Karnataka Tourism: ಕರ್ನಾಟಕದಲ್ಲಿದ್ದೀರಿ ಅಂದ್ರೆ ಈ ಅದ್ಭುತ ಅನುಭವಗಳನ್ನು ಪಡೆಯದೇ ಇದ್ದರೆ ಹೇಗೆ?

Published : Jul 02, 2025, 09:54 PM IST

ಕರ್ನಾಟಕದಲ್ಲಿ ಅದೆಷ್ಟೋ ಆಚರಣೆಗಳು, ಆಹಾರಗಳು, ಹಬ್ಬಗಳಿವೆ. ಅವುಗಳಲ್ಲಿ ನೀವು ಕೆಲವೊಂದು ವಿಷಯಗಳನ್ನು ಖುದ್ಧಾಗಿ ಅನುಭವಿಸಿದರೇನೇ ಚೆನ್ನ.

PREV
18

ಕರ್ನಾಟಕ ವಿವಿಧ ಜಾತಿ, ಧರ್ಮ, ಆಚರಣೆ, ಹಬ್ಬ, ಸಂಸ್ಕೃತಿಯ ತವರೂರು. ಇಲ್ಲಿ ನೀವು ಯಾವುದೇ ಮೂಲೆಗೆ ಹೋದರೂ ಒಂದೊಂದು ವಿಶಿಷ್ಟ, ವಿಭಿನ್ನ ಅನುಭವ ಆಗೋದು ಖಚಿತಾ. ನೀವು ಕರ್ನಾಟಕದಲ್ಲೇ (Karnataka) ಇರುವ ಕನ್ನಡಿಗರಾಗಿದ್ರೆ ಈ ಅನುಭವಗಳನ್ನು ನೀವು ಪಡೆಯದೇ ಇದ್ರೆ ಹೇಗೆ?

28

ಮೈಸೂರು ದಸರಾ ಮೆರವಣಿಗೆ

ನಾಡ ಹಬ್ಬ ದಸರಾ ಆಚರಣೆ (Mysore Dasara) ಹೇಗಿರುತ್ತೆ ಅನ್ನೋದನ್ನು ನೀವು ಟಿವಿ ಮುಂದೆ ಕುಳಿತು ನೋಡಿರುತ್ತೀರಿ. ಅಂಬಾರಿ ಹೊರುವ ಆನೆ. ಆ ರಾಜಗಾಂಭಿರ್ಯ ನಡಿಗೆ, ಮೆರವಣಿಗೆ ಇವೆಲ್ಲವೂ ರಾಜ ಮಹಾರಾಜರ ಕಾಲದ ಅನುಭವ ನೀಡುತ್ತೆ. ಇದನ್ನು ಪರದೆ ಮುಂದೆ ಕುಳಿತು ನೋಡಿದ್ರೆ ಸಾಲದು, ನಿಜವಾದ ಅನುಭವ ಪಡೆಯೋದೆ ಕಣ್ಣಿಗೆ, ಮನಸ್ಸಿಗೆ ಹಬ್ಬ.

38

ಕಂಬಳ

ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಅಂದ್ರೆ ಅದು ಕಂಬಳ (Kambala buffalo racing). ಎತ್ತುಗಳ ಓಟ ಇದಾಗಿದೆ. ಕೆಸರುಗದ್ದೆಯಲ್ಲಿ ಪಳಗಿದ ಎತ್ತುಗಳು ಓಡೋದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಇದಕ್ಕಾಗಿ ಎತ್ತುಗಳನ್ನು ಹಲವು ತಿಂಗಳುಗಳಿಂದ ತಯಾರಿ ಮಾಡುತ್ತಿರುತ್ತಾರೆ.

48

ಕೊಡಗಿನ ಕಾಫಿ ಪ್ಲಾಂಟೇಶನ್ ಸ್ಟೇ

ಕೊಡಗು ಅಂದ್ರೆ ಕರ್ನಾಟಕದ ಸ್ಕಾಟ್ ಲ್ಯಾಂಡ್. ಇಲ್ಲಿನ ತಂಪಾದ ವಾತಾವರಣ, ಆ ಸುಂದರ ಪ್ರಕೃತಿ ಎಲ್ಲವೂ ಮನಸ್ಸಿಗೆ ಮುದ ಕೊಡುತ್ತದೆ. ಅದರಲ್ಲೂ ಅಲ್ಲಿನ ಕಾಫಿ ಪ್ಲಾಂಟೇಶನ್ ಬಗ್ಗೆ ಹೇಳದೇ ಇರೋದಕ್ಕೆ ಸಾಧ್ಯಾನ? ಆ ಕಾಫಿ ಪ್ಲಾಂಟೇಶನ್ ಮಧ್ಯದಲ್ಲಿ ಸ್ಟೇ (stay in coffee plantation Coorg) ಮಾಡೋದು ಬೆಸ್ಟ್ ಅನುಭವ.

58

ಯಕ್ಷಗಾನ ಬಯಲಾಟ

ಇದು ಕೂಡ ಕರಾವಳಿಯ ಕಲೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಶುರುವಾಗುವ ಯಕ್ಷಗಾನ ಬಯಲಾಟವನ್ನು ನೋಡುವುದೇ ಚಂದ. ಆ ವಿವಿಧ ಬಣ್ಣಗಳು, ಯಕ್ಷಗಾನ (Yakshagana) ಧಿರಿಸುಗಳು, ಮೇಕಪ್, ಪುಟ್ಟದಾದ ರಂಗಸ್ಥಳದ ಮೇಲೆ ನಡೆಯುವ ಆ ಆಟ ವಿಭಿನ್ನ ಅನುಭವ ಕೊಡುತ್ತದೆ.

68

ಆಗುಂಬೆ ರಸ್ತೆಯಲ್ಲಿ ಮಾನ್ಸೂನ್ ರೈಡ್

ಆಗುಂಬೆ ಅಂದರೇನೆ ಪ್ರಕೃತಿಯನ್ನು ಹೊತ್ತು ಮಲಗಿರುವ ತಾಣ. ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಆಗುಂಬೆಯಲ್ಲಿ ನೀವು ಮಾನ್ಸೂನ್ ರೈಡ್ (monsoon ride in Agumbe) ಮಾಡಿದ್ರೆ ವಾರೆವಾ ಸೂಪರ್ ಆಗಿರುತ್ತೆ.

78

ಕಡಲೆಕಾಯಿ ಪರಿಷೆ

ಬೆಂಗಳೂರಿನ ಬಸವನ ಗುಡಿಯಲ್ಲಿ ನಡೆಯುವ ಬಸವನಗುಡಿ ಪರೀಷೆಯಲ್ಲಿ ಸಹ ಒಂದು ಬಾರಿಯಾದರೂ ನೀವು ಭಾಗಿಯಾಗಿ. ಕಡ್ಲೆಕಾಯಿ (kadalekai parishe) ಸೇರಿ, ಅಲ್ಲಿನ ಆ ಬಣ್ಣದ ಜಗತ್ತನ್ನು ಎಂಜಾಯ್ ಮಾಡಬೇಕು.

88

ನಂದಿ ಹಿಲ್ಸ್ ನಲ್ಲಿ ಸೂರ್ಯೋದಯ

ಸೂರ್ಯೋದಯ, ಸೂರ್ಯಸ್ತಮಾನ ಏನು ನೋಡೋದು, ಪ್ರತಿದಿನ ನಡೆಯೋದೆ ಎಂದು ನೀವು ಅಂದುಕೊಂಡಿರಬಹುದು. ಆದರೆ, ಬೆಳಗ್ಗೆ ಎದ್ದು 5-6 ಗಂಟೆಯೊಳಗೆ ನಂದಿ ಹಿಲ್ಸ್ (Sun rise in Nandi Hills) ತಲುಪಿ. ಅಲ್ಲಿಂದ ಆ ಮೋಡಗಳ ನಡುವೆ ಮೂಡಿ ಬರುವ ಸೂರ್ಯೋದಯವನ್ನು ನೀವು ನೋಡಬೇಕು, ನಿಮ್ಮನ್ನ ಇದು ಬೇರೆ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.

Read more Photos on
click me!

Recommended Stories