ರಜೆ ಶುರುವಾಯ್ತು..ಆನೆ ನೋಡಲು ಮಕ್ಕಳನ್ನು ಈ ಜಾಗಕ್ಕೆ ಕರ್ಕೊಂಡು ಹೋಗಿ!

Published : Apr 01, 2025, 03:02 PM ISTUpdated : Apr 01, 2025, 03:10 PM IST

ಝೂನಲ್ಲಿ ಆನೆ ನೋಡುವುದು ತುಂಬಾನೇ ಕಾಮನ್ ಆದರೆ ಕಾಡಿನಲ್ಲಿ ನೋಡಲು ಅವಕಾಶ ಸಿಗುವುದು ತುಂಬಾನೇ ಕಡಿಮೆ. ಈ ಜಾಗದಲ್ಲಿ ಆನೆಗಳನ್ನು ನೋಡುವ ಅವಕಾಶವಿದೆ.

PREV
16
ರಜೆ ಶುರುವಾಯ್ತು..ಆನೆ ನೋಡಲು ಮಕ್ಕಳನ್ನು ಈ ಜಾಗಕ್ಕೆ ಕರ್ಕೊಂಡು ಹೋಗಿ!

ವಿಶ್ವಾದ್ಯಂತ ಲೆಕ್ಕ ಹಾಕಿದರೆ ನಮ್ಮ ಭಾರತದಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ. 60% ಆನೆಗಳ ಸಂಖ್ಯೆ ಇಲ್ಲೇ ಇರುವುದು. ಹೀಗಾಗಿ ನೀವು ಅಭಯಾರಣ್ಯಗಳಲ್ಲಿ ವೀಕ್ಷಿಸಬಹುದಾದ ಹಲವು ಸ್ಥಳಗಳು ಇಲ್ಲಿದೆ.

26

UNESCO ಮಾಹಿತಿ ಬಿಡುಗಡೆ ಮಾಡಿರುವ ಪ್ರಕಾರ ಕಾಜಿರಂಗವು ಹೆಸರುವಾಸಿ. ಅಲ್ಲಿ ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ಹೆಸರುವಾಸಿ. ಇಲ್ಲಿ ಸಫಾರಿ ಕರೆದುಕೊಂಡು ಹೋದಾಗ ಆನೆಗಳು ಹೆಚ್ಚಾಗಿ ಕಾಣಿಸುತ್ತದೆ.

36

ಉತ್ತರಾಖಂಡ್‌ನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಕೂಡ ಜನಪ್ರಿಯ ಸ್ಥಳ.ಇಲ್ಲಿ ರಾಮಗಂಗಾ ನದಿ ಮತ್ತು ದಟ್ಟವಾದ ಕಾಡುಗಳಿದ್ದು ಆನೆಗಳು ಕಾಣಿಸುತ್ತದೆ.

46

ರಾಜಾಜಿ ರಾಷ್ಟ್ರೀಯ ಉದ್ಯಾನವದಲ್ಲಿ ಅತಿ ಹೆಚ್ಚು ಕಾಡು ಆನೆಗಳನ್ನು ನೋಡಬಹುದು. ಈ ಋಷಿಕೇಶ ಮತ್ತು ಹರಿದ್ವಾರಕ್ಕೆ ಬಹಳ ಹತ್ತಿರವಾಗಿದೆ.

56

ಕೇರಳದಲ್ಲಿ ಇರುವ ಪೆರಿಯಾರ್ ರಾಷ್ಟ್ರೀಯ ಉದ್ಯಾನವದ ನೀರಿನ ಅಂಚಿನ ಬಳಿ ಪೆರಿಯಾರ್ ಸರೋವರದ ದೋಣಿಯಲ್ಲಿ ಕರೆದುಕೊಂಡು ಹೋಗಿ ಆನೆಗಳನ್ನು ಸ್ನಾನ ಮಾಡಿಸುವುದು ಆಟವಾಡುವುದು ನೋಡಬಹುದು.

66

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬಲಿಷ್ಠವಾದ ಆನೆಗಳ ಸಂತತಿ ಕಾಣಬಹುದು. ಸಾಕಷ್ಟು ಸಲ ಪೊದೆಗಳ ಮೂಲಕ ದೊಡ್ಡ ಹಿಂಡುಗಳು ಚಲಿಸುವುದನ್ನು ನೋಡಬಹುದು.
 

Read more Photos on
click me!

Recommended Stories