ಭಾರತವು ದೇಗುಲಗಳ ತವರೂರು, ಇಲ್ಲಿ ಸಾಕಷ್ಟು ದೇವಾಲಯಗಳು ಇವೆ. ಭಾರತದಲ್ಲಿ ಯಾವ ರಾಜ್ಯಗಳಲ್ಲಿ ಎಷ್ಟು ದೇವಾಲಯಗಳಿವೆ. ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳಿವೆ (Hindu Temples) ಇಲ್ಲಿದೆ ಮಾಹಿತಿ.
211
ಬಿಹಾರದಲ್ಲಿ 29748 ಹಿಂದೂ ದೇವಾಲಯಗಳಿವೆ. ಸಂಕಟ ಮೋಚನ ಹನುಮಾನ್ ಮಂದಿರ, ಮುಂಡೇಶ್ವರಿ ದೇಗುಲ, ವಿಷ್ಣುಪಾದ ದೇವಾಲಯ, ತಾಯಿ ಶೀತಲ ದೇಗುಲ, ಮಹಾವೀರ ದೇಗುಲ ಸೇರಿ ಹಲವು ದೇಗುಲಗಳು ಇಲ್ಲಿವೆ.
311
ಒಡಿಶಾದಲ್ಲಿ 30,877 ದೇವಾಲಯಗಳಿವೆ. ಪುರಿ ಜಗನ್ನಾಥ ದೇವಸ್ಥಾನ, ಕೋಣರ್ಕ್ ಸೂರ್ಯ ದೇವಾಲಯ, ಬ್ರಹ್ಮೇಶ್ವರ ದೇವಾಲಯ, ಮುಕ್ತೇಶ್ವರ ದೇವಾಲಯ, ಲಿಂಗರಾಜ್ ದೇವಾಲಯ ಇಲ್ಲಿವ ಪ್ರಮುಖ ದೇವಾಲಯಗಳಾಗಿವೆ.
ಉತ್ತರ ಪ್ರದೇಶದಲ್ಲಿ ಈ ಸಂಖ್ಯೆ 37,518 ದೇವಾಲಯಗಳಿವೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ, ಅಯೋಧ್ಯೆಯ ರಾಮಜನ್ಮಭೂಮಿ (Ayodhya Ramajanma Bhoomi) ದೇವಾಲಯ, ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯ, ವೃಂದಾವನದ ಬಂಕೆ ಬಿಹಾರಿ ದೇವಾಲಯ ಈ ರಾಜ್ಯದ ಪ್ರಮುಖ ದೇಗುಲಗಳು. ಇನ್ನು ಹಲವು ಜನಪ್ರಿಯ ದೇಗುಲಗಳು ಉತ್ತರ ಪ್ರದೇಶದಲ್ಲಿವೆ.
511
ರಾಜಸ್ಥಾನದಲ್ಲಿ 39,352 ಹಿಂದೂ ದೇವಾಲಯಗಳಿವೆ. ಉದಯಪುರದ ಎಕ್ಲಿಂಗ್ಜಿ ದೇವಾಲಯ, ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯ, ದೇಶ್ನೋಕ್‌ನಲ್ಲಿರುವ ಕರ್ಣಿ ಮಾತಾ ದೇವಾಲಯ (Karni Mata Temple) ಮತ್ತು ಜೈಪುರದ ಬಿರ್ಲಾ ಮಂದಿರ. ಕರೌಲಿಯಲ್ಲಿರುವ ಮೆಹಂದಿಪುರ ಬಾಲಾಜಿ ದೇವಾಲಯ, ಜೈಪುರದ ಗಲ್ತಾಜಿ ದೇವಾಲಯ ಮತ್ತು ಜಗತ್‌ನಲ್ಲಿರುವ ಅಂಬಿಕಾ ಮಾತಾ ದೇವಾಲಯಗಳು ಇತರ ಪ್ರಮುಖ ದೇವಾಲಯಗಳಾಗಿವೆ.
ಸೋಮನಾಥ ದೇವಾಲಯ, ದ್ವಾರಕಾಧೀಶ್ ದೇವಾಲಯ, ಅಂಬಾಜಿ ದೇವಾಲಯ, ಮೊಧೇರಾ ಸೂರ್ಯ ದೇವಾಲಯ, ಮತ್ತು ಅಕ್ಷರಧಾಮ ದೇವಾಲಯ ಸೇರಿ ಗುಜರಾತ್‌ನಲ್ಲಿ 49,995 ಹಿಂದೂ ದೇವಾಲಯಗಳಿವೆ.
811
ಪಶ್ಚಿಮ ಬಂಗಾಳದಲ್ಲಿ 53,857 ದೇವಾಲಯಗಳಿವೆ. ಮದನ್ ಮೋಹನ್ ದೇವಸ್ಥಾನ, ಜಲಪೇಶ್ ದೇವಸ್ಥಾನ, ತಾರಾಪೀಠ ದೇವಸ್ಥಾನ, ಕಿರೀಟೇಶ್ವರಿ ದೇವಸ್ಥಾನ, ಬಿಷ್ಣುಪುರ ಟೆರಾಕೋಟಾ ದೇವಸ್ಥಾನಗಳು, ಮಾಯಾಪುರ ಚಂದ್ರೋದಯ ಮಂದಿರ, ನಬ ಕೈಲಾಸ ಮಂದಿರ, ಠಾಕೂರ್ಬರಿ ಮತುವ ಧಾಮ್, ತಾರಕೇಶ್ವರ ದೇವಸ್ಥಾನ, ಹಂಗಸೇಶ್ವರಿ ದೇವಸ್ಥಾನ, ಬರ್ಗಭೀಮ ದೇವಸ್ಥಾನ, ಬೇಲೂರು ಮಠ, ಕಾಳಿಘಾಟ್ ದೇವಸ್ಥಾನ ಇಲ್ಲಿನ ಪ್ರಮುಖ ದೇವಾಲಯಗಳಿವೆ.
911
ಕರ್ನಾಟಕದಲ್ಲಿರುವ ಹಿಂದೂ ದೇವಾಲಯಗಳ ಸಂಖ್ಯೆ 61,232. ವಿರೂಪಾಕ್ಷ ದೇವಸ್ಥಾನ (ಹಂಪಿ), ಚೆನ್ನಕೇಶವ ದೇವಸ್ಥಾನ (ಬೇಲೂರು), ಹೊಯ್ಸಳೇಶ್ವರ ದೇವಸ್ಥಾನ (ಹಳೇಬೀಡು), ಮತ್ತು ಮುರುಡೇಶ್ವರ ದೇವಸ್ಥಾನ (ಮುರುಡೇಶ್ವರ). ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಶೃಂಗೇರಿ ಶಾರದಾಂಬಾ ದೇವಸ್ಥಾನ, ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ (Kukke Subramanya), ಕದ್ರಿ ಮಂಜುನಾಥ ದೇವಾಲಯ ಇತರ ಗಮನಾರ್ಹ ದೇವಾಲಯಗಳಾಗಿವೆ.
1011
ಮಹಾರಾಷ್ಟ್ರದಲ್ಲಿ 77,283 ದೇವಾಲಯಗಳಿವೆ. ಶಿರಡಿ ಸಾಯಿ ಬಾಬ ದೇವಸ್ಥಾನ, ಗಣಪತಿಪುಲೆ, ಶನಿ ಸಿಂಗ್ನಾಪುರ್, ತ್ರಿಯಂಬಕೇಶ್ವರ ದೇವಾಲಯ, ಭೀಮಶಂಕರ ದೇವಾಲಯ, ಸಿದ್ದಿ ವಿನಾಯಕ ದೇವಾಲಯ, ಹರಿಹರೇಶ್ವರ ದೇವಾಲಯ, ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯ, ಗೃಶ್ನೇಶ್ವರ ಜ್ಯೋತಿರ್ಲಿಂಗ ಇಲ್ಲಿನ ಪ್ರಮುಖ ದೇಗುಲಗಳು
1111
ತಮಿಳುನಾಡಿನಲ್ಲಿ ಅತಿ ಹೆಚ್ಚು ಹಿಂದೂ ದೇವಾಲಯಗಳಿವೆ. ಇಲ್ಲಿ ಸುಮಾರು 78,154 ದೇಗುಲಗಳಿಗೆ. ಮಧುರೆ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಮಹಾಬಲಿಪುರಂ, ತಂಜಾವೂರಿನ ಬೃಹದೀಶ್ವರ ದೇವಸ್ಥಾನ ಮತ್ತು ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನ ಸೇರಿ ಅದೆಷ್ಟೋ ಐತಿಹಾಸಿಕ ಪ್ರಸಿದ್ಧ ಪಡೆದಿರುವ ದೇವಾಲಯಗಳಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.