ಮಹಾರಾಷ್ಟ್ರದ ಒಂದು ಹಳ್ಳಿಯಿದೆ (village of Maharastra), ಅಲ್ಲಿ ಜನರು ಸೊಳ್ಳೆಯನ್ನು ಹಿಡಿದು ಕೊಟ್ರೆ ಹಣ ಕೊಡುತ್ತಾರಂತೆ. ಇಲ್ಲಿ ಸೊಳ್ಳೆಯನ್ನು ಹುಡುಕೋದು ಕಷ್ಟ ಎಂದು ಗ್ರಾಮಸ್ಥರು ಹೇಳುತ್ತಾರೆ ಮತ್ತು ಒಂದು ವೇಳೆ ಯಾರಾದರೂ ಸೊಳ್ಳೆ ಹುಡುಕಿ ಕೊಟ್ಟರೆ, ಸರಪಂಚ್ ಅವರಿಗೆ ಹಣವನ್ನು ನೀಡುತ್ತಾರಂತೆ.
ಭಾರತದಾದ್ಯಂತ ನೋಡಲು ಅನೇಕ ವಿಶಿಷ್ಟ ಸ್ಥಳಗಳು ಮತ್ತು ವಸ್ತುಗಳು ಇದ್ದರೂ, ಇಂದು ಇಲ್ಲಿ ಹೇಳ್ತಾ ಇರೋ ವಿಶಿಷ್ಟ ಹಳ್ಳಿಯ ಬಗ್ಗೆ ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ, ಅಲ್ಲಿ ಜನರಿಗೆ ಸೊಳ್ಳೆ ಹಿಡಿಯಲು ಹಣವನ್ನು ನೀಡಲಾಗುತ್ತದೆಯಂತೆ. ನೀವು ಅದನ್ನು ಕೇಳಿದಾಗ ನಗಬಹುದು, ಆದರೆ ಅದು ನಿಜ. ನಾವು ಹೆಚ್ಚು ಮಿಲಿಯನೇರ್ ಗಳು ವಾಸಿಸುವ ಹಿವ್ರೆ ಬಜಾರ್ (hiware bazar) ಎಂಬ ಹಳ್ಳಿಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ಹಳ್ಳಿಯ ಜನರು ತಮ್ಮ ಹಣೆಬರಹವನ್ನು ತಾವೇ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಏನಿದು ವಿಚಿತ್ರ ಅನ್ನೋ ಮೊದ್ಲು ಇದನ್ನು ಓದಿ…
ಹಿವ್ರೆ ಬಜಾರ್ ಹಳ್ಳಿಯ ಕಥೆ ವಿಶಿಷ್ಟವಾಗಿದೆ -
ಗ್ರಾಮದಲ್ಲಿ 305 ಕುಟುಂಬಗಳು ವಾಸಿಸುತ್ತಿದ್ದು, ಅದರಲ್ಲಿ 80 ಜನರು ಕೋಟ್ಯಾಧಿಪತಿ (Billionaires). ಈ ಹಳ್ಳಿಯ ಹಸಿರು ಮತ್ತು ಸೌಂದರ್ಯವು ಎಲ್ಲರ ಹೃದಯ ಗೆಲ್ಲುತ್ತದೆ. ಇಲ್ಲಿ ವಾಸಿಸುವ ಜನರಿಗೆ ವಿದ್ಯುತ್ ನಿಂದ ನೀರಿನವರೆಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಬರಗಾಲದ ಸಮಸ್ಯೆ 80 ರಿಂದ 90 ರ ದಶಕದಲ್ಲಿ ಸಂಭವಿಸಿತು
80 ಮತ್ತು 90 ರ ದಶಕದಲ್ಲಿ, ಇಲ್ಲಿನ ಜನರು ತೀವ್ರ ಬರಗಾಲವನ್ನು (drought) ಎದುರಿಸಬೇಕಾಯಿತು. ಪರಿಸ್ಥಿತಿ ಹದಗೆಡುತ್ತಿತ್ತು, ಜನರು ಪಲಾಯನ ಮಾಡಬೇಕಾಯಿತು. ಆದರೆ 90 ರ ದಶಕದಲ್ಲಿ 'ಜಂಟಿ ಅರಣ್ಯ ನಿರ್ವಹಣಾ ಸಮಿತಿ' ರಚನೆಯಾದಾಗ, ಈ ಸ್ಥಳದ ಪರಿಸ್ಥಿತಿ ಬದಲಾಗಲು ಪ್ರಾರಂಭಿಸಿತು.
ಗ್ರಾಮಸ್ಥರ ಕಠಿಣ ಪರಿಶ್ರಮವನ್ನು ನೋಡಿ, ರಾಜ್ಯ ಸರ್ಕಾರವೂ ಹಣ ನೀಡಿತು -
ಹಳ್ಳಿಯನ್ನು ಸುಧಾರಿಸಲು ಇಲ್ಲಿನ ಜನರ ಕಠಿಣ ಪರಿಶ್ರಮವನ್ನು ನೋಡಿ, ರಾಜ್ಯ ಸರ್ಕಾರವೂ ಇಲ್ಲಿ ಹಣವನ್ನು ನೀಡಲು ಪ್ರಾರಂಭಿಸಿತು. ಈ ಗ್ರಾಮದಲ್ಲಿ ಸುಮಾರು 340 ಬಾವಿಗಳನ್ನು ಜನರೇ ನಿರ್ಮಿಸಿದ್ದಾರೆ ಮತ್ತು ನೀರಿನ ಮಟ್ಟ ಸಹ ಗಮನಾರ್ಹ ಹೆಚ್ಚಳವನ್ನು ಕಂಡಿದೆ.
ಹಳ್ಳಿಯ ಕೋಟ್ಯಾಧಿಪತಿಗಳಿಗೆ ತುಂಬಾ ಆದಾಯವಿದೆ
ಇಲ್ಲಿನ ಕೋಟ್ಯಾಧಿಪತಿಗಳ ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಗ್ರಾಮದಲ್ಲಿ 3 ಕುಟುಂಬಗಳಿವೆ, ಅವರ ಆದಾಯವು 10 ಸಾವಿರಕ್ಕಿಂತ ಕಡಿಮೆ.ಹೀಗೆ ಎರಡು ರೀತಿಯ ಜನರು ಕೂಡ ಇಲ್ಲಿ ವಾಸಿಸುತ್ತಾರೆ.
ಸೊಳ್ಳೆಗಳನ್ನು ಕಂಡುಹಿಡಿಯಲು ಹಣವನ್ನು ನೀಡಲಾಗುತ್ತದೆ -
ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿ ಮಿಲಿಯನೇರ್ ಗಳು ವಾಸಿಸುವ ಈ ಗ್ರಾಮದಲ್ಲಿ ಒಂದೇ ಒಂದು ಸೊಳ್ಳೆ ಇಲ್ಲ ಎಂದು ಹೇಳಲಾಗುತ್ತದೆ, ಯಾರಾದರೂ ಒಂದು ಸೊಳ್ಳೆ ತೋರಿಸಿದರೆ, ಅವನಿಗೆ 400 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ನೀವು ಅಲ್ಲಿ ಸೊಳ್ಳೆ ಹುಡುಕಿ ಕೊಟ್ರೆ ನಿಮಗೂ ಸುಲಭವಾಗಿ 400 ರೂಪಾಯಿ ಬಹುಮಾನ ಗೆಲ್ಲುವ ಚಾನ್ಸ್ ಇದೆ.