ಬೆಂಗಳೂರು ಮಂದಿಗೆ ರೈಲ್ವೆಯಿಂದ ಶುಭ ಸುದ್ದಿ; ಕಡಿಮೆ ಬೆಲೆಗೆ ಶಿರಡಿ ಸಾಯಿ ದರ್ಶನ

Published : Jun 09, 2025, 08:16 PM IST

ಐಆರ್‌ಸಿಟಿಸಿ ಬೆಂಗಳೂರು ಜನತೆಗೆ ಕಡಿಮೆ ಬೆಲೆಯಲ್ಲಿ ಶಿರಡಿ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಮೂರು ರಾತ್ರಿ ಮತ್ತು ನಾಲ್ಕು ದಿನಗಳ ಈ ಪ್ಯಾಕೇಜ್‌ನಲ್ಲಿ ಎಸಿ ವಸತಿ, ಊಟ, ಮತ್ತು ಪ್ರಯಾಣ ವ್ಯವಸ್ಥೆಗಳು ಸೇರಿವೆ. 

PREV
18

ಐಆರ್‌ಸಿಟಿಸಿ ಬೆಂಗಳೂರು ಜನತೆಗೆ ವಿಶೇಷ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಕಡಿಮೆ ಬೆಲೆಗೆ ಶಿರಡಿ ಪ್ರವಾಸವನ್ನು ನೀಡುತ್ತಿದೆ. ಮೂರು ರಾತ್ರಿ ಮತ್ತು ನಾಲ್ಕು ದಿನಗಳ ಪ್ರವಾಸ ಪ್ಯಾಕೇಜ್ ಮಾಹಿತಿ ಇಲ್ಲಿದೆ.

28

ಈ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಸ್ಲೀಪರ್ ಮತ್ತು 3A ದರ್ಜೆಯ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಶಿರಡಿಯಲ್ಲಿ 1 ರಾತ್ರಿಗೆ ಸ್ಟ್ಯಾಂಡರ್ಡ್ ಮತ್ತು ಕಂಫರ್ಟ್ ಎರಡಕ್ಕೂ ಸ್ಟ್ಯಾಂಡರ್ಡ್ ಹೋಟೆಲ್‌ನಲ್ಲಿ ಎಸಿ ವಸತಿ ಸೌಲಭ್ಯವನ್ನು ಹೊಂದಿರುತ್ತದೆ.

38

ಹೋಟೆಲ್‌ನಲ್ಲಿ ಒಂದು ಬಾರಿ ಮತ್ತು ಒಂದು ಉಪಹಾರವನ್ನು ಸಹ ಒದಗಿಸಲಾಗುತ್ತದೆ. ಸ್ಟ್ಯಾಂಡರ್ಡ್ ಮತ್ತು ಕಂಫರ್ಟ್ ಎರಡಕ್ಕೂ ಎಸಿ ವಾಹನದಿಂದ SIC ಆಧಾರದ ಮೇಲೆ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರಯಾಣದ ವೇಳಾಪಟ್ಟಿಯ ಪ್ರಕಾರ ವರ್ಗಾವಣೆ ಮತ್ತು ದೃಶ್ಯವೀಕ್ಷಣೆ ಸಮಯ ನಿಗಧಿಪಡಿಸಲಾಗುತ್ತದೆ. ಈ ಶಿರಡಿ ಪ್ಯಾಕೇಜ್ ಪ್ರಯಾಣ ವಿಮೆಯನ್ನ ಒಳಗೊಂಡಿರುತ್ತದೆ. ಈ ಸೇವೆಯು ಟೋಲ್, ಪಾರ್ಕಿಂಗ್ ಮತ್ತು ಅನ್ವಯವಾಗುವ ಎಲ್ಲಾ ತೆರಿಗೆಗಳು ಅನ್ವಯವಾಗುತ್ತವೆ.

48

ಪ್ರಯಾಣ ಹೀಗಿರಲಿದೆ

ಮೊದಲ ದಿನ: ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ 19:20 ಗಂಟೆಗೆ ರೈಲು ಸಂಖ್ಯೆ 12627 ರಲ್ಲಿ ರಾತ್ರಿ ಪ್ರಯಾಣ ಆರಂಭವಾಗುತ್ತದೆ. ಮರುದಿನ ರೈಲು ಕೊಪ್ರಗಾಂವ್ ನಿಲ್ದಾಣಕ್ಕೆ 13:37 ಗಂಟೆಗೆ ಆಗಮಿಸುತ್ತದೆ. ಇಲ್ಲಿಂದ ಶಿರಡಿಗೆ ತೆರಳಲು ಸಹಾಯ ಮಾಡುತ್ತದೆ. ದರ್ಶನ ಬಳಿಕ ಶಿರಡಿಯಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತದೆ.

58

ಮೂರನೇ ದಿನ ಬೆಳಗ್ಗೆ ಉಪಾಹಾರದ ನಂತರ ಚೆಕ್ ಔಟ್ ಮಾಡಿ ಮತ್ತು ಶನಿಸಿಂಗನಪುರ ದೇವಸ್ಥಾನದ ದರ್ಶನ. ದೃಶ್ಯವೀಕ್ಷಣೆಯ ನಂತರ 16.30 ಗಂಟೆಗೆ ಕೋಪರ್ಗಾನ್ ರೈಲು ನಿಲ್ದಾಣಕ್ಕೆ ಬರಲಾಗುತ್ತದೆ. ಇಲ್ಲಿಂದ 16.30 ಗಂಟೆಗೆ ರೈಲು ಸಂಖ್ಯೆ 12628 ಹೊರಡುತ್ತದೆ. ನಾಲ್ಕನೇ ದಿನ 12.00 ಗಂಟೆಗೆ ಕೆಎಸ್ಆರ್ ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ.

68

ಟಿಕೆಟ್ ಬುಕ್ ಸಂಪರ್ಕಿಸಬೇಕಾದ ಸಂಖ್ಯೆ

IRCTC- BENGALURU

No. 82 SMR Arcade, 1st Floor, Dr. Raj Kumar Road

Rajaji Nagar 2nd Block BENGALURU- 560010

Phone no -080-43023088/ 8595931291

E-mail: tourismsbc[at]irctc[dot]com

Website: www.irctctourism.com

78

IRCTC - Tourism Information and Facilitation Centre

ಬೆಂಗಳೂರು ಸಿಟಿ ರೈಲ್ವೆ ಸ್ಟೇಶನ್- 8595931292

ಮೈಸೂರು ಸಿಟಿ ರೈಲ್ವೆ ಸ್ಟೇಶನ್: - 8595931294

ಹುಬ್ಬಳ್ಳಿ ರೈಲ್ವೆ ಸ್ಟೇಶನ್: - 8595931293

88

ಟಿಕೆಟ್ ಬೆಲೆ

ಶಿರಡಿ ಪ್ರಯಾಣದ ಟಿಕೆಟ್ ದರಗಳು 5,790 ರೂಪಾಯಿಯಿಂದ ಆರಂಭವಾಗತ್ತದೆ. ಮುಂದಿನ ಪ್ರಯಾಣ ಜೂನ್ 14ರಂದು ಇರಲಿದೆ. ಟಿಕೆಟ್ ಮತ್ತು ಹೋಟೆಲ್ ಆಯ್ಕೆ ಮೇಲೆ ಪ್ಯಾಕೇಜ್ ಬೆಲೆ ಬೇರೆ ಬೇರೆಯಾಗಿರುತ್ತದೆ. ಟಿಕೆಟ್ ದರದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ

Read more Photos on
click me!

Recommended Stories