ಹನಿಮೂನ್‌ಗೆ ದೇಶ-ವಿದೇಶ ಸುತ್ಬೇಕಾಗಿಲ್ಲ, ರಾಜ್ಯದಲ್ಲೇ ಎಂಥಾ ಮಸ್ತ್‌ ಪ್ಲೇಸ್ ಇದೆ ನೋಡಿ

First Published | Jun 25, 2023, 4:02 PM IST

ಹನಿಮೂನ್ ಅಂದ್ರೆ ಸಾಕು ಎಲ್ರೂ ಎದ್ದು ಬಿದ್ದು ಫಾರಿನ್‌ಗೆ ಓಡ್ತಾರೆ. ಇಲ್ಲಾ ನಾರ್ತ್‌ ಇಂಡಿಯಾಗೆ ಹೋಗ್ತಾರೆ. ಆದ್ರೆ ನಮ್ಮ ಕರ್ನಾಟಕದಲ್ಲೇ ಹನಿಮೂನ್‌ಗೆ ಹೋಗಬಹುದಾದಂಥಾ ಎಷ್ಟು ಮಸ್ತ್ ಪ್ಲೇಸ್ ಇದೆ ಗೊತ್ತಾ?

ಕೂರ್ಗ್‌
ಸ್ಕಾಟ್ಲೆಂಟ್‌ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಕೂರ್ಗ್‌ ನವವಿವಾಹಿತರು ಸಮಯ ಕಳೆಯಲು ಬೆಸ್ಟ್ ಪ್ಲೇಸ್. ಮಂಜು, ಕಾಫಿ ಪ್ಲಾಂಟೇಶನ್‌, ಹಸಿರು ಸೀನರಿಗಳು ಎಂಥವರನ್ನೂ ಖುಷಿಗೊಳಿಸುತ್ತದೆ. ಹನಿಮೂನ್‌ಗೆ ಬರೋ ಕಪಲ್‌ಗೆ ಇಲ್ಲಿ ಅದ್ಭುತವಾದ ರೆಸಾರ್ಟ್‌ಗಳೂ ಇವೆ.

ಮೈಸೂರು
ಅರಮನೆ ನಗರಿ ಎಂದು ಕರೆಯಲ್ಪಡುವ ಮೈಸೂರಿನಲ್ಲೂ ನೋಡಲು ಹಲವಾರು ತಾಣಗಳಿವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ, ಆರ್ಕಿಟೆಕ್ಚರ್ ಬೆರಗು, ಬೃಂದಾವನ ಗಾರ್ಡರನ್‌, ಚಾಮುಂಡಿಬೆಟ್ಟ ಎಂಥವರನ್ನೂ ಸೆಳೆಯುತ್ತದೆ.

Latest Videos


ಚಿಕ್ಕಮಗಳೂರು
ಪ್ರಕೃತಿಯನ್ನು ಪ್ರೀತಿಸುವ ನವಜೋಡಿಗೆ ಚಿಕ್ಕಮಗಳೂರು ಸ್ವರ್ಗದಂತಿದೆ. ಮುಳ್ಳಯ್ಯನಗಿರಿ, ಹೆಬ್ಬೆ ಫಾಲ್ಸ್ ಮೊದಲಾದ ತಾಣಗಳು ಮನಸ್ಸಿಗೆ ಮುದ ನೀಡುತ್ತವೆ. ಬೆಚ್ಚಗಿನ ಹೋಮ್‌ಸ್ಟೇಗಳು ಈ ಜಾಗವನ್ನು ಮತ್ತಷ್ಟು ರೋಮ್ಯಾಂಟಿಕ್ ಆಗಿಸುತ್ತದೆ

ಗೋಕರ್ಣ
ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಕಾರವಾರದಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಸುಂದರವಾದ ದೇವಾಲಯಗಳು ಮತ್ತು ಸಮುದ್ರತೀರಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಕಪಲ್ಸ್ ಇಲ್ಲಿ ಆರಾಮವಾಗಿ ಸಮಯ ಕಳೆಯಬಹುದುa

ಹಂಪಿ
ಹಂಪಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಇಲ್ಲಿ ವಿರೂಪಾಕ್ಷ ದೇವಾಲಯ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ ಅದ್ಭುತವಾಗಿದೆ. ಮಾತಂಗಾ ಹಿಲ್‌ನ ಸೂರ್ಯಾಸ್ತಮಾನ ರೋಮ್ಯಾಂಟಿಕ್‌ ಅನುಭವ ತರುತ್ತದೆ.

ಜೋಗ ಫಾಲ್ಸ್‌
ಜೋಗ ಜಲಪಾತವು ಸ್ವರ್ಗೀಯ ಪರಿಸರದೊಂದಿಗೆ ನಿಮಗೆ ಕನಸೋ, ನನಸೋ ಎಂಬಂತೆ ಅಚ್ಚರಿಯನ್ನು ಮೂಡಿಸುತ್ತದೆ. ವಿಶೇಷವಾಗಿ ಮಾನ್ಸೂನ್‌ನಲ್ಲಿ ಇಲ್ಲಿಯ ಸೊಬಗನ್ನು ವರ್ಣಿಸಲು ಪದಗಳು ಸಾಲದು. ಹನಿಮೂನ್‌ಗೆ ಬರುವ ಜೋಡಿಗಳಿಗೆ ಅತ್ಯುತ್ತಮ ಸ್ಥಳ.

click me!