ಇಲ್ಲಿ ಏಕಕಾಲದಲ್ಲಿ 2 ಜಿಲ್ಲೆಗಳಲ್ಲಿ ನಿಲುಗಡೆಯಾಗುತ್ತೆ ರೈಲು: ಭಾರತೀಯ ರೈಲ್ವೆಯ ವಿಶೇಷ ನಿಲ್ದಾಣ

Published : Jul 01, 2025, 09:40 AM IST

ಈ  ವಿಶೇಷ ರೈಲು ನಿಲ್ದಾಣವು ಎರಡು ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ರೈಲು ನಿಲುಗಡೆಯಾದಾಗ ಅರ್ಧ ಭಾಗ ಒಂದು ಜಿಲ್ಲೆಯಲ್ಲಿ ಮತ್ತು ಇನ್ನರ್ಧ ಭಾಗ ಮತ್ತೊಂದು ಜಿಲ್ಲೆಯಲ್ಲಿ ನಿಲ್ಲುತ್ತದೆ. ಈ ವಿಶಿಷ್ಟತೆಯಿಂದಾಗಿ ನಿಲ್ದಾಣವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧವಾಗಿದೆ.

PREV
16

ಭಾರತೀಯ ರೈಲ್ವೆ ಜಾಲವನ್ನ ದೇಶದ ಜೀವನದಿ ಎಂದು ಕರೆಯಲಾಗುತ್ತದೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ದಿನಕ್ಕೆ ಒಂದು ರೈಲು ನಿಲುಗಡೆ ನಿಲ್ದಾಣವೂ ಭಾರತದಲ್ಲಿದೆ. ದಿನಕ್ಕೆ ನೂರಾರು ರೈಲುಗಳು ಕಾರ್ಯ ನಿರ್ವಹಿಸುವ ನಿಲ್ದಾಣಗಳಿವೆ.

26

ಇಂದು ನಾವು ಹೇಳುತ್ತಿರುವ ನಿಲ್ದಾಣ ತುಂಬಾ ವಿಶೇಷತೆಯನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿರುವ ಈ ರೈಲು ನಿಲ್ದಾಣದ ವಿಶೇಷತೆ ಕೇಳಿದ್ರೆ ನಿಮಗೆ ಖಂಡಿತ ಆಶ್ವರ್ಯವಾಗುತ್ತದೆ. ಈ ನಿಲ್ದಾಣದ ಪ್ಲಾಟ್‌ಫಾರಂ ಎರಡು ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ.

36

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿರುವ ಕಾಂಚೌಸಿ ರೈಲು ನಿಲ್ದಾಣ ಎರಡು ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ಕಾಂಚೋಸಿಗೆ ಬರುವ ರೈಲುಗಳು ಏಕಕಾಲದಲ್ಲಿ ಎರಡು ಜಿಲ್ಲೆಗಳಲ್ಲಿ ನಿಲುಗಡೆಯಾಗುತ್ತವೆ. ಅರ್ಧದಷ್ಟು ರೈಲು ಒಂದು ಜಿಲ್ಲೆಯಲ್ಲಿ ನಿಲ್ಲುತ್ತದೆ ಮತ್ತು ಇನ್ನರ್ಧ ಇನ್ನೊಂದು ಜಿಲ್ಲೆಯಲ್ಲಿ ನಿಲ್ಲುತ್ತದೆ.

46

ಎರಡು ಜಿಲ್ಲೆಯಲ್ಲಿ ನಿಲುಗಡೆ

ಕಾಂಚೌಸಿ ನಿಲ್ದಾಣದಲ್ಲಿ ರೈಲು ನಿಲುಗಡೆಯಾದ್ರೆ ಅರ್ಧ ಭಾಗ ಕಾನ್ಪುರ ದೇಹತ್‌ನಲ್ಲಿ ಮತ್ತು ಅರ್ಧ ಭಾಗ ಔರೈಯಾ ಜಿಲ್ಲೆಯಲ್ಲಿ ನಿಲ್ಲುತ್ತದೆ. ಈ ವಿಶೇಷತೆಯಿಂದ ರೈಲು ನಿಲ್ದಾಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

56

ರೈಲು ನಿಲ್ದಾಣದ ಕಚೇರಿ ನ್ಪುರ್ ದೇಹತ್ ಜಿಲ್ಲೆಯಲ್ಲಿದೆ. ರೈಲು ನಿಲ್ದಾಣದ ಗಡಿ ಔರೈಯಾ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಆರಂಭದಲ್ಲಿ ಪ್ಯಾಸೆಂಜರ್/ಲೋಕಲ್ ರೈಲುಗಳು ಮಾತ್ರ ಇಲ್ಲಿ ನಿಲುಗಡೆಯಾಗುತ್ತಿದ್ದವು. ಇದೀಗ ಫರಕ್ಕಾ ಎಕ್ಸ್‌ಪ್ರೆಸ್‌ ಸೇರಿದಂತೆ ಕೆಲ ಎಕ್ಸ್‌ಪ್ರೆಸ್ ರೈಲುಗಳು ಸಹ ನಿಲ್ಲುತ್ತಿವೆ.

66

ಉತ್ತರ ಪ್ರದೇಶದ ರೈಲು ಜಾಲ

ಭಾರತೀಯ ರೈಲ್ವೆ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ಜಾಲವಾಗಿದೆ. ಉತ್ತರ ಪ್ರದೇಶವು ದೇಶದ ಏಕೈಕ ಅತಿದೊಡ್ಡ ರೈಲು ಜಾಲವನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಒಟ್ಟು 9077.45 ಕಿ.ಮೀ ಉದ್ದದ ರೈಲು ಜಾಲವಿದ್ದು, ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.

Read more Photos on
click me!

Recommended Stories