ರೈಲಿನಲ್ಲಿ ಸಹಜ ಸಾವು ಸಂಭವಿಸಿದ್ರೆ ಪರಿಹಾರ ಸಿಗುತ್ತಾ? ಭಾರತೀಯ ರೈಲ್ವೆಯ ನಿಯಮಗಳೇನು?

First Published | Jan 16, 2025, 12:36 PM IST

Indian Railway Compensation Rules: ಒಂದು ವೇಳೆ ರೈಲು ಪ್ರಯಾಣದಲ್ಲಿ ಪ್ರಯಾಣಿಕ ಕುಳಿತಲ್ಲೇ ಸಾವನ್ನಪ್ಪಿದ್ರೆ ಪರಿಹಾರ ಸಿಗುತ್ತಾ? ಭಾರತೀಯ ರೈಲ್ವೆಯ ನಿಯಮಗಳೇನು?

ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರಯಾಣಿಕರಿಗಾಗಿ  ರೈಲ್ವೆಯೂ ಸಹ ಹಲವು ಸೌಲಭ್ಯಗಳನ್ನು ನೀಡುತ್ತಿವೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣವು ಅತ್ಯಂತ ಆರಾಮಾದಾಯಕವಾಗಿದೆ.

ಈ ಕಾರಣದಿಂದಲೇ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದ ಬಹುತೇಕ ಜನರು ಸಹ ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಆದ್ರೂ ಕೆಲವು ಬಾರಿ ರೈಲು ಅಪಘಾತಗಳು ಸಂಭವಿಸುತ್ತವೆ.  ರೈಲು ಅಪಘಾತದಲ್ಲಿ ಮೃತರಾದ್ರೆ ಪರಿಹಾರ ಸಿಗುತ್ತದೆ.

Tap to resize

Indian Railways

ರೈಲು ಅಪಘಾತದಲ್ಲಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದ್ರೆ ರೈಲು ಪ್ರಯಾಣದಲ್ಲಿ ಪ್ರಯಾಣಿಕರು ಮೃತರಾದ್ರೆ, ಪರಿಹಾರ ಸಿಗುತ್ತಾ? ಪ್ರಯಾಣಿಕ ಕುಳಿತಲ್ಲೇ ಸಾವನ್ನಪ್ಪಿದ್ದರೆ ಎಷ್ಟು  ಹಣ ಸಿಗುತ್ತೆ? ಭಾರತೀಯ ರೈಲ್ವೆ ನಿಯಮಗಳು ಏನು ಹೇಳುತ್ತೇವೆ?

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ. ರೈಲ್ವೇ ನಿಯಮಗಳ ಪ್ರಕಾರ, ರೈಲಿನಲ್ಲಿ ಯಾರಾದರೂ ಸಹಜವಾಗಿ ಸತ್ತರೆ ಇದಕ್ಕೆ ಭಾರತೀಯ ರೈಲ್ವೆ ಇದಕ್ಕೆ ಕಾರಣವಾಗುತ್ತದೆ. ಮೃತರಾದ  ವ್ಯಕ್ತಿಯ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ.

ಪ್ರಯಾಣಿಕ ಒಂದು ವೇಳೆ ಕಾಯಿಲೆಯಿಂದ ಬಳಲುತ್ತಿದ್ದ, ಅವನು ಮೃತನಾದ್ರೆ ಭಾರತೀಯ ರೈಲ್ವೆಯಿಂದ ಯಾವುದೇ ಪರಿಹಾರ ಸಿಗಲ್ಲ. ಪ್ರಯಾಣಿಕರೇ ರೈಲು ಹತ್ತುವಾಗ ಆಯತಪ್ಪಿ ಬಿದ್ದರೆ, ಬಾಗಿಲಿನಿಂದ ಕೆಳಗೆ ಬಿದ್ದು ಸತ್ತರೂ ಭಾರತೀಯ ರೈಲ್ವೆಯು ಯಾವುದೇ  ಪರಿಹಾರವನ್ನು ಸಹ ನೀಡಲಾಗುವುದಿಲ್ಲ.

ಭಾರತೀಯ ರೈಲ್ವೇಯ ಯಾವುದಾದ್ರೂ ತಪ್ಪಿನಿಂದ ಒಬ್ಬ ಪ್ರಯಾಣಿಕ ಸಾವನ್ನಪ್ಪಿದರೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ರೈಲ್ವೆಗೆ ಪರಿಹಾರವನ್ನು ನೀಡಲಾಗುತ್ತದೆ. ಇದಕ್ಕಾಗಿ ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕು. ಆಗ ಮಾತ್ರ ಪರಿಹಾರ ಸಿಗುತ್ತದೆ.

Latest Videos

click me!