ಅತ್ಯಂತ ಸಂತೋಷದ ದೇಶ ಫಿನ್‌ಲ್ಯಾಂಡ್: ನಿಜಕ್ಕೂ ಜನರು ಹ್ಯಾಪಿನಾ ಅಲ್ಲಿ?

First Published | Mar 25, 2023, 4:15 PM IST

World Happiness Report 2023 ಪ್ರಕಾರ ಫಿನ್ ಲ್ಯಾಂಡ್ ಸತತ 6 ನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದ ದೇಶವಾಗಿದೆ ಹೊರಹೊಮ್ಮಿದೆ. ಆದರೆ ಇಲ್ಲಿನ ಸಮಸ್ಯೆ ಬಗ್ಗೆ ಕೇಳಿದ್ರೆ ಮಾತ್ರ ನಿಮಗೆ ಅಚ್ಚರಿಯಾಗಬಹುದು… ನಿಜಕ್ಕೂ ಇದು ಸಂತೋಷದ ದೇಶವಾಗಿರಲು ಸಾಧ್ಯನಾ? ಅನ್ನೋ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. 

ಕಳೆದ ಆರು ವರ್ಷಗಳಿಂದ ಸತತವಾಗಿ ಫಿನ್ ಲ್ಯಾಂಡ್ ಅತ್ಯಂತ ಸಂತೋಷದ ರಾಷ್ಟ್ರಗಳಲ್ಲಿ (Happiest country Finland) ಮೊದಲನೇ ಸ್ಥಾನದಲ್ಲಿದೆ. ಆದರೆ ನಿಜವಾಗಿಯೂ ಈ ದೇಶದಲ್ಲಿ ಜನರೆಲ್ಲರೂ ಸಂತೋಷವಾಗಿಯೇ ಇದ್ದಾರೆಯೆ? ಇಲ್ಲಿನ ಜನಕ್ಕೆ ಸಮಸ್ಯೆ ಏನೂ ಇಲ್ವಾ? ನೆಮ್ಮದಿಯಾಗಿ ಜೀವಿಸ್ತಿದ್ದಾರೆ ಅಂತಾ ನೀವು ಕೇಳಿದ್ರೆ… ಖಂಡಿತವಾಗಿಯೂ ಅದಕ್ಕೆ ನೋ ಅನ್ನೋ ಉತ್ತರವೇ ಬರುತ್ತೆ. ಯಾಕಂದ್ರೆ ಇಲ್ಲಿನ ಜನ ಅನೇಕ ಸಮಸ್ಯೆಗಳನ್ನು ಹೊಂದಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ. 

ಫಿನ್ ಲ್ಯಾಂಡ್ ನ ಜನಸಂಖ್ಯೆಯ 20% ಜನರು ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದಾರೆ, ಇದು ಇಯುನಲ್ಲಿ ಅತಿ ಹೆಚ್ಚು ಮತ್ತು ಅದರ ಜನಸಂಖ್ಯೆಯ 7% ರಷ್ಟು ಜನರು ಖಿನ್ನತೆಯನ್ನು (depression) ಹೊಂದಿದ್ದಾರೆ ಅನ್ನೋದು ನಿಜಾ. 

Tap to resize

ವಿಶ್ವದ ಅತ್ಯಂತ ಸಂತೋಷದ ದೇಶದಲ್ಲಿ ಇಷ್ಟೊಂದು ಅತೃಪ್ತಿ ಮತ್ತು ಖಿನ್ನತೆ ಹೇಗೆ?  ಈ ವರದಿಗಳು, ರೇಟಿಂಗ್ಸ್ ಮತ್ತು ಸೂಚ್ಯಂಕಗಳು ಯಾರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿವೆ? ಅನ್ನೋದೇ ತಿಳಿಯುತ್ತಿಲ್ಲ ಎಂದು ಟ್ವಿಟ್ಟರ್ ಖಾತೆದಾರರಾದ ಸ್ವಾತಿ ಬೆಲ್ಲಮ್, (Swathi Bellam) ಫ್ಯಾಕ್ಟ್ ಸಮೇತ ಮಾಹಿತಿ ನೀಡಿದ್ದಾರೆ.  ಫಿನ್‌ಲ್ಯಾಂಡ್‌ನಲ್ಲಿ ಜನರು ಏನೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದಾರೆ ತಿಳಿಯೋಣ. 
 

ಫಿನ್ ಲ್ಯಾಂಡ್ ಗೆ ಸೂರ್ಯನ ಬೆಳಕು ಸಿಗುವುದು ಕಷ್ಟ 
365 ದಿನಗಳಲ್ಲಿ ಸುಮಾರು 73 ದಿನಗಳು ವರ್ಷದಲ್ಲಿ ಸಂಪೂರ್ಣವಾಗಿ ಕತ್ತಲೆಯಾಗಿರುತ್ತದೆ 
ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಸೂರ್ಯನ ಬೆಳಕು ಸಿಗುವುದಿಲ್ಲ (No sunlight) 
ಸರಾಸರಿ ತಾಪಮಾನವು ಕೇವಲ 5 *C ಆಗಿದೆ ಮತ್ತು ಇಲ್ಲಿ ವರ್ಷದಲ್ಲಿ 200 ದಿನಗಳವರೆಗೆ ಹಿಮ ಬೀಳುತ್ತದೆ 
ಸೂರ್ಯನ ಬೆಳಕನ್ನು ನೋಡದಿದ್ದಾಗ ಮಾನವರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಆದ್ದರಿಂದ ಶೀತ ದೇಶಗಳಲ್ಲಿ ತುಂಬಾ ಖಿನ್ನತೆ ಇರುತ್ತೆ.

ಫಿನ್‌ಲ್ಯಾಂಡ್‌ನಲ್ಲಿ 61% ವಿವಾಹಗಳು ವಿಚ್ಛೇದನದಲ್ಲಿ (divorce) ಕೊನೆಗೊಳ್ಳುತ್ತವೆ, ಇದು ಯುಎಸ್ಎಗಿಂತ 47% ಕ್ಕಿಂತ ಹೆಚ್ಚಾಗಿದೆ ಮತ್ತು ನಿಜವಾಗಿಯೂ ಪ್ರಪಂಚದ ಅತ್ಯಂತ ಸಂತೋಷದ ಜನರು ಹೆಚ್ಚಿನ ವಿಚ್ಛೇದನ ಪ್ರಮಾಣವನ್ನು ಏಕೆ ಹೊಂದಿದ್ದಾರೆ ಅಲ್ವಾ?
 

ವಿಚ್ಚೇದನ ಹೆಚ್ಚುತ್ತಿದೆ ಅಂದ್ರೆ ಇದರರ್ಥ ಇಲ್ಲಿ ಹೆಚ್ಚಾಗಿ ಮುರಿದ ಕುಟುಂಬಗಳಿವೆ, ಒಂಟಿ ಪೋಷಕರು ಮತ್ತು ಕುಟುಂಬ ಬೆಂಬಲವಿಲ್ಲದೆ ಏಕಾಂಗಿಯಾಗಿ ಬೆಳೆಯುತ್ತಿರುವ ಮಕ್ಕಳಿದ್ದಾರೆ. ಆದ್ದರಿಂದ ಯುರೋಪಿನಲ್ಲಿ ಹೆಚ್ಚಿನ ಸರ್ಕಾರಿ ಮಕ್ಕಳ ಆರೈಕೆ ಬೆಂಬಲದ ಅಗತ್ಯವಿದೆ. ಹಾಗಾದರೆ ಯಾವುದೇ ಮನುಷ್ಯನು ಕುಟುಂಬವಿಲ್ಲದೆ ಸಂತೋಷವಾಗಿರಲು ಹೇಗೆ ಸಾಧ್ಯ? 
 

ಸಂತೋಷದ ಈ ಎಲ್ಲಾ ಸೂಚ್ಯಂಕಗಳನ್ನು ಮೋಸದ ಅರ್ಥಶಾಸ್ತ್ರಜ್ಞರು ರಚಿಸಿದ್ದಾರೆ ಮತ್ತು ಯುರೋಪಿಯನ್ ಅಥವಾ ಅಭಿವೃದ್ಧಿ ಹೊಂದಿದ ದೇಶದಲ್ಲಿ ಉತ್ತಮವಾಗಿ ಕಾಣುವ ನಿಯತಾಂಕವನ್ನು ತೆಗೆದುಕೊಳ್ಳುತ್ತಾರೆ ಮತ್ತು ಜನರನ್ನು ನಿಜವಾಗಿಯೂ ಸಂತೋಷಪಡಿಸುವ ನಿಯತಾಂಕವನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಸ್ವಾತಿ ಬೆಲ್ಲಮ್ ತಮ್ಮ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. 

ಉತ್ತಮ ಕುಟುಂಬ, ಸ್ನೇಹಿತರು, ಸಂತೃಪ್ತಿ ಮತ್ತು ಉತ್ತಮ ಹವಾಮಾನ 
ಭಾರತವು ಭೌತಿಕವಾಗಿ ಬಡವಾಗಿದೆ ಆದರೆ ನಾವು ಉತ್ತಮ ಕುಟುಂಬ ಮೌಲ್ಯಗಳನ್ನು ಹೊಂದಿದ್ದೇವೆ ಸಂಸ್ಕೃತಿ ನಾಗರಿಕತೆ ಮತ್ತು ಹವಾಮಾನವನ್ನು ಹೊಂದಿದ್ದೇವೆ, ಅಲ್ಲಿ ನಾವು ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯುತ್ತೇವೆ. ಇದರಿಂದ ಜನರು ಸಹ ನೆಮ್ಮದಿಯಾಗಿ ಖುಷಿಯಿಂದ ಜೀವಿಸಲು ಸಾಧ್ಯವಾಗಿದೆ. ಹಾಗಾಗಿ ಈ ಸಂತೋಷದ ಪಟ್ಟಿಯಲ್ಲಿ ಇಷ್ಟೊಂದು ಕೆಳಗೆ ಉಳಿಯಲು ಸಾಧ್ಯವಿಲ್ಲ ಎಂದಿದ್ದಾರೆ ಸ್ವಾತಿ ಬೆಲ್ಲಮ್. 

Latest Videos

click me!