ಕೃಷ್ಣ ಕೋಗಿಲೆಯ ರೂಪದಲ್ಲಿ ಶನಿಗೆ ದರ್ಶನವನ್ನಿತ್ತ ದೇಗುಲ ಕೋಕಿಲಾವನಧಾಮ

First Published | Jun 24, 2023, 3:40 PM IST

ಭಾರತದಲ್ಲಿ ಶನಿ ದೇವರ ಅನೇಕ ದೇವಾಲಯಗಳಿವೆ, ಆದರೆ ಇಂದು ಶನಿ ದೇವರ ವಿಶಿಷ್ಠ ದೇವಾಲಯದ ಬಗ್ಗೆ ಹೇಳಲಿದ್ದೇವೆ, ಇದನ್ನು ನಿರ್ಮಿಸಲು ಶನಿ ದೇವ ಸ್ವತಃ ಭೂಮಿಯನ್ನು ಎರವಲು ಪಡೆಯಬೇಕಾಯಿತು ಎನ್ನಲಾಗುತ್ತೆ. ಬನ್ನಿ ಈ ಬಗ್ಗೆ ತಿಳಿಯೋಣ. 

ಭಾರತದಲ್ಲಿ ಶನಿ ದೇವರ (Shani Temple) ಅನೇಕ ದೇವಾಲಯಗಳಿವೆ, ಆದರೆ ಇಂದು ನಾವು ನಿಮಗೆ ಒಂದು ವಿಶಿಷ್ಠ ದೇವಾಲಯದ ಬಗ್ಗೆ ಹೇಳಲಿದ್ದೇವೆ. ಈ ದೇವಾಲಯವು ಶನಿ ದೇವರ ಇತರೆ ದೇವಾಲಯಗಳಿಗಿಂತ ಭಿನ್ನ. ಈ ದೇವಾಲಯದ ವಿಶೇಷವೆಂದರೆ ಶನಿ ದೇವನು ಈ ದೇವಾಲಯಕ್ಕಾಗಿ ಭೂಮಿಯನ್ನು ಎರವಲು ಪಡೆಯಬೇಕಾಯಿತು. 
 

ಶನಿ ದೇವರ ವಿಶಿಷ್ಠ ದೇವಾಲಯ ಎಲ್ಲಿದೆ?
ಈ ವಿಶಿಷ್ಠ ಶನಿ ದೇವಾಲಯವು ಉತ್ತರ ಪ್ರದೇಶದ ಕೋಸಿ ಕಲಾನ್ ನಲ್ಲಿದೆ, ಅದರ ಹೆಸರು ಕೋಕಿಲವನ್ ಧಾಮ್ (Kokilavan Dham). ಇದು ಶನಿ ದೇವ ಮತ್ತು ಅವರ ಗುರು ಬರ್ಖಂಡಿ ಬಾಬಾ ಅವರ ಅತ್ಯಂತ ಪ್ರಾಚೀನ ದೇವಾಲಯ. ಆದರೆ ಈ ದೇಗುಲಕ್ಕೆ ಹೋಗಬೇಕು ಅಂದ್ರೆ ದಟ್ಟ ಕಾಡಿನಲ್ಲಿ ಕಷ್ಟಕರ ಹಾದಿಗಳನ್ನು ಹಾದು ಹೋಗಬೇಕು.

Latest Videos


ಕೋಕಿಲವನ್ ಧಾಮ್ ಶನಿ ದೇವರೇ ಸ್ವತಃ ನಿರ್ಮಿಸಿರುವ ಏಕೈಕ ದೇವಾಲಯವಾಗಿದ್ದು, ಇದಕ್ಕಾಗಿ ಶನಿ ದೇವರು ರಾಧೆಯ ಬಳಿ ಭೂಮಿಯನ್ನು ಎರವಲು ಪಡೆಯಬೇಕಾಯಿತು ಅನ್ನೋ ಕಥೆ ಇದೆ. ಏನಿದು ದಂತ ಕತೆ ಅನ್ನೋದನ್ನು ನೋಡೋಣ.   

ಈ ದೇವಾಲಯದ ದಂತಕಥೆ ಏನು? 
ದಂತಕಥೆಯ ಪ್ರಕಾರ, ಶ್ರೀ ಕೃಷ್ಣನು ಜನಿಸಿದಾಗ, ಎಲ್ಲಾ ದೇವರು ಮತ್ತು ದೇವತೆಗಳು ಅವನ ದರ್ಶನಕ್ಕಾಗಿ ಗೋಕುಲಕ್ಕೆ ಬಂದರು. ಶನಿ ದೇವರು ಸಹ ಜೊತೆಗಿದ್ದರು. ಆದರೆ ಯಶೋದೆ ಮಾತ್ರ ಶನಿ ಕೃಷ್ಣನನ್ನು ಭೇಟಿ ಮಾಡದಂತೆ ತಡೆದರು. ಶನಿದೇವನ ದೃಷ್ಟಿಯಲ್ಲಿ ಬಾಲ ಕೃಷ್ಣನಿಗೆ ಹಾನಿಯಾಗಬಹುದು ಎಂದು ಯಶೋದಾ ಮಾತಾ ಹೆದರಿದಳು.  

ಯಶೋದಾ ಶನಿಯನ್ನು ಗೋಕುಲದಿಂದ ಹೋಗುವಂತೆ ಹೇಳಿದಾಗ, ಶನಿ ದೇವನಿಗೆ ತುಂಬಾ ದುಃಖವಾಯಿತು. ನಂತರ ಶನಿ ದೇವನು ಶ್ರೀ ಕೃಷ್ಣನ ಬಾಲ ರೂಪವನ್ನು ನೋಡಲು ಕಾಡಿನಲ್ಲಿ ತೀವ್ರ ತಪಸ್ಸು ಮಾಡಲು ನಿರ್ಧರಿಸಿದನು. ತಪಸ್ಸಿನಿಂದ ಸಂತುಷ್ಟನಾದ ಶ್ರೀ ಕೃಷ್ಣನು ಶನಿ ದೇವರಿಗೆ ಕೋಗಿಲೆಯ ರೂಪದಲ್ಲಿ ದರ್ಶನ ನೀಡಿದನು ಎನ್ನಲಾಗಿದೆ. ಶ್ರೀ ಕೃಷ್ಣನು ಕೋಗಿಲೆಯ ರೂಪವನ್ನು ತೆಗೆದುಕೊಂಡ ಶನಿಗೆ ದರ್ಶನ ನೀಡಿದ ಈ ಅರಣ್ಯವು ಮುಂದೆ ಜನಪ್ರಿಯತೆ ಪಡೆಯಿತು. ಇದುವೇ ಇದು ಕೋಕಿಲಾವನ್ ಆಗಿ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ.
 

ಶನಿ ದೇವರ ಭಕ್ತಿಯನ್ನು ನೋಡಿದ ಶ್ರೀ ಕೃಷ್ಣನು ಅವನಿಗೆ ಕೋಕಿಲವನ್ ಧಾಮದಲ್ಲಿ ವಾಸಿಸುವ ವರವನ್ನು ನೀಡಿದನೆಂದು ನಂಬಲಾಗಿದೆ. ಶ್ರೀ ಕೃಷ್ಣನು ಇಲ್ಲಿ ತನ್ನ ದೇವಾಲಯವನ್ನು ನಿರ್ಮಿಸಲು ಶನಿ ದೇವನಿಗೆ ಆದೇಶಿಸುತ್ತಾನೆ. ಆದರೆ ರಾಧಾ ರಾಣಿಯ ಆಸೆಯಂತೆ ಬ್ರಜ್ ನಲ್ಲಿ ಕೃಷ್ಣ ನೆಲೆಸುತ್ತಾನೆ.
 

ಶನಿ ದೇವನು ಶ್ರೀ ರಾಧಾ ರಾಣಿಯನ್ನು(Radha Rani) ಪ್ರಾರ್ಥಿಸಿ ಕೋಕಿಲವನ್ ಭೂಮಿಯನ್ನು ಎರವಲು ಪಡೆದು ತನ್ನ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗಿದೆ. ಕೋಕಿಲವನ್ ಧಾಮಕ್ಕೆ ಹೋಗಿ ಶನಿ ದೇವರನ್ನು ಪೂಜಿಸುವುದರಿಂದ ಶನಿ ದೋಷ, ಸಾಡೆ ಸಾತ್ ಮತ್ತು ಧೈಯಾದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಶನಿ ದೇವನೊಂದಿಗೆ, ಶ್ರೀ ರಾಧಾ ಮತ್ತು ಶ್ರೀ ಕೃಷ್ಣನ ಅನಂತ ಕೃಪೆಯಿಂದ ವ್ಯಕ್ತಿಯ ಎಲ್ಲಾ ದುಃಖಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. 
 

click me!