ಭಾರತದಲ್ಲಿ ಅನೇಕ ಭಾಷೆಗಳನ್ನು ಮಾತನಾಡಲಾಗುತ್ತದೆ. ಅವುಗಳಲ್ಲಿ ಒಂದು ಇಂಗ್ಲಿಷ್ (English). ಭಾರತದ ಯಾವ ರಾಜ್ಯದಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯ ಸ್ಥಾನಮಾನವನ್ನು ಹೊಂದಿದೆ ಅನ್ನೋದು ನಿಮಗೆ ತಿಳಿದಿದೆಯೇ?
ಭಾರತವು ವೈವಿಧ್ಯಮಯ ದೇಶವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಮೆರೆವ ದೇಶ ನಮ್ಮದು, ಇಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಜನರಿದ್ದಾರೆ. ಬೇರೆ ಬೇರೆ ಸಂಸ್ಕೃತಿಯ ಜನ ಕೂಡ ಇದ್ದಾರೆ. ಒಂದೊಂದು ಪ್ರದೇಶಕ್ಕೆ ಹೋದಂತೆ ಇಲ್ಲಿನ ಆಚಾರ ವಿಚಾರ, ಆಹಾರ, ಸಂಸ್ಕೃತಿ (Culture)ಎಲ್ಲವೂ ಬದಲಾಗುತ್ತೆ.
ಭಾರತದಲ್ಲಿ ಅನೇಕ ಭಾಷೆಗಳನ್ನು ಮಾತನಾಡಲಾಗುತ್ತದೆ, ಬರೆಯಲಾಗುತ್ತದೆ ಮತ್ತು ಓದಲಾಗುತ್ತದೆ. ಆದಾಗ್ಯೂ, ಹಿಂದಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಹಾಗಾಗಿ ಹಿಂದಿಯನ್ನೆ ನಮ್ಮ ರಾಷ್ಟ್ರ ಭಾಷೆ ಅಂತಾನೂ ಹೇಳಲಾಗುತ್ತೆ.
ಭಾರತದ ಪ್ರತಿಯೊಂದು ರಾಜ್ಯಗಳಿಗೂ ಅದರದ್ದೇ ಆದ ರಾಜ್ಯ ಭಾಷೆಗಳಿವೆ. ಅಲ್ಲಿನ ಜನ ಯಾವ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೋ, ಅದೇ ಅಲ್ಲಿನ ರಾಜ್ಯ ಭಾಷೆಯಾಗಿರುತ್ತೆ. ಆದರೆ ಭಾರತದ ಯಾವ ರಾಜ್ಯದಲ್ಲಿ ಇಂಗ್ಲಿಷ್ ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಸಿಕ್ಕಿದೆ ಎಂದು ನಿಮಗೆ ತಿಳಿದಿದೆಯೇ?
ಹೌದು ನೀವು ಕೇಳುತ್ತಿರೋದು ನಿಜಾ. ಭಾರತದ ಒಂದು ರಾಷ್ಟ್ರದ ರಾಜ್ಯ ಭಾಷೆ ಇಂಗ್ಲಿಷ್. ಅದು ಯಾವ ದೇಶ ಗೊತ್ತಾ? ನಾಗಾಲ್ಯಾಂಡ್ನಲ್ಲಿ, ಇಂಗ್ಲಿಷ್ ಅಧಿಕೃತ ಭಾಷೆಯ ಸ್ಥಾನಮಾನವನ್ನು ಹೊಂದಿದೆ.
nagaland
1967 ರಲ್ಲಿ, ನಾಗಾಲ್ಯಾಂಡ್ (Nagaland)ಇಂಗ್ಲಿಷ್ ಅನ್ನು ತನ್ನ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿತು. ಅಂದಿನಿಂದ ಇಂದಿನವರೆಗೂ ನಾಗಾಲ್ಯಾಂಡ್ ನಲ್ಲಿ ಹೆಚ್ಚಾಗಿ ಜನರು ಇಂಗ್ಲಿಷ್ ಮಾತನಾಡುತ್ತಾರೆ. ವಾಸ್ತವವಾಗಿ, ನಾಗಾಲ್ಯಾಂಡ್ನಲ್ಲಿ ಅನೇಕ ಬುಡಕಟ್ಟು ಜನಾಂಗಗಳಿವೆ, ಅವರ ಪದ್ಧತಿಗಳು, ಆಚರಣೆಗಳು ವಿಭಿನ್ನವಾಗಿವೆ.
ಹೆಚ್ಚಿನ ಜನರು ಸಾಮಾನ್ಯ ಆಡುಮಾತಿಗಾಗಿ ಇಂಗ್ಲಿಷ್ ಅನ್ನು ಬಳಸುತ್ತಾರೆ. ಹಾಗಾಗಿ ಇಲ್ಲಿನ ರಾಜ್ಯ ಭಾಷೆ ಇಂಗ್ಲಿಷ್. ನಾಗಾಲ್ಯಾಂಡ್ ನಲ್ಲಿ ಕೇವಲ ಇಂಗ್ಲಿಷ್ ಮಾತ್ರ ಅಲ್ಲ, ಇಲ್ಲಿನ ಜನರು ಹಿಂದಿ, ನೇಪಾಳಿ, ಬಂಗಾಳಿ ಮತ್ತು ಅಸ್ಸಾಮಿ ಭಾಷೆಗಳನ್ನು ಸಹ ಇಲ್ಲಿ ಮಾತನಾಡಲಾಗುತ್ತದೆ. ಆದರೆ ಹೆಚ್ಚಾಗಿ ಮಾತನಾಡೋದು ಮಾತ್ರ ಇಂಗ್ಲಿಷ್. ಅಚ್ಚರಿಯ ವಿಷಯ ಅಲ್ವಾ?