ವಿಶ್ವದ 10 ಅತ್ಯಂತ ಸಂತೋಷದ ದೇಶಗಳಿವು… ಭಾರತಕ್ಕೆ ಯಾವ ಸ್ಥಾನ?

Published : Mar 21, 2023, 04:18 PM ISTUpdated : Mar 21, 2023, 05:32 PM IST

ವಿಶ್ವದ 10 ಅತ್ಯಂತ ಸಂತೋಷದ ದೇಶಗಳಲ್ಲಿ ಫಿನ್ ಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ. ಇದು ವಿಶ್ವದ ಅತ್ಯಂತ ಹ್ಯಾಪಿ ದೇಶವಂತೆ. ಹಾಗಿದ್ರೆ ಉಳಿದ 10 ಸ್ಥಾನದಲ್ಲಿ ಯಾವೆಲ್ಲಾ ದೇಶಗಳಿವೆ? ಜೊತೆಗೆ ಭಾರತ ಈ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ… 

PREV
112
ವಿಶ್ವದ 10 ಅತ್ಯಂತ ಸಂತೋಷದ ದೇಶಗಳಿವು… ಭಾರತಕ್ಕೆ ಯಾವ ಸ್ಥಾನ?

2023 ರ ವಿಶ್ವ ಸಂತೋಷ ವರದಿಯಲ್ಲಿ ವಿಶ್ವದ 10 ಸಂತೋಷದ ದೇಶಗಳ ಪಟ್ಟಿಯನ್ನು (world happy countries) ಬಿಡುಗಡೆ ಮಾಡಿದೆ. ಇದನ್ನು ಜಿಡಿಪಿ, ಜೀವನದ ಗುಣಮಟ್ಟ ಮತ್ತು ಜೀವಿತಾವಧಿ ಆಧಾರದ ಮೇಲೆ ರೇಟ್ ಮಾಡಲಾಗುತ್ತದೆ. ಭಾರತವು ಹ್ಯಾಪಿ ಇಂಡೆಕ್ಸ್ ಪಟ್ಟಿಯನ್ನು ಸ್ಥಿರವಾಗಿ ಸುಧಾರಿಸಿದೆ. 2021ರಲ್ಲಿ ಭಾರತ 139ನೇ ಸ್ಥಾನದಲ್ಲಿತ್ತು. ಭಾರತ ಸೇರಿದಂತೆ ವಿಶ್ವದ 10 ಅತ್ಯಂತ ಸಂತೋಷದ ದೇಶಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ- 

212

10. ಆಸ್ಟ್ರಿಯಾ (Austria)
ಆಸ್ಟ್ರಿಯಾ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಹ್ಯಾಪಿ ಇಂಡೆಕ್ಸ್ ನಲ್ಲಿ ಆಸ್ಟ್ರಿಯಾದ ಸ್ಕೋರ್ 7.268 ಆಗಿದೆ. 2022 ರ ಹೊತ್ತಿಗೆ, ಆಸ್ಟ್ರಿಯಾದ ಜನಸಂಖ್ಯೆ 90,66,710 ಆಗಿತ್ತು. ಇದೀಗ ಅತ್ಯಂತ ಖುಷಿಯಾಗಿರುವ ರಾಷ್ಟ್ರಗಳಲ್ಲಿ 10ನೇ ಸ್ಥಾನ ಪಡೆಯುವ ಮೂಲಕ ಹ್ಯಾಪಿ ರಾಷ್ಟ್ರ.

312

9. ನ್ಯೂಜಿಲೆಂಡ್ (New Zealand)
ವಿಶ್ವದ 10 ಅತ್ಯಂತ ಸಂತೋಷದ ದೇಶಗಳಲ್ಲಿ ನ್ಯೂಜಿಲೆಂಡ್ ಒಂಬತ್ತನೇ ಸ್ಥಾನದಲ್ಲಿದೆ. ಕ್ರಿಕೆಟ್ ಜಗತ್ತಿನಲ್ಲಿ ನ್ಯೂಜಿಲೆಂಡ್ ಅನ್ನು ಶಾಂತಿಪ್ರಿಯ ದೇಶ ಎಂದು ಕರೆಯಲಾಗುತ್ತದೆ. ಹ್ಯಾಪಿ ಇಂಡೆಕ್ಸ್‌ನಲ್ಲಿ ನ್ಯೂಜಿಲೆಂಡ್ 7.277 ಅಂಕಗಳನ್ನು ಪಡೆದಿದೆ. ಪ್ರಸ್ತುತ ನ್ಯೂಜಿಲೆಂಡ್ ನ ಜನಸಂಖ್ಯೆ 48,98,203 ಆಗಿದೆ.

412

8. ಲಕ್ಸೆಂಬರ್ಗ್ (Luxembourg)
ಹ್ಯಾಪಿ ಇಂಡೆಕ್ಸ್ ಪಟ್ಟಿಯಲ್ಲಿ ಲಕ್ಸೆಂಬರ್ಗ್ ಎಂಟನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಲಕ್ಸೆಂಬರ್ಗ್ ಸೂಚ್ಯಂಕದಲ್ಲಿ ಒಟ್ಟು 7.324 ಅಂಕಗಳನ್ನು ಪಡೆದಿದೆ. ಈ ಸುಂದರ ದೇಶವು ಯುರೋಪ್ ಖಂಡದಲ್ಲಿದೆ. ಫ್ರೆಂಚ್, ಜರ್ಮನ್, ಲಕ್ಸೆಂಬರ್ಗ್ ಮತ್ತು ಇಂಗ್ಲಿಷ್ ಅನ್ನು ಇಲ್ಲಿ ಹೆಚ್ಚು ಮಾತನಾಡಲಾಗುತ್ತದೆ. ದೇಶದ ಜನಸಂಖ್ಯೆ 6,42,371.

512

7. ಸ್ವೀಡನ್ (Sweden)
ಸ್ವೀಡನ್ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಈ ದೇಶವು ಯುರೋಪ್ ಖಂಡದಲ್ಲಿದೆ. ಆದರೆ, ವಿಸ್ತೀರ್ಣವು 5, 28, 447 ಚದರ ಕಿಲೋಮೀಟರ್ ಆಗಿದೆ. ಹ್ಯಾಪಿ ಇಂಡೆಕ್ಸ್ನಲ್ಲಿ ಸ್ವೀಡನ್ 7.363 ಅಂಕಗಳನ್ನು ಗಳಿಸಿದೆ. ದೇಶದ ಜನಸಂಖ್ಯೆ 10,218,971.

612

6. ನಾರ್ವೆ (Norway)
ನಾರ್ವೆ ಬಗ್ಗೆ ನಿಮಗೆ ತಿಳಿದಿದೆ. ಈ ದೇಶದ ರಾಜಧಾನಿ ಓಸ್ಲೋದಲ್ಲಿದೆ. ಅಷ್ಟೇ ಅಲ್ಲ, ದೇಶದ ಗಡಿಯು ಸ್ವೀಡನ್ ಮತ್ತು ರಷ್ಯಾದೊಂದಿಗೆ ಸಂಪರ್ಕ ಹೊಂದಿದೆ. ಸಂತೋಷದ ದೇಶಗಳ ಪಟ್ಟಿಯಲ್ಲಿ ನಾರ್ವೆ ಆರನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ನಾರ್ವೆ ಹ್ಯಾಪಿ ಸೂಚ್ಯಂಕದಲ್ಲಿ 7.392 ಅಂಕಗಳನ್ನು ಪಡೆದಿದೆ. ದೇಶದ ಜನಸಂಖ್ಯೆ 5,551,370.

712

5. ನೆದರ್ಲ್ಯಾಂಡ್ಸ್ (Netherland)
ನೆದರ್ಲ್ಯಾಂಡ್ಸ್ ವಿಶ್ವದ ಅಗ್ರ 10 ಸಂತೋಷದ ದೇಶಗಳಲ್ಲಿ ಐದನೇ ಸ್ಥಾನದಲ್ಲಿದೆ. ಇದು ಯುರೋಪ್ ಖಂಡದ ಪ್ರಮುಖ ದೇಶವಾಗಿದೆ. ಈ ದೇಶವನ್ನು ಹಾಲೆಂಡ್ ಎಂದೂ ಕರೆಯುತ್ತಾರೆ. ಈ ದೇಶದ ಜನಸಂಖ್ಯೆ 1,72,11,447. ಈ ದೇಶವು 33,591 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. 

812

4. ಐಸ್ಲ್ಯಾಂಡ್ (Iceland)
ವಿಶ್ವದ 10 ಸಂತೋಷದ ದೇಶಗಳಲ್ಲಿ ಐಸ್ಲ್ಯಾಂಡ್ ನಾಲ್ಕನೇ ಸ್ಥಾನದಲ್ಲಿದೆ. ಈ ದೇಶದ ಜನಸಂಖ್ಯೆ ಬಹಳ ಕಡಿಮೆ. ಐಸ್ಲ್ಯಾಂಡ್ 3,45,393 ಜನಸಂಖ್ಯೆಯನ್ನು ಹೊಂದಿದೆ. ಈ ದೇಶದ ಅತಿದೊಡ್ಡ ನಗರ ರೇಕ್ಜಾವಿಕ್. ಇದು ಪ್ರವಾಸಿಗರಿಗೆ ಪ್ರಿಯವಾದ ನಗರವೂ ಹೌದು.

912

3. ಸ್ವಿಟ್ಜರ್ಲೆಂಡ್  (Switzerland)
ಹ್ಯಾಪಿ ಇಂಡೆಕ್ಸ್ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಈ ದೇಶವು ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸ್ವಿಟ್ಜರ್ಲೆಂಡ್ ಗೆ ಭೇಟಿ ನೀಡುತ್ತಾರೆ. ಈ ದೇಶದ ಜನಸಂಖ್ಯೆ 87, 73, 637. ಅನೇಕ ಬಾಲಿವುಡ್ ಸೂಪರ್ ಹಿಟ್ ಚಲನಚಿತ್ರಗಳನ್ನು ಸ್ವಿಟ್ಜರ್ಲೆಂಡ್ ನಲ್ಲಿ ಚಿತ್ರೀಕರಿಸಲಾಗಿದೆ.

1012

2. ಡೆನ್ಮಾರ್ಕ್  (Denmark)
ಡೆನ್ಮಾರ್ಕ್ ವಿಶ್ವದ ಎರಡನೇ ಸಂತೋಷದ ದೇಶವಾಗಿದೆ. ಇದು ಜರ್ಮನಿಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಡೆನ್ಮಾರ್ಕ್ ಐಸ್ಲ್ಯಾಂಡ್ ನಂತರ ಅತ್ಯಂತ ಶಾಂತ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದ ದೇಶ ಇದಾಗಿದೆ. ಈ ದೇಶದ ಜನಸಂಖ್ಯೆ 58,34,950.

1112

1. ಫಿನ್ಲ್ಯಾಂಡ್  (Finland)
ಹ್ಯಾಪಿ ಇಂಡೆಕ್ಸ್‌ನಲ್ಲಿ ಫಿನ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಈ ದೇಶದ ಜನಸಂಖ್ಯೆ 55 ಲಕ್ಷಕ್ಕೂ ಹೆಚ್ಚು. ಹ್ಯಾಪಿ ಇಂಡೆಕ್ಸ್ನಲ್ಲಿ ಫಿನ್ಲ್ಯಾಂಡ್ 7.842 ಅಂಕಗಳನ್ನು ಗಳಿಸಿದೆ. ಕಳೆದ ಆರು ವರ್ಷಗಳಿಂದ ಈ ದೇಶ ಹ್ಯಾಪಿ ದೇಶವಾಗಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಜನರ ಆದಾಯ, ಸ್ವಾತಂತ್ರ್ಯ, ಜೀವನ ನಿರೀಕ್ಷೆ ಎಲ್ಲವೂ ಜನರು ಎಷ್ಟು ಸಂತೋಷವಾಗಿದ್ದಾರೆ ಅನ್ನೋದನ್ನು ಸೂಚಿಸುತ್ತೆ. 

1212

ಹಾಗಿದ್ರೆ ಭಾರತಕ್ಕೆ ಎಷ್ಟನೇ ಸ್ಥಾನ? 
ಹಾಗಿದ್ರೆ ಹ್ಯಾಪಿ ಇಂಡೆಕ್ಸ್ನಲ್ಲಿ (Happy index) ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂದು ನೀವು ಯೋಚಿಸುತ್ತಿರಬಹುದು ಅಲ್ವಾ? ಈ ಪಟ್ಟಿಯಲ್ಲಿ ಭಾರತ 136ನೇ ಸ್ಥಾನದಲ್ಲಿದೆ. ಏಕೆಂದರೆ, ಭಾರತದ (India) ಜನಸಂಖ್ಯೆ ಸಣ್ಣ ದೇಶಗಳಿಗಿಂತ ಹೆಚ್ಚಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

Read more Photos on
click me!

Recommended Stories