Safest Countries for Women: ಮಹಿಳೆಯರು ಅತ್ಯಂತ ಸುರಕ್ಷಿತರಾಗಿರುವ ವಿಶ್ವದ ಟಾಪ್ 5 ದೇಶಗಳು ಇವು

Published : Jun 03, 2025, 05:47 PM IST

ಪ್ರಪಂಚದ ಯಾವ ಐದು ದೇಶಗಳು ಮಹಿಳೆಯರಿಗೆ ತುಂಬಾನೆ ಸುರಕ್ಷಿತವಾಗಿವೆ ಅನ್ನೋದು ಗೊತ್ತಾ? ಇಲ್ಲಿದೆ ಆ ಲಿಸ್ಟ್. ಈ ಲಿಸ್ಟ್ ನಲ್ಲಿ ಭಾರತ ಹೆಸರು ಇದೆಯಾ? ನೀವೆ ಚೆಕ್ ಮಾಡಿ.

PREV
17

ಸುರಕ್ಷಿತ ಜೀವನವು ಪ್ರತಿಯೊಬ್ಬ ಮಹಿಳೆಯ ಮೂಲಭೂತ ಹಕ್ಕಾಗಿದೆ, ಮತ್ತು ಕೆಲವು ದೇಶಗಳು ಪ್ರಪಂಚದಾದ್ಯಂತ ಈ ವಿಷಯದಲ್ಲಿ ಮಾದರಿಯಾಗಿವೆ. 2025 ರ ಮಹಿಳೆಯರು, ಶಾಂತಿ ಮತ್ತು ಭದ್ರತಾ ಸೂಚ್ಯಂಕ (Women, Peace and Security Index) ವರದಿಯ ಪ್ರಕಾರ, ಕೆಲವು ವಿಶೇಷ ದೇಶಗಳು ಮಹಿಳೆಯರ ಸುರಕ್ಷತೆ, ಹಕ್ಕುಗಳು ಮತ್ತು ನ್ಯಾಯದಲ್ಲಿ ಮುಂಚೂಣಿಯಲ್ಲಿವೆ.

27

ಕೆಲವು ದೇಶಗಳಲ್ಲಿ, ಮಹಿಳೆಯರು ರಾತ್ರಿಯೂ ಸಹ ಸುರಕ್ಷಿತವಾಗಿ ಒಂಟಿಯಾಗಿ ನಡೆದಾಡಬಹುದು ಮತ್ತು ಪುರುಷರಂತೆಯೇ ಹಕ್ಕುಗಳನ್ನು ಹೊಂದಿರುತ್ತಾರೆ. ಮಹಿಳೆಯರು, ಶಾಂತಿ ಮತ್ತು ಭದ್ರತಾ ಸೂಚ್ಯಂಕ (WPS Index) ಪ್ರಕಾರ, ಯಾವ ದೇಶಗಳು ಮಹಿಳೆಯರಿಗೆ ಅತ್ಯಂತ ಸುರಕ್ಷಿತವಾಗಿದೆ ಅನ್ನೋದನ್ನು ನೋಡೋಣ.

37

ಸುರಕ್ಷಿತವಾದ ತಾಣದಲ್ಲಿ ಡೆನ್ಮಾರ್ಕ್ (Denmark) ಮೊದಲ ಸ್ಥಾನದಲ್ಲಿದೆ. ಇದು ಮಹಿಳೆಯರಿಗೆ ಸಮಾನ ಕಾನೂನು ಹಕ್ಕುಗಳನ್ನು ಮತ್ತು ಬಲವಾದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಮಹಿಳೆಯರು ಆರಾಮವಾಗಿ, ಯಾವುದೇ ಸಮಸ್ಯೆ ಇಲ್ಲದೇ ಟ್ರಾವೆಲ್ ಮಾಡಬಹುದು.

47

ಸ್ವಿಟ್ಜರ್ಲೆಂಡ್ (Switzerland) ಎರಡನೇ ಸ್ಥಾನದಲ್ಲಿದೆ. ಇದು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ದೇಶ. ಈ ದೇಶ ಪ್ರಾಕೃತಿಕ ಸೌಂದರ್ಯದಲ್ಲೂ ತುಂಬಾನೆ ಸುಂದರವಾದ ತಾಣವಾಗಿದೆ. ಮಹಿಳೆಯರು ಇಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಜೀವಿಸಬಹುದು.

57

ಸ್ವೀಡನ್- ಇಲ್ಲಿ ಮಹಿಳೆಯರಿಗಾಗಿ ಹಲವು ಸಾಮಾಜಿಕ ಭದ್ರತಾ ಯೋಜನೆಗಳಿವೆ ಮತ್ತು ಅವರು ಪುರುಷರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಇಲ್ಲಿ ಜನರು ಭಯ ಪಟ್ಟು ಜೀವಿಸಲು ಅವಶ್ಯಕತೆಯೇ ಇರೋದಿಲ್ಲ.

67

ನಾರ್ವೆ (Norway)- ಇಲ್ಲಿನ ಮಹಿಳೆಯರು ಉನ್ನತ ಮಟ್ಟದ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಇದು ಸುಂದರವಾದ ಪುಟ್ಟ ದೇಶ ಕೂಡ ಹೌದು. ರಾತ್ರಿ ಹೊರಗುಳಿಯಲು ಭಯ ಪಡುವ ಅವಶ್ಯಕತೆ ಇಲ್ಲ. ಮಹಿಳೆಯರಿಗೆ ಇದು ಅತ್ಯಂತ ಸುರಕ್ಷಿತ ತಾಣ.

77

ಫಿನ್ಲ್ಯಾಂಡ್- ಈ ದೇಶದಲ್ಲಿ, ಮಹಿಳೆಯರಿಗೆ ಪುರುಷರಂತೆ ಸಮಾನ ಹಕ್ಕುಗಳಿವೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲಾಗುತ್ತದೆ. ಇವುಗಳ ಹೊರತಾಗಿ, ಐಸ್ಲ್ಯಾಂಡ್ ಅನ್ನು ವಿಶ್ವದ ಅತ್ಯಂತ ಸುರಕ್ಷಿತ ದೇಶವೆಂದು (safest country) ಪರಿಗಣಿಸಲಾಗಿದೆ ಮತ್ತು ಇದು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ದೇಶವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories