ಪಶುಪತಿನಾಥನ ಲಿಂಗವು ದೇಗುಲದಿಂದ ಮರೆಯಾದರೆ ಈ ಕಲಿಯುಗದ ಅಂತ್ಯ ಖಚಿತ!
ಪಶುಪತಿನಾಥ ಮಂದಿರದಲ್ಲಿರುವ ಶಿವ ವಿಗ್ರಹ ಮುಳುಗಿದರೆ ಕಲಿಯುಗ ಅಂತ್ಯ ಖಚಿತ. ಈ ಭೂಮಿ ಮೇಲೆ ಅಧರ್ಮ, ಅಸತ್ಯ ಹೆಚ್ಚಾದಾಗ ಇದು ಸಂಭವಿಸುತ್ತೆ.
ಪಶುಪತಿನಾಥ ಮಂದಿರದಲ್ಲಿರುವ ಶಿವ ವಿಗ್ರಹ ಮುಳುಗಿದರೆ ಕಲಿಯುಗ ಅಂತ್ಯ ಖಚಿತ. ಈ ಭೂಮಿ ಮೇಲೆ ಅಧರ್ಮ, ಅಸತ್ಯ ಹೆಚ್ಚಾದಾಗ ಇದು ಸಂಭವಿಸುತ್ತೆ.
ನೇಪಾಳ ಮತ್ತು ಭಾರತದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇದರಲ್ಲಿ ಪಶುಪತಿನಾಥವು (Pashupatinath Mandir) ಶಿವನ ಶಕ್ತಿಯ ಕೇಂದ್ರವಾಗಿದೆ ಮತ್ತು ಕೇದಾರನಾಥವು ಶಿವನ ಭಕ್ತಿಯ ಸಂಕೇತವಾಗಿದೆ. ಪಶುಪತಿನಾಥ ಮಂದಿರದಲ್ಲಿ ನೀವು ಶಿವನ 'ಮುಖ'ವನ್ನು ನೋಡಬಹುದು.
ಶಿವನನ್ನು ಸಂಪೂರ್ಣವಾಗಿ ಮೆಚ್ಚಿಸಲು, ಅವನ ಎರಡೂ ರೂಪಗಳಾದ ಕೇದಾರನಾಥ (ಭೌತಿಕ ರೂಪ) ಮತ್ತು ಪಶುಪತಿನಾಥ (ಮುಖ ರೂಪ) ಗಳ ದರ್ಶನ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಪಶುಪತಿನಾಥವು ಶಿವನ ಶಕ್ತಿಯ ಕೇಂದ್ರವಾಗಿದೆ.
ನೇಪಾಳದ ಕಠ್ಮಂಡುವಿನಲ್ಲಿ (Kathmandu of Nepal) ನೆಲೆಗೊಂಡಿರುವ ಪಶುಪತಿನಾಥ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿವೆ, ಅವುಗಳಲ್ಲಿ ಒಂದು ಕಲಿಯುಗದ ಅಂತ್ಯಕ್ಕೆ ಸಂಬಂಧಿಸಿದೆ. ಕಲಿಯುಗಕ್ಕೂ ಪಶುಪತಿ ನಾಥನ ಮಂದಿರಕ್ಕೂ ಏನು ಸಂಬಂಧ ಅನ್ನೋದನ್ನು ನೋಡೋಣ.
ಭೂಮಿ ಮೇಲೆ ಈಗಾಗಲೇ ಹಿಂಸಾಚಾರ, ಭೂಮಿಯ ಪತನ ನಡೆಯುತ್ತಿದೆ. ಇದೆಲ್ಲವೂ ನಿಧಾನವಾಗಿ ಕಲಿಯುವೂ ಅಂತ್ಯವಾಗುತ್ತಿದೆ ಅನ್ನೋದನ್ನು ಸೂಚಿಸುತ್ತೆ. ಕಲಿಯುಗವು ಉತ್ತುಂಗದಲ್ಲಿದ್ದಾಗ, ಪಶುಪತಿನಾಥ ದೇವಾಲಯದಲ್ಲಿರುವ ಶಿವಲಿಂಗವು ಬಾಗಮತಿ ನದಿಯಲ್ಲಿ ಮುಳುಗುತ್ತದೆ ಎಂದು ನಂಬಲಾಗಿದೆ.
ಈ ಘಟನೆಯು ಈ ಯುಗದ ಅಂತ್ಯ ಮತ್ತು ಹೊಸ ಯುಗದ ಆರಂಭವನ್ನು ಗುರುತಿಸುತ್ತದೆ. ಹೌದು ಪಶುಪತಿನಾಥನ ಲಿಂಗವು ಈ ಭೂಮಿಯ ರಕ್ಷಣೆಯ ಸಂಕೇತ, ಆ ಲಿಂಗವು ಯಾವಾಗಲೂ ನದಿಯಲ್ಲಿ ಲೀನವಾಗುತ್ತೋ, ಅಂದು ಕಲಿಯುಗ ಅಂತ್ಯ ಕಾಣುತ್ತದೆ.
ಸಮಾಜದಲ್ಲಿ ಧರ್ಮ, ಸತ್ಯ ಮತ್ತು ನೈತಿಕತೆಯ ಸಂಪೂರ್ಣ ಕುಸಿತ ಯಾವಾಗ ಸಂಭವಿಸುತ್ತದೆಯೋ, ಇದರೊಂದಿಗೆ ಅಧರ್ಮ ಹೆಚ್ಚಾಗುತ್ತದೆ, ಅನೈತಿಕತೆ ಹೆಚ್ಚುತ್ತದೆ, ಭೂಮಿಯ ಮೇಲೆ ಅಸತ್ಯವೇ ತುಂಬಿರುತ್ತೆ. ಅತ್ಯಂತ ಕೆಟ್ಟ ದಿನಗಳು ಬರುವ ಸಮಯದದಲ್ಲಿ ಪಶುಪತಿನಾಥನು ಈ ಸ್ಥಳವನ್ನು ತೊರೆಯುತ್ತಾನೆ ಎನ್ನುವ ನಂಬಿಕೆ ಇದೆ.
ಪಶುಪತಿನಾಥ ದೇವಾಲಯದಲ್ಲಿ ಶಿವ ಇರುವವರೆಗೆ, ಕಲಿಯುಗದ ದುಷ್ಟ ಶಕ್ತಿಗಳು ಭೂಮಿಯ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ. ಆದರೆ ಯಾವಾಗ ಪಶುಪತಿನಾಥ ಆ ಸ್ಥಾನದಿಂದ ಎದ್ದು ಹೊರಡುವನೋ, ದುಷ್ಟ ಶಕ್ತಿಗಳಿಂದ ಭೂಮಿಯೇ ಅಂತ್ಯವಾಗುತ್ತೆ.