ ತಾಣ ಸುಮಾರು 3000-4000 ವರ್ಷಗಳಷ್ಟುಹಳೆಯ ಇತಿಹಾಸವನ್ನು ಹೊಂದಿದೆ.  ಹಿರೇಬೆಣಕಲ್‌ ಗ್ರಾಮದ(Hirebenakal village) ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್‌ ಶಿಲಾಯುಗದ ನೂರಾರು ಶಿಲಾಸಮಾಧಿಗಳನ್ನು ಕಾಣಬಹುದು. ಇಲ್ಲಿ ಒಂದು ಅಡಿಯಿಂದ, 10 ಅಡಿಯವರೆಗಿನ ಸಮಾಧಿಗಳಿಗೆ, ಇಷ್ಟು ವರ್ಷಗಳವರೆಗೆ ಅವು ಗಟ್ಟಿಯಾಗಿ ನಿಂತಿರುವುದೇ ಅಚ್ಚರಿಯ ಸಂಗತಿ. ಇದು ಕರ್ನಾಟಕದ ಏಳು ಅದ್ಭುತಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ. 

2. ಹಂಪಿ (Hampi)
ಕರ್ನಾಟಕದ ಎರಡನೇ ಅದ್ಭುತ ಅಂದ್ರೆ ಅದು ಹಂಪಿ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. 1336 ರಿಂದ 1565ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು 1986 ರಂದು ಘೋಷಿಸಿದೆ. ಇಂದಿಗೂ ಕೂಡ ಅಳಿದುಳಿದ ಹಂಪಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ, ಹಂಪಿಯ ಮೂಲ ವೈಭವವನ್ನು ಖಂಡಿತವಾಗಿಯೂ ಕಣ್ತುಂದೆ ತರಬಹುದು. 
 

Latest Videos


3. ಗೋಲ್ ಗುಂಬಜ್ (Gol Gumbaz)
ಗೋಲ್ ಗುಂಬಜ್ ಕರ್ನಾಟಕದ ಮೂರನೇ ಅದ್ಭುತವಾಗಿದೆ.  ಆದಿಲ್ ಶಾನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ. 

4. ಗೋಮಟೇಶ್ವರ ಶ್ರವಣಬೆಳಗೊಳ ( shravanabelagola Gomateshwara Statue)
ಇದು ನಾಲ್ಕನೇ ಅದ್ಭುತವಾಗಿದೆ. ಶ್ರವಣಬೆಳಗೊಳ (Shravanabelagola) ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ಬರೋಬರಿ 58.8 ಅಡಿ ಎತ್ತರದ ಬಾಹುಬಲಿಯ ಏಕಶಿಲ ಮೂರ್ತಿಯಿದೆ. ಇದು ಜೈನ ಧಾರ್ಮಿಕ ಕೇಂದ್ರವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ "ಚಾವುಂಡರಯ"ಇದನ್ನು ನಿರ್ಮಿಸಿದನು. ಇಲ್ಲಿ 12 ವರ್ಷಗಳಿಗೊಮ್ಮೆ ಮಹಮಸ್ತಾಕಾಭಿಶೇಕವನ್ನು ನೆರವೆರಿಸಲಾಗುತ್ತೆ .ಕೊನೆಯಬಾರಿ 2018 ಫೆಬ್ರುವರಿ 8 ರಂದು ನಡೆದಿತ್ತು ,ಮುಂದೆ 2030 ರಲ್ಲಿ ನಡೆಯಲಿದೆ.

5. ಮೈಸೂರು ಅರಮನೆ (Mysuru Palace)
ಮೈಸೂರು ಅರಮನೆ ಕರ್ನಾಟಕದ ಅದ್ಭುತಗಳಲ್ಲಿ 5 ಸ್ಥಾನವನ್ನು ಪಡೆದಿದೆ. ಇದನ್ನ ಅಂಬಾ ವಿಲಾಸ ಅರಮನೆ ಅಂತಾನೂ ಕರೆಯುತ್ತಾರೆ. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಮಾಡಿದ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ.

6. ಜೋಗ ಜಲಪಾತ (Jog falls)
ಜೋಗ ಅಥವಾ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದ್ದೆ. ಈ ತಾಣವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಜೋಗ ಜಲಪಾತದಲ್ಲಿ ಶರಾವತಿ ನದಿಯು ಸುಮಾರು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ನಾಲ್ಕು ಭಾಗಗಳಾಗಿವೆ. ಜೋಗ ಜಪಾತದ ವೈಭವವನ್ನು ಮಳೆಗಾಲದಲ್ಲಿ ನೋಡೋದೆ ಚೆಂದ. ಇದು ಕರ್ನಾಟಕದ ಅದ್ಭುತಗಳಲ್ಲಿ 6ನೇ ಸ್ಥಾನ ಪಡೆದಿದೆ. 

7. ನೇತ್ರಾಣಿ ಐಲ್ಯಾಂಡ್(Netrani island)
ಇನ್ನು ಕರ್ನಾಟಕದ ಅದ್ಭುತಗಳಲ್ಲಿ ಏಳನೇಯ ಹಾಗೂ ಕೊನೆಯ ಸ್ಥಾನ ಪಡೆದಿರುವ ತಾಣ ಅಂದ್ರೆ ಅದು ನೇತ್ರಾಣಿ ಐಲ್ಯಾಂಡ್. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಈ ಸುಂದರವಾಗಿ ನೇತ್ರಾಣಿ ಮುರುಡೇಶ್ವರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಇದು ಹಾರ್ಟ್ ಶೇಪ್ ನಲ್ಲಿದ್ದು, ಇದು ಸ್ಕೂಬಾ ಡೈವ್ ಮಾಡೋದಕ್ಕೆ ಅತ್ಯುತ್ತಮವಾದ ತಾಣವಾಗಿದೆ. ಅದ್ಭುತವಾದ ಜಲಚರಗಳನ್ನು ನೀವಿಲ್ಲಿ ನೋಡಿ ಎಂಜಾಯ್ ಮಾಡಬಹುದು. 

click me!