KARNATAKA BHARAT GAURAV DAKSHINA YATRA: ಹಿರಿಯ ನಾಗರಿಕರಿಗೆ ರೈಲಿನಲ್ಲಿ ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಲಭ್ಯ. ಕರ್ನಾಟಕ ಸರ್ಕಾರ, ಧರ್ಮಾದಾಯ ಇಲಾಖೆ ಮತ್ತು ಐಆರ್‌ಸಿಟಿಸಿ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, 5 ಸಾವಿರ ರೂಪಾಯಿ ಸಹಾಯಧನವೂ ಲಭ್ಯ.
ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಅನ್ನೋದು ಬಹುತೇಕ ಎಲ್ಲರ ಆಸೆಯಾಗಿರುತ್ತದೆ. ಆದರೆ ದೂರದ ಬಸ್ ಪ್ರಯಾಣದಿಂದ ಹಿರಿಯ ನಾಗರೀಕರು ಹಿಂದೇಟು ಹಾಕುತ್ತಿರುತ್ತಾರೆ. ಇದೀಗ ರೈಲಿನ ಮೂಲಕವೇ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ. ಇದಕ್ಕಾಗಿರುವ ವಿಶೇಷ ಪ್ಯಾಕೇಜ್‌ನ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
27
ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ
ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆಯ ಪ್ಯಾಕೇಜ್ ಬಗ್ಗೆ ತಿಳಿದಿರಲ್ಲ. ಈ ವಿಶೇಷ ಪ್ಯಾಕೇಜ್‌ನ್ನು ಕರ್ನಾಟಕ ಸರ್ಕಾರ, ಧರ್ಮಾದಾಯ ಇಲಾಖೆ ಮತ್ತು ಐಆರ್‌ಸಿಟಿಸಿ ಸಹಯೋಗದಲ್ಲಿ ಆರಂಭಿಸಲಾಗಿದೆ. ಈ ಪ್ಯಾಕೇಜ್ ಲಾಭ ಪಡೆದು ತೀರ್ಥಯಾತ್ರೆ ಮಾಡಹುದಾಗಿದೆ.
37
ಈ ವಿಶೇಷ ರೈಲು ಪ್ಯಾಕೇಜ್, ಪೌರಾಣಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳನ್ನು ಒಳಗೊಂಡಿದೆ. ಎಸ್‌ಎಂವಿಟಿ ಬೆಂಗಳೂರು, ತುಮಕೂರು, ಬೀರೂರು, ದಾವಣಗೆರೆಮ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ನಿಲ್ದಾಣದಿಂದ ಈ ರೈಲನ್ನು ಹತ್ತಬಹುದಾಗಿದೆ. ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ಸಹಾಯಧನವನ್ನು ಸಹ ನೀಡುತ್ತದೆ.
ಭಗವತಿ ದೇವಿ ಮತ್ತು ವಿವೇಕಾನಂದ ಶಿಲಾ ಸ್ಮಾರಕ: ಕನ್ಯಾಕುಮಾರಿ
ರಾಮನಾಥಸ್ವಾಮಿ: ರಾಮೇಶ್ವರಂ
57
ಯಾತ್ರೆಯ ಪ್ರಮುಖ ವೈಶಿಷ್ಟ್ಯಗಳು
ಪ್ರಯಾಣಿಕರಿಗೆ ಎಸಿ 3ಟೈರ್ ಪ್ರಯಾಣ ಸಿಗಲಿದೆ. ಪ್ರವಾಸದ ಅವಧಿಯಲ್ಲಿ ಸಸ್ಯಹಾರ ಊಟ ನೀಡಲಾಗುತ್ತದೆ. ಪ್ರತಿ ಕೋಚ್‌ಗೂ ಮಾರ್ಗದರ್ಶಕರು ಇರಲಿದ್ದಾರೆ. ಪ್ರಯಾಣ ವಿಮೆ, ರೈಲಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಹೊಂದಿರಲಿದೆ. ಸ್ಥಳ ವೀಕ್ಷಣೆಗೆ ಹವಾನಿಯಂತ್ರಿತವಲ್ಲದ ಬಸ್ ಸೇವೆ, ಕನ್ಯಾಕುಮಾರಿ/ರಾಮೇಶ್ವರಂನಲ್ಲಿ ಹವಾನಿಯಂತ್ರಣವಿಲ್ಲದ ಕೊಠಡಿಗಳಲ್ಲಿ ಇಬ್ಬರು ಅಥವಾ ಮೂವರು ಕೋಣೆಯನ್ನು ಶೇರ್ ಮಾಡಿಕೊಳ್ಳುವ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಇನ್ನುಳಿದಂತೆ ಅನ್ವಯವಾಗುವ ತೆರಿಗೆಗಳು ಈ ಪ್ಯಾಕೇಜ್‌ನಲ್ಲಿ ಸೇರಿವೆ.
67
ಇತರೆ ಮಾಹಿತಿ
ಪ್ರವಾಸ ದರ: 15,000 ರೂಪಾಯಿ
ಪ್ರವಾಸ ದಿನಾಂಕ: ಜೂನ್ 25 ರಿಂದ ಜೂನ್ 30 ಒಟ್ಟು 6 ದಿನಗಳು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.