ಇಲ್ಲಿ ಮದ್ವೆಯಾದ ನಂತ್ರ, ಹುಡುಗನ್ನು ಹೆಂಡ್ತಿ ಮನೆಗೆ ಕಳುಹಿಸ್ತಾರೆ!

First Published | Feb 14, 2023, 6:52 PM IST

ಮದುವೆ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಚರಿಸಲಾಗುತ್ತೆ. ರಾಜಸ್ಥಾನದ ಜವಾಯಿ ಗ್ರಾಮದಲ್ಲಿ ಸಹ ವಿಚಿತ್ರ ಸಂಪ್ರದಾಯವಿದೆ. ಇಲ್ಲಿ ಮದುವೆಯ ಬಳಿಕ ವಧುವಿನ ಬದಲು ವರನಿಗೆ ವಿದಾಯ ನೀಡಲಾಗುತ್ತದೆ. ಮೌಂಟ್ ಅಬುವಿನಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಈ ಹಳ್ಳಿಯ ಬಗ್ಗೆ ತಿಳಿಯಿರಿ.

ಮದುವೆ ಅನ್ನೋದು ಒಂದು‌ ಸುಂದರವಾದ  ಆಚರಣೆ (marriage tradition). ಆದರೆ ಮದುವೆ ನಂತರ ವಧು ತನ್ನ ಮನೆಯನ್ನು ತೊರೆಯಬೇಕು. ಆದರೆ ಕೆಲವೊಂದು ಕಡೆ ವಿಚಿತ್ರ ಸಂಪ್ರದಾಯ ಇರುತ್ತೆ. ಅಂದರೆ ಮದುವೆಯಾದ ಬಳಿಕ ಹುಡುಗಿಯ ಬದಲು ಹುಡುಗ ತನ್ನ ಮನೆಯನ್ನು ತೊರೆಯಬೇಕು. ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಬಹುಶಃ ಈ ರೀತಿಯಾಗುತ್ತೆ ಎಂದು ನೀವು ಯೋಚನೆ ಮಾಡಿರಲು ಸಾಧ್ಯವಿಲ್ಲ ಅಲ್ವಾ? 
 

ಭಾರತದಲ್ಲಿ ಒಂದು ವಿಶಿಷ್ಟ ಗ್ರಾಮವಿದೆ, ಅಲ್ಲಿ ವಧುವಿನ ಬದಲು ವರನಿಗೆ ವಿದಾಯ ಹೇಳಲಾಗುತ್ತೆ.  ಹೌದು, ರಾಜಸ್ಥಾನದ ಈ ಹಳ್ಳಿಯಲ್ಲಿ, ಹುಡುಗರು ಶಾಶ್ವತವಾಗಿ ಮನೆ ಅಳಿಯರಾಗುತ್ತಾರೆ. ಯಾಕೆ ಈ ಸಂಪ್ರದಾಯ ಆಚರಣೆಯಲ್ಲಿದೆ (weird tradition)? ಯಾವ ಗ್ರಾಮದಲ್ಲಿ ಇದೆಲ್ಲಾ ನಡೆಯುತ್ತೆ? ಅನ್ನೋ ಕುತೂಹಲ ನಿಮಗಿದ್ಯಾ? ಈ ಲೇಖನದ ಮೂಲಕ ಹಳ್ಳಿಯ ಬಗ್ಗೆ ತಿಳಿಯೋಣ…
 

Tap to resize

ಹಳ್ಳಿಯ ಹೆಸರು ಬಹಳ ವಿಶಿಷ್ಟವಾಗಿದೆ :
ರಾಜಸ್ಥಾನದ ಈ ಹಳ್ಳಿಯ ಹೆಸರು ಬಹಳ ವಿಶಿಷ್ಟ. ಜವಾಯಿ ಎಂಬ ಹೆಸರಿನಿಂದ ಪ್ರಸಿದ್ಧವಾದ ಈ ಗ್ರಾಮ ಮೌಂಟ್ ಅಬುದಿಂದ (Mount Abu) ಕೇವಲ 10 ಕಿ.ಮೀ ದೂರದಲ್ಲಿದೆ. ರಾಜ್ಯದ ಏಕೈಕ ಗಿರಿಧಾಮ ಮೌಂಟ್ ಅಬು ಪರ್ವತಗಳಲ್ಲಿ ನೆಲೆಗೊಂಡಿರುವ ಈ ಗ್ರಾಮವು ನೂರಾರು ವರ್ಷಗಳ ಹಳೆಯ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಈ ಟ್ರೆಂಡ್ ಕಳೆದ 700 ವರ್ಷಗಳಿಂದ ನಡೆಯುತ್ತಿದೆ.

ಹುಡುಗಿಯರ ಸಂಖ್ಯೆ ಅತ್ಯಧಿಕವಾಗಿತ್ತು :
ಜವಾಯಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಹುಡುಗಿಯರಿದ್ದರು ಎಂದು ಹೇಳಲಾಗುತ್ತದೆ, ಅಲ್ಲಿ ಮದುವೆಯಾಗಲು ಯಾವುದೇ ಪುರುಷನೊಂದಿಗೆ ಸಂಬಂಧ ಹೊಂದುವುದು ತುಂಬಾ ಕಷ್ಟವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಮದುವೆಯ ನಂತರ ಹುಡುಗಿಯನ್ನು ಕಳುಹಿಸದ ವಿಭಿನ್ನ ಸಂಪ್ರದಾಯವನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು. ಹುಡುಗಿಯರ ಗಂಡಂದಿರು ಇಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ, ಇದು ಆ ಹಳ್ಳಿಯ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಸ್ತುತ, ಸುಮಾರು 240 ಜನರು ಇಲ್ಲಿ ವಾಸಿಸುತ್ತಿದ್ದಾರೆ.

ಇಬ್ಬರು ಸಹೋದರರು ವಿವಾಹವಾದರು 
ಮೌಂಟ್ ಅಬುವಿನಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಈ ಹಳ್ಳಿಯಲ್ಲಿ 700 ವರ್ಷಗಳ ಹಿಂದೆ ಅತಿ ಹೆಚ್ಚು ಹುಡುಗಿಯರಿದ್ದರು. ವಿವಾಹದಲ್ಲಿನ ಸಮಸ್ಯೆಗಳಿಂದಾಗಿ, ಜೀವಾಜಿ ಮತ್ತು ಕನ್ಹಾಜಿ ಎಂಬ ಇಬ್ಬರು ಸಹೋದರರು ಈ ಗ್ರಾಮದ ಇಬ್ಬರು ಹೆಣ್ಣುಮಕ್ಕಳನ್ನು ವಿವಾಹವಾದರು. ಜೀವಾಜಿ ಮದುವೆಯಾಗಿ ಜವಾಯಿ ಗ್ರಾಮದಲ್ಲಿ ನೆಲೆಸಿದರೆ, ಇನ್ನೊಬ್ಬ ಸಹೋದರ ಮದುವೆಯಾಗಿ ಜವಾಯಿ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ಕಾಡಿನ ಕಡೆಗೆ ನೆಲೆಸಿದರು.

ಮೌಂಟ್ ಅಬು ನಗರದ ಸುತ್ತಲೂ ಇನ್ನೂ ಅನೇಕ ಹಳ್ಳಿಗಳಿವೆ 
ಮೌಂಟ್ ಅಬು ನಗರದಿಂದ 10 ಕಿ.ಮೀ ದೂರದಲ್ಲಿರುವ ಜವಾಯಿ ಗ್ರಾಮದಲ್ಲಿ 40 ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದ ಜನಸಂಖ್ಯೆ ಸುಮಾರು 240. ಇಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಕೃಷಿ, ಮತ್ತು ಡ್ರೈವಿಂಗ್ ಮೂಲಕ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಮಂಚ್ ಗ್ರಾಮ, ಹೆಟಮ್ಜಿ ಗ್ರಾಮ, ಅರಾನಾ ಗ್ರಾಮ, ಸಾಲ್ ಗ್ರಾಮ ಸೇರಿದಂತೆ ಮೌಂಟ್ ಅಬು ಸುತ್ತಮುತ್ತಲಿನಲ್ಲಿ ಒಟ್ಟು 16 ಗ್ರಾಮಗಳಿವೆ.

ಮೌಂಟ್ ಅಬು ತಲುಪುವುದು ಹೇಗೆ? (How to reach Mount Abu)
ವಾಯುಮಾರ್ಗದ ಮೂಲಕ: ಮೌಂಟ್ ಅಬುವಿನ ಹತ್ತಿರದ ದೇಶೀಯ ವಿಮಾನ ನಿಲ್ದಾಣವು ಉದಯಪುರದಲ್ಲಿ 210 ಕಿ.ಮೀ ದೂರದಲ್ಲಿದ್ದು, ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಹ್ಮದಾಬಾದ್ ನಲ್ಲಿದೆ. ದೇಶೀಯ ವಿಮಾನ ನಿಲ್ದಾಣವು ದೆಹಲಿ, ಜೈಪುರ ಮತ್ತು ಮುಂಬೈನಂತಹ ಪ್ರಮುಖ ಭಾರತೀಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
 

ರೈಲು ಮೂಲಕ - ಅಬು ರೋಡ್ ರೈಲ್ವೆ ನಿಲ್ದಾಣವು ದೆಹಲಿ ಮತ್ತು ಮುಂಬೈ ನಡುವೆ ಇರುವ ಮೌಂಟ್ ಅಬುಗೆ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಈ ನಿಲ್ದಾಣ ಮೌಂಟ್ ಅಬುವನ್ನು ಪ್ರಮುಖ ರೈಲ್ವೆ ನಿಲ್ದಾಣಗಳಿಗೆ (railway station) ಸಂಪರ್ಕಿಸುತ್ತದೆ.

ರಸ್ತೆಯ ಮೂಲಕ - ಮೌಂಟ್ ಅಬುವನ್ನು ಎಲ್ಲಾ ಪ್ರಮುಖ ನೆರೆಹೊರೆಯ ನಗರಗಳಿಗೆ ಸಂಪರ್ಕಿಸಲು ರಾಜ್ಯ ಸರ್ಕಾರದಿಂದ ಹಲವಾರು ಬಸ್ ಸೌಲಭ್ಯಗಳು ಸಹ ಲಭ್ಯವಿದೆ. 

Latest Videos

click me!