ಬಹಳಷ್ಟು ವರ್ಷಗಳ ಹಿಂದೆಯೇ ವಿಮಾನಯಾನ ಸಂಸ್ಥೆಗಳು ತಮ್ಮ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ-ರೀಡರ್‌ಗಳು ಮತ್ತು ಇತರ ಸಾಧನಗಳನ್ನು ಹಾರಾಟದ ಉದ್ದಕ್ಕೂ ಆಫ್ ಮಾಡುವಂತೆ ಪ್ರಯಾಣಿಕರಿಗೆ ಹೇಳುವುದನ್ನು ನಿಲ್ಲಿಸಿದೆ. ಈಗ ಬಹುತೇಕ ಎಲ್ಲಾ ಸಾಧನಗಳು ಏರೋಪ್ಲೇನ್ ಮೋಡ್ ಅನ್ನು ಹೊಂದಿವೆ. ಆದರೆ ಏರ್‌ಪ್ಲೇನ್ ಮೋಡ್ ಎಂದರೇನು ಮತ್ತು ನೀವು ಅದನ್ನು ಆನ್ ಮಾಡಲು ಮರೆತರೆ ಏನಾಗುತ್ತದೆ?
ಫ್ಲೈಟ್ ಮೋಡ್ ಅಥವಾ ಏರ್‌ಪ್ಲೇನ್ ಮೋಡ್ ಅನ್ನು ಸ್ಮಾರ್ಟ್‌ಫೋನ್‌ಗಳ ಆರಂಭಿಕ ದಿನಗಳಲ್ಲಿ ಪರಿಚಯಿಸಲಾಯಿತು. ಅದಕ್ಕೂ ಮೊದಲು, ವಿಮಾನಕ್ಕಾಗಿ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಬೇಕಾಗಿತ್ತು. ಯುರೋಪ್ ಮತ್ತು ಯುಎಸ್‌ನಲ್ಲಿ, ಫ್ಲೈಟ್ ಮೋಡ್‌ನಲ್ಲಿರುವವರೆಗೆ ಸಾಧನಗಳು ಚಾಲಿತವಾಗಿರಲು ಅನುಮತಿಸಲು 2013ರಲ್ಲಿ ನಿಯಮಗಳು ಬದಲಾಯಿತು.
ಏರೋಪ್ಲೇನ್ ಮೋಡ್ ಎಂದರೇನು?
ಎಲ್ಲಾ ಮೊಬೈಲ್‌ಗಲ್ಲಿ, ಲ್ಯಾಪ್ಟಾಪ್, ಟ್ಯಾಬ್ಗಳಲ್ಲಿ ಈ ಏರ್‌ಪ್ಲೇನ್ ಮೋಡ್ ಆಯ್ಕೆಯಿರುತ್ತದೆ. ಇದು ಏರ್‌ಪ್ಲೇನ್ ಐಕಾನ್ ಅನ್ನೇ ಹೊಂದಿರುತ್ತದೆ. ಇದನ್ನು ಸೆಟ್ಟಿಂಗ್ಸ್ಗೆ ಹೋಗಿ ಆನ್ ಮಾಡಿದ್ರೆ ನಿಮ್ಮ ಫೋನ್ಗೆ ಬರುವಂತಹ ಕಾಲ್, ಮೆಸೇಜ್, ನೆಟ್ವರ್ಕ್ ಇವುಗಳನ್ನೆಲ್ಲಾ ನಿಷ್ಕ್ರಿಯಗೊಳಿಸುತ್ತದೆ. ನಂತರ ಮತ್ತೆ ಸಕ್ರಿಯ ಮಾಡಬೇಕೆಂದರೆ ಅದೇ ಐಕಾನ್ ಮೇಲೆ ಟ್ಯಾಪ್ ಮಾಡಬೇಕು.
ಮೊಬೈಲ್ ಫ್ಲೈಟ್ ಮೋಡ್‌ನಲ್ಲಿ ಏಕೆ ಹಾಕಬೇಕು?
ವಿಮಾನದಲ್ಲಿ ಸಂಚರಿಸುವಾಗ ಎಲೆಕ್ಟ್ರಾನಿಕ್ಸ್ ಡಿವೈಸ್ಗಳನ್ನು ಬಳಕೆ ಮಾಡಿದರೆ ಇದರಿಂದ ಬರುವಂತಹ ಸಿಗ್ನಲ್ಗಳು ವಿಮಾನದ ಸಂವಹನ ವ್ಯವಸ್ಥೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಸೆಲ್ಯುಲಾರ್ ಕನೆಕ್ಟಿಂಗ್ ಫೀಚರ್ ಅನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಡಿವೈಸ್ಗಳು ರೇಡಿಯೋ ವೇವ್ಸ್ಗಳನ್ನು ಮತ್ತು ಇತರ ಕನೆಕ್ಟಿಂಗ್ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದು ವಿಮಾನದ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುಬಹುದು. ಹೀಗಾಗಿ ಮೊಬೈಲ್‌ನ್ನು ಫ್ಲೈಟ್ ಮೋಡ್‌ನಲ್ಲಿಡಲು ಸೂಚಿಸಲಾಗುತ್ತದೆ.
ಒಂದು ದಿನದಲ್ಲಿ ಲಕ್ಷಾಂತರ ಜನರು ವಿಮಾನದಲ್ಲಿ ಸಂಚರಿಸುತ್ತಾರೆ. ಇ ಸಂದರ್ಭದಲ್ಲಿ ನೆಟ್ವರ್ಕ್ಗಳ ಮೇಲೆ ಭಾರೀ ಅಡಚಣೆಗಳು ಬರುತ್ತದೆ. ಇದರಿಂದ ವಿಮಾನಯಾನಕ್ಕೂ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಪೈಲಟ್ಗಳು ತಮ್ಮ ನಿಯಂತ್ರಣವನ್ನು ಕಳೆದುಕೊಂಡು ಲ್ಯಾಂಡಿಂಗ್ ಮಾಡುವಾಗ ಅಥವಾ ಟೇಕ್ ಆಫ್ ಆಗುವ ಸಂದರ್ಭದಲ್ಲಿ ದೊಡ್ಡ ಮಟ್ಟಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ವಿಮಾನದಲ್ಲಿ ಸಂಚರಿಸುವಾಗ ಮೊಬೈಲ್ ಅನ್ನು ಏರ್‌ಪ್ಲೇನ್ ಮೋಡ್ ಅಲ್ಲಿ ಇರಿಸಲು ಹೇಳುತ್ತಾರೆ.
Air India
ಏರೋಪ್ಲೇನ್ ಮೋಡ್ನಿಂದೇನಾಗುತ್ತದೆ?
ಏರೋಪ್ಲೇನ್ ಮೋಡ್ ಆನ್ ಮಾಡಿದಾಗ, ಡಿವೈಸ್ ಸೆಲ್ಯುಲಾರ್ ನೆಟ್ವರ್ಕ್ಗಳನ್ನು ನಿಷ್ಕ್ರಿಯವಾಗುವಂತೆ ಮಾಡುತ್ತದೆ. ಪರಿಣಾಮ ಸೆಲ್ಯುಲಾರ್ ನೆಟ್‌ವರ್ಕ್‌ನಿಂದ ಕಾಲ್ಗಳನ್ನು ಅಥವಾ ಮೆಸೇಜ್ಗಳನ್ನು ಸ್ವೀಕರಿಸಲು, ಮಾಡಲು ಸಾಧ್ಯವಾಗುವುದಿಲ್ಲ. ಆದರೆ ವೈಫೈ ಸೌಲಭ್ಯ ಇದ್ದರೆ ನೀವು ವೈಫೈ ಮೂಲಕ ಮೆಸೇಜ್ಗಳನ್ನು ಮಾಡಬಹುದಾಗಿದೆ.
ಏರೋಪ್ಲೇನ್ ಮೋಡ್ನಿಂದ ಏನು ಲಾಭ?
ವಿಮಾನದಲ್ಲಿ ಸಂಚರಿಸುವಾಗ ಮಾತ್ರವಲ್ಲದೆ ಹೆಚ್ಚಿನವರು ದಿನನಿತ್ಯದ ಬಳಕೆಯಲ್ಲಿಯೂ ಏರೋಪ್ಲೇನ್ ಮೋಡ್ ಬಳಸುತ್ತಾರೆ. ಮೊಬೈಲ್ ಬೇಗ ಜಾರ್ಜ್ ಆಗಲು ಏರೋಪ್ಲೇನ್ ಮೋಡ್‌ಗೆ ಹಾಕಕಿ ಮೊಬೈಲ್ ಚಾರ್ಜ್‌ಗೆ ಇಡುತ್ತಾರೆ. ಇದರಿಂದ ಮೊಬೈಲ್ ಬೇಗ ಚಾರ್ಜ್ ಆಗುವುದರೊಂದಿಗೆ ದೀರ್ಘವಾದ ಬ್ಯಾಟರಿ ಬ್ಯಾಕಪ್ ಸಿಗುತ್ತದೆ.
ಇನ್ನು ಯಾರಿಂದಾದರೂ ಕಾಲ್, ಮೆಸೇಜ್ ಮೂಲಕ ಕಿರಿಕಿರಿಯಾದಾಗಲೂ ಇದು ಬಹಳಷ್ಟು ಸಹಕಾರಿಯಾಗುತ್ತದೆ. ಏರ್‌ಪ್ಲೇನ್ ಮೋಡ್ ಅನ್ನು ಓಪನ್ ಮಾಡುವ ಮೂಲಕ ನಿಮ್ಮ ಮೊಬೈಲ್ಗೆ ಬರುವಂತಹ ಮೆಸೇಜ್, ಕಾಲ್ ಅನ್ನು ಬಂದ್ ಮಾಡಬಹುದು. ಈ ರೀತಿ ಆನ್ ಮಾಡಿದರೆ ಕಾಲ್ ಮಾಡಿದಾಗ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸುತ್ತದೆ.