ಎರಡು ದಿನ ಆರಾಮಾಗಿ ನೆಮ್ಮದಿಯಾಗಿ ಇರ್ಬೇಕಾ?, ಹಾಗಾದ್ರೆ ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ಕೊಡಿ

Published : Jul 24, 2025, 06:23 PM IST

ಕರ್ನಾಟಕ ರಾಜ್ಯದೊಳಗೆ ಬಹಳ ಸುಂದರವಾದ, ಬಹುತೇಕರಿಗೆ ಗೊತ್ತಿರದ ಮನಮೋಹಕ ಸ್ಥಳಗಳಿವೆ. ಇವು ಎಷ್ಟರಮಟ್ಟಿಗೆ ಅದ್ಭುತವಾಗಿವೆ ಅಂದ್ರೆ ನೀವು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ.

PREV
16
ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳು

Karnataka Tourism: ವೀಕೆಂಡ್ ಬಂದ್ರೆ ಸಾಕು ಎಲ್ಲಿಗೋಗೊದು ಅಂತ ನಿಮಗೆ ಚಿಂತೆ ಆಗ್ತಾ ಇದ್ಯಾ?. ಪಕ್ಕದ ರಾಜ್ಯ, ದೇಶದಲ್ಲಿರುವ ಸ್ಥಳಗಳನ್ನ ಸರ್ಚ್ ಮಾಡ್ತಾ ಇದ್ದೀರಾ?, ಹಾಗಾದ್ರೆ ಈ ಲೇಖನ ನಿಮಗಾಗಿಯೇ. ಏಕೆಂದರೆ ನಮ್ಮ ಕರ್ನಾಟಕ ರಾಜ್ಯದೊಳಗೆ ಬಹಳ ಸುಂದರವಾದ, ಬಹುತೇಕರಿಗೆ ಗೊತ್ತಿರದ ಮನಮೋಹಕ ಸ್ಥಳಗಳಿವೆ. ಇವು ಎಷ್ಟರಮಟ್ಟಿಗೆ ಅದ್ಭುತವಾಗಿವೆ ಅಂದ್ರೆ ನೀವು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಹಾಗಾಗಿ ಈ ಬಾರಿ ಎಲ್ಲಿಯಾದ್ರೂ ಟ್ರಿಪ್ ಹೋಗ್ಬೇಕು ಅಂದುಕೊಂಡ್ರೆ ನಿಮ್ಮ ಪ್ರವಾಸ ಪಟ್ಟಿಯಲ್ಲಿ ನೀವು ಕರ್ನಾಟಕದಲ್ಲಿರುವ ಈ ಸ್ಥಳಗಳನ್ನು ಸೇರಿಸಿಕೊಳ್ಳಿ.

ಕರ್ನಾಟಕವು ಐತಿಹಾಸಿಕ ಕೋಟೆಗಳು ಮತ್ತು ದೇವಾಲಯಗಳಿಗೆ ಮಾತ್ರವಲ್ಲದೆ ಸುಂದರವಾದ ಮತ್ತು ಪ್ರಶಾಂತವಾದ ಗಿರಿಧಾಮಗಳಿಗೂ ಹೆಸರುವಾಸಿಯಾಗಿದೆ. ಹಾಗಾಗಿ ಇಲ್ಲಿ ಪ್ರಸಿದ್ಧ ಗಿರಿಧಾಮಗಳ ಲಿಸ್ಟ್ ಕೊಡಲಾಗಿದೆ ನೋಡಿ...

26
ಆಗುಂಬೆ

ಈ ಪಟ್ಟಿಯಲ್ಲಿ ಆಗುಂಬೆ ಮೊದಲ ಸ್ಥಾನದಲ್ಲಿದೆ. ದಕ್ಷಿಣದ ಚಿರಾಪುಂಜಿ ಎಂದು ಪ್ರಸಿದ್ಧವಾಗಿರುವ ಆಗುಂಬೆ, ಸೂರ್ಯಾಸ್ತ ಮತ್ತು ದಟ್ಟವಾದ ಮಳೆಕಾಡುಗಳಿಗೆ ಹೆಸರುವಾಸಿಯಾಗಿದೆ. ಮಳೆಕಾಡಿನ ಚಾರಣಕ್ಕಾಗಿ ನೀವು ಇಲ್ಲಿಗೆ ಭೇಟಿ ನೀಡಬಹುದು.

36
ಕೊಡಚಾದ್ರಿ

ನೀವು ಟ್ರೆಕ್ಕಿಂಗ್ ಜೊತೆಗೆ ಫಾಲ್ಸ್ ನೋಡಲು ಬಯಸುತ್ತಿದ್ದರೆ ಕೊಡಚಾದ್ರಿಯನ್ನು ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಕೊಡಚಾದ್ರಿ ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ನೈಸರ್ಗಿಕ ಸ್ವರ್ಗ.

46
ಕುಂದಾದ್ರಿ ಬೆಟ್ಟಗಳು

ಏಕಾಂತತೆ ಮತ್ತು ಶಾಂತಿಯನ್ನು ಬಯಸುವ ಪ್ರವಾಸಿಗರಿಗೆ ಕುಂದಾದ್ರಿ ಬೆಟ್ಟಗಳು ಸೂಕ್ತ ಪ್ರಯಾಣ ತಾಣವಾಗಿದೆ. ಇಲ್ಲಿ ನೀವು ಜೈನ ತೀರ್ಥಯಾತ್ರೆ ಮತ್ತು ನೈಸರ್ಗಿಕ ಸೌಂದರ್ಯದ ಅದ್ಭುತ ಸಂಗಮವನ್ನು ನೋಡಬಹುದು.

56
ಶಿರಸಿ

ರಾತ್ರಿ ಚಾರಣ ಮತ್ತು ಸೂರ್ಯೋದಯಕ್ಕೆ ಬಹಳ ಜನಪ್ರಿಯ ತಾಣವಾದ ಶಿರಸಿಗೆ ಭೇಟಿ ನೀಡಲು ನೀವು ಯೋಜಿಸಬಹುದು. ಶಿರಸಿ ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಇಲ್ಲಿಗೆ ಭೇಟಿ ನೀಡಬಹುದು.

66
ಕೊಲ್ಲೂರು

ಕೊಡಚಾದ್ರಿಗೆ ಸಂಪರ್ಕ ಹೊಂದಿರುವ ಕೊಲ್ಲೂರಿಗೂ ನೀವು ಭೇಟಿ ನೀಡಬಹುದು. ಹಸಿರು ಮತ್ತು ಬೆಟ್ಟಗಳಿಂದ ಆವೃತವಾದ ಕೊಲ್ಲೂರು ಪ್ರಕೃತಿ ಪ್ರಿಯರಿಗೆ ಸ್ವರ್ಗಕ್ಕಿಂತ ಕಡಿಮೆ ಏನಿಲ್ಲ. ನೀವು ಇಲ್ಲಿ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಡಬಹುದು.

Read more Photos on
click me!

Recommended Stories