Published : Mar 25, 2025, 02:08 PM ISTUpdated : Mar 25, 2025, 02:15 PM IST
India Post: ಜಮ್ಮು ಕಾಶ್ಮೀರದ ದಾಲ್ ಸರೋವರದಲ್ಲಿರುವ ತೇಲುವ ಅಂಚೆ ಕಚೇರಿಯು ಒಂದು ವಿಶಿಷ್ಟ ಆಕರ್ಷಣೆಯಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ಸ್ಥಾಪಿತವಾಗಿ 2011 ರಲ್ಲಿ ನವೀಕರಣಗೊಂಡಿತು. ಇದು ಅಂಚೆ ಸೇವೆಗಳ ಜೊತೆಗೆ ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ.
ಭಾರತದ ಪ್ರತಿಯೊಂದು ಗ್ರಾಮದಲ್ಲಿಂದು ನಾವು ಅಂಚೆ ಕಚೇರಿಗಳನ್ನು ನೋಡಬಹುದಾಗಿದೆ. ಸಾಮಾನ್ಯವಾಗಿ ಕಾಣುವ ಪೋಸ್ಟ್ ಆಫೀಸ್‌ಗಳಿಗಿಂತ ವಿಭಿನ್ನವಾದ ಒಂದು ಪೋಸ್ಟ್ ಆಫೀಸ್ ಭಾರತದಲ್ಲಿದೆ ಎಂದು ಹಲವರಿಗೆ ತಿಳಿದಿಲ್ಲ. ಈ ಪೋಸ್ಟ್ ಆಫಿಸ್ ನೀರಿನಲ್ಲಿ ತೇಲುತ್ತದೆ.
27
ದೇಶದ ಇತರ ಯಾವುದೇ ಅಂಚೆ ಕಚೇರಿಗಿಂತ ಭಿನ್ನವಾಗಿ, ಈ ಪೋಸ್ಟ್ ಆಫೀಸ್ ಮರದಿಂದ ಸುಂದರವಾಗಿ ವಿನ್ಯಾಸಗೊಳಿಸಲಾದ ಹೌಸ್ ಬೋಟ್‌ನಲ್ಲಿದೆ.
37
ಬ್ರಿಟಿಷರ ಕಾಲದಲ್ಲಿ ಈ ಪೋಸ್ಟ್ ಆಫೀಸ್ ಸ್ಥಾಪಿಸಲಾಗಿತ್ತು. ನಂತರ 2011 ರಲ್ಲಿ ಈ ಅಂಚೆ ಕಚೇರಿಯನ್ನು ನವೀಕರಿಸಲಾಯಿತು. ಈ ಪೋಸ್ಟ್ ಆಫಿಸ್ ಪ್ರವಾಸಿಗರ ತಾಣವಾಗಿಯೂ ಮಾರ್ಪಟ್ಟಿದೆ. ಈ ಅಂಚೆ ಕಚೇರಿಯನ್ನು ನೋಡಲು ಪ್ರವಾಸಿಗರು ಆಗಮಿಸುತ್ತಾರೆ.
47
ಪತ್ರಗಳು, ಪೋಸ್ಟ್‌ಕಾರ್ಡ್‌ಗಳು, ಬ್ಯಾಂಕಿಂಗ್ ಸೌಲಭ್ಯಗಳು ಸೇರಿದಂತೆ ಸಾಮಾನ್ಯ ಅಂಚೆ ಸೇವೆಗಳು ಇಲ್ಲಿ ಲಭ್ಯವಿದೆ. ಇಲ್ಲಿಂದ ಕಳುಹಿಸುವ ಪತ್ರಗಳಲ್ಲಿ ದಾಲ್ ಸರೋವರದ ಚಿತ್ರವಿರುವ ಸುಂದರವಾದ ಮುದ್ರೆಯನ್ನು ಹಾಕಲಾಗುತ್ತದೆ. ಈ ಪೋಸ್ಟ್ ಆಫಿಸ್ ಜಮ್ಮು ಕಾಶ್ಮೀರದ ಶ್ರೀನಗರದ ದಾಲ್ ಸರೋವರದ ಮೇಲಿದೆ.
57
ಇದು ಕೇವಲ ಪೋಸ್ಟ್ ಆಫೀಸ್ ಆಗಿರದೆ ಕಾಶ್ಮೀರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಸಾಂಪ್ರದಾಯಿಕ ಕಾಶ್ಮೀರಿ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಹೌಸ್ ಬೋಟ್‌ನಲ್ಲಿ ಪೋಸ್ಟ್ ಆಫೀಸ್ ಕಾರ್ಯನಿರ್ವಹಿಸುತ್ತದೆ.
67
ಇದು ಸರೋವರದ ಸೌಂದರ್ಯಕ್ಕೆ ತಕ್ಕಂತೆ ನಿರ್ಮಿಸಲಾಗಿದೆ. ಸ್ಥಳೀಯರು ತಮ್ಮ ದಿನನಿತ್ಯದ ಅಂಚೆ ಅಗತ್ಯಗಳಿಗಾಗಿ ಈ ಪೋಸ್ಟ್ ಆಫೀಸ್ ಅನ್ನು ಅವಲಂಬಿಸಿದ್ದಾರೆ. ಇದರ ಆಕರ್ಷಣೆಯಿಂದಾಗಿ ಅನೇಕ ಪ್ರವಾಸಿಗರು ದಾಲ್ ಸರೋವರಕ್ಕೆ ಬರುತ್ತಾರೆ.
77
ಭಾರತದ ಅಂಚೆ ಸೇವೆಗಳ ವಿಕಾಸವನ್ನು ಗುರುತಿಸುವ ಹಳೆಯ ಸ್ಟಾಂಪ್‌ಗಳು ಮತ್ತು ಪತ್ರಗಳನ್ನು ಪ್ರದರ್ಶಿಸುವ ಸಣ್ಣ ಫಿಲಾಟೆಲಿಕ್ ಮ್ಯೂಸಿಯಂ ಇಲ್ಲಿದೆ. ಈ ಮ್ಯೂಸಿಯಂನಲ್ಲಿರುವ ವಸ್ತುಗಳು ಸಂದರ್ಶಕರಿಗೆ ದೇಶದ ಸಂವಹನ ಸಂಪ್ರದಾಯದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಕಾಶ್ಮೀರದ ಸೌಂದರ್ಯ ಮತ್ತು ಭಾರತದ ಸಂಪ್ರದಾಯದ ಸಂಕೇತವಾಗಿರುವ ಈ ಫ್ಲೋಟಿಂಗ್ ಪೋಸ್ಟ್ ಆಫೀಸ್ ಕಾಶ್ಮೀರ ಪ್ರವಾಸದಲ್ಲಿ ನೋಡಲೇಬೇಕಾದ ಸ್ಥಳವಾಗಿದೆ.