ಎಟಿಎಂನಲ್ಲಿ ಬರುತ್ತೆ ಚಿನ್ನ... ದುಬೈನಲ್ಲಿ ಮಾತ್ರ ಕಾಣಸಿಗುವ ಕೆಲ ಅದ್ಭುತಗಳಿವು

Published : Sep 10, 2023, 10:25 AM IST

ದುಬೈ ಹೇಳಿ ಕೇಳಿ ವೈಭವದ ಜೀವನಕ್ಕೆ ಹೆಸರಾದ ಮಾಯಾನಗರಿ, ಇಲ್ಲಿ ನಿಮ್ಮ ಕಣ್ಣುಗಳನ್ನೇ ನಂಬಲಾಗದ ವಿವಿಧ ವಿಹಾರ ಸ್ಥಳಗಳು ಆವಿಷ್ಕಾರಗಳಿವೆ. ಪ್ರಪಂಚದ ವಿವಿಧ ಸ್ಥಳಗಳ ಜನ ಇಲ್ಲಿಗೆ ಭೇಟಿ ನೀಡಲು ಬಯಸುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ದುಬೈನ ಇತಿಹಾಸ, ಸಂಪ್ರದಾಯಗಳು ಮತ್ತು ಸಂಸ್ಕೃತಿಯಿಂದ ತುಂಬಿದೆ.  ಇದೇ ಕಾರಣಕ್ಕೆ ದುಬೈ ಇಂದು ಪ್ರಪಂಚದ ವಿಭಿನ್ನ ಪ್ರವಾಸಿ ತಾಣವೆನಿಸಿದೆ. ಹಾಗಾದರೆ ಅಲ್ಲೇನಿದೆ ನೋಡೋಣ ಬನ್ನಿ

PREV
112
ಎಟಿಎಂನಲ್ಲಿ ಬರುತ್ತೆ ಚಿನ್ನ... ದುಬೈನಲ್ಲಿ ಮಾತ್ರ ಕಾಣಸಿಗುವ ಕೆಲ ಅದ್ಭುತಗಳಿವು
ಮರುಭೂಮಿಯಾದರೂ ಸ್ಕೀಯಿಂಗ್‌ಗೆ ಅವಕಾಶ

 

ದುಬೈನ ಬಹುಪಾಲು ಮರುಭೂಮಿ ಹೊಂದಿರುವುದು ನಿಮಗೆ ಗೊತ್ತೇ ಇದೆ ಆದರೂ ಇಲ್ಲಿನ ಜನ ಮನೋರಂಜನೆಗಾಗಿ ಏನೂ ಬೇಕಾದರೂ ಮಾಡುತ್ತಾರೆ. ಸ್ಕೀಯಿಂಗ್‌ಗಾಗಿ ಇಲ್ಲಿ ಕೃತಕ ಹಿಮ ಪ್ರದೇಶವನ್ನೇ ಸೃಷ್ಟಿಸಲಾಗಿದೆ. ಈ ಸ್ಕೀಯಿಂಗ್ ರೆಸಾರ್ಟ್‌ ನಿಮ್ಮ ನಿರೀಕ್ಷೆಗಳನ್ನು ಮೀರಿದ್ದು, ನಿಮ್ಮ ಕಣ್ಣುಗಳನ್ನು ನಂಬಲು ಸಾಧ್ಯವಾಗದಂತೆ ಮಾಡುತ್ತದೆ. 
 

212
ಪೆಂಗ್ವಿನ್‌ಗಳನ್ನು ಹೊಂದಿರುವ ದುಬೈ ಸಿಟಿ

ಭೂಮಿಯ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ವಾಸಿಸುವ ಪೆಂಗ್ವಿನ್‌ಗಳು ನಿಮ್ಮ ಸ್ಥಳೀಯ ಝೂಗಳಲ್ಲಿ ನೀವು ನೋಡಿರಬಹುದು. ಆದರೆ ಬಹುಪಾಲು ಪೆಂಗ್ವಿನ್‌ಗಳು ದಕ್ಷಿಣ ಧ್ರುವದಂತೆ ತಂಪಾಗಿರುವ ಪ್ರದೇಶದಲ್ಲಿ ವಾಸಿಸುತ್ತವೆ. ಆದರೆ ದುಬೈ ಒಂದು ಮರುಭೂಮಿ ಎನಿಸಿರುವ ಅತ್ಯಂತ ಉಷ್ಣಾಂಶವಿರುವ ಪ್ರದೇಶ. ಆದರೆ ಇಲ್ಲೂ ಪೆಂಗ್ವಿನ್‌ಗಳು ವಾಸಿಸುತ್ತಿವೆ ಎಂಬುದನ್ನು ನೀವು ನಂಬಲೇಬೇಕು. ಇಲ್ಲಿ ಪೆಂಗ್ವಿನ್‌ಗ ವಾಸಕ್ಕಾಗಿಯೇ ಕೃತಕ ಹಿಮ ಹಾಗೂ ತಂಪಾದ ವಾತಾವರಣವನ್ನು ಸೃಷ್ಟಿಸಲಾಗಿದೆ. 

312
ದುಬೈ ಮಾಲ್

ಜಗತ್ತಿನ ಮತ್ತೊಂದು ಅದ್ಭುತ ದುಬೈನ ಮಾಲ್,  5.4 ಮಿಲಿಯನ್ ಚದರ ಅಡಿಯಷ್ಟು ವಿಸ್ತಾರ ಜಾಗದಲ್ಲಿ ನಿರ್ಮಿಸಲ್ಪಟ್ಟಿರುವ ಈ ಮಾಲ್ ಜಗತ್ತಿನಲ್ಲೇ ಅತೀ ದೊಡ್ಡ ಶಾಪಿಂಗ್ ಮಾಲ್ ಎನಿಸಿದೆ  ಇದರ ಒಳಗೆ ಇರುವ  ದೊಡ್ಡದಾದ ಅಕ್ವೇರಿಯಂನಲ್ಲಿ ಅಪರೂಪವೆನಿಸಿದ ಮೀನುಗಳು ಸೇರಿದಂತೆ 300 ವಿವಿಧ ರೀತಿಯ ಸಮುದ್ರ ಜೀವ ವೈವಿಧ್ಯಗಳಿವೆ. 

412
ಕೃತಕವಾಗಿ ನಿರ್ಮಿಸಲ್ಪಟ್ಟ ಐಲ್ಯಾಂಡ್‌ಗಳು

ಕೃತಕವಾಗಿ ಐಲ್ಯಾಂಡ್ ನಿರ್ಮಿಸೋದು ಅಂದ್ರೆ ಸುಮ್ನೇನಾ,  ವಿಶ್ವದ ಅತ್ಯಂತ ಸೃಜನಶೀಲ ಮನಸ್ಸನ್ನು ಹೊಂದಿರುವ ದುಬೈ ಜನ ಕೃತಕವಾಗಿ ಐಲ್ಯಾಂಡ್‌ನ್ನು ಕೂಡ ನಿರ್ಮಿಸಿದ್ದಾರೆ. ಇಲ್ಲಿ ವಿಮಾನದಲ್ಲಿ ನೀವು ಹಾರಾಟ ನಡೆಸಿದ್ದರೆ ಮಾನವ ನಿರ್ಮಿತ ಹಲವು ಕೃತಕ ದ್ವೀಪಗಳನ್ನು ಆಕಾಶದಿಂದಲೇ ನೋಡಬಹುದು. ಈ ದ್ವೀಪಗಳ ನಿರ್ಮಾಣ ಸಣ್ಣ ಸಾಧನೆಯೇನಲ್ಲ, ಇದಕ್ಕಾಗಿ 94 ಮಿಲಿಯನ್ ಕ್ಯೂಬಿಕ್ ಮೀಟರ್ ಮರಳನ್ನು ಮರುಭೂಮಿ ಹಾಗೂ ಆಳವಾದ ಸಮುದ್ರ ತಳದಿಂದ ಸ್ಥಳಾಂತರಿಸಬೇಕಾಗಿತ್ತು.  ಇದರ ಜೊತೆ 5.5 ಮೀಲಿಯನ್ ಕ್ಯೂಬಿಕ್ ಮೀಟರ್ ಬಂಡೆಗಳನ್ನು ಕೂಡ ಬೇರೆ ಸ್ಥಳದಿಂದ ಇಲ್ಲಿಗೆ ಸ್ಥಳಾಂತರಿಸಬೇಕಾಗಿತ್ತು. ಹೀಗೆ ನಿರ್ಮಿಸಿದ ಐಲ್ಯಾಂಡ್‌ಗಳಲ್ಲಿ ಪಾಮ್ ಐಲ್ಯಾಂಡ್ ಸಾಕಷ್ಟು ಖ್ಯಾತಿ ಪಡೆದಿದೆ.

512
ಡಾನ್ಸ್ ಮಾಡೋ ನೀರಿನ ಕಾರಂಜಿ

ಬುರ್ಜ್ ಖಲೀಫಾದಲ್ಲಿ ಕೆಲವು ಅತೀ ಸುಂದರವವೆನಿಸಿದ ನೀರಿನ ಕಾರಂಜಿಗಳನ್ನು ನಿರ್ಮಿಸಲಾಗಿದೆ. ಈ ಫೌಂಟೇನ್‌ಗಳು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಹಾಡುಗಳಿಗೂ ಹೆಜ್ಜೆ ಹಾಕುತ್ತವೆ.  ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಮನೋರಂಜನೆ ನೀಡಲು ಈ ಕಾರಂಜಿಯನ್ನು ನಿರ್ಮಿಸಲಾಗಿದೆ.  ಬುರ್ಜ್ ಖಲೀಫಾದ ಈ ಕಾರಂಜಿ 200 ಚದರ ಅಡಿಗಳಷ್ಟು ವಿಸ್ತಾರವಾಗಿದೆ. 

612
ಎಟಿಎಂನಲ್ಲೂ ಬರುತ್ತೆ ಇಲ್ಲಿ ಬಂಗಾರ

ಎಟಿಎಂನಲ್ಲಿ ಚಿನ್ನ ಬರೋಕೆ ಸಾಧ್ಯನಾ ಅಂತ ನೀವು ಮೂಗಿನ ಮೇಲೆ ಬೆರಳಿಡಬಹುದು. ಆದರೆ ದುಬೈನಲ್ಲಿ ಇಂತಹ ವ್ಯವಸ್ಥೆಯೂ ಇದೆ. ಸೂಪರ್ ರಿಚ್ ಜನರನ್ನು ಹೊಂದಿರುವ ದುಬೈ ನಗರದಲ್ಲಿ ಚಿನ್ನ ಬರುವವಂತಹ ಎಟಿಎಂ ಇದೆ.  ನಗರದ ವಿವಿಧೆಡೆ ಚಿನ್ನ ಪಡೆಯುವುದಕ್ಕಾಗಿ ಎಟಿಎಂಗಳಿದ್ದು,  ಈ ಗೋಲ್ಡ್ ಎಟಿಎಂಗಳು ನಿಮಗೆ ಚಿನ್ನದ ಬಿಸ್ಕೆಟ್ ಹಾಗೂ ನಾಣ್ಯಗಳನ್ನು ನೀಡಬಲ್ಲವು. ಎಮಿರೇಟ್ಸ್ ಪ್ಯಾಲೇಸ್ ಹೊಟೇಲ್ ಈ ರೀತಿ ಚಿನ್ನ ಬರುವಂತಹ ಎಟಿಎಂ ಸ್ಥಾಪಿಸಿದ ವಿಶ್ವದ ಮೊದಲ ಹೊಟೇಲ್ ಎನಿಸಿದೆ. 

712
ಭೂಮಿಯಿಂದ ಸಾವಿರ ಅಡಿ ಎತ್ತರದಲ್ಲಿ ಟೆನ್ನಿಸ್ ಆಟ

ದುಬೈ ನಗರವೂ ಅತ್ಯಂತ ಎತ್ತರದಲ್ಲಿ ಟೆನ್ನಿಸ್ ಆಡಬಲ್ಲ ಟೆನ್ನಿಸ್ ಕೋರ್ಟ್ ಹೊಂದಿದೆ. ಭೂಮಿಯಿಂದ ಸಾವಿರ ಅಡಿ ಎತ್ತರದಲ್ಲಿ ನೀವು ಇಲ್ಲಿ ಟೆನ್ನಿಸ್ ಆಡಬಹುದಾಗಿದೆ. ಇದು ಖುಷಿ ಹಾಗೂ ಎರಡನ್ನೂ ಜೊತೆಗೆ ನೀಡುವುದು. ಬುರ್ಜ್ ಅಲ್ ಅರಬ್ ಹೊಟೇಲ್ ಮೇಲ್ಬಾಗದಲ್ಲಿ ಈ ಟೆನ್ನಿಸ್ ಕೋರ್ಟ್‌ನ್ನು ನಿರ್ಮಿಸಲಾಗಿದೆ. ಈ ಮೈದಾನದಲ್ಲಿ ಟೆನ್ನಿಸ್ ಪ್ರತಿಭೆಗಳಾದ ರೋಜರ್ ಫೆಡರರ್ ಹಾಗೂ ಅಂಡ್ರೆ ಆಗಸ್ಸಿ ಅವರೊಂದಿಗೆ 2005ರಲ್ಲಿ  ಪಂದ್ಯಾವಳಿಯೊಂದನ್ನು ಆಯೋಜಿಸಲಾಗಿತ್ತು.  ಈ ಹೊಟೇಲ್‌ನ ಮತ್ತೊಂದು ವಿಶೇಷ ಎಂದರೆ  ತನ್ನದೇ ಆದ ಕೃತಕ ಐಲ್ಯಾಂಡ್ ಮಧ್ಯೆ ನೀರಿನ ನಡುವೆ ಇದೆ ಈ ಹೊಟೇಲ್. 

812
ದುಬೈನ ಮಿರಾಕಲ್ ಗಾರ್ಡನ್

ದುಬೈ ಪ್ರಪಂಚದಲ್ಲೇ ಅತ್ಯಂತ ಒಣ ಪ್ರದೇಶ ಎಂಬುದು ನಿಮಗೆ ಗೊತ್ತು. ಆದರೆ ಅಚ್ಚರಿ ಎಂಬಂತೆ ಇಲ್ಲಿರುವ ಹೂವಿನ ಗಾರ್ಡನ್‌ ನಿಮಗೆ ಈ ನಗರದ ಬಗ್ಗೆ ಮತ್ತೆ ಅಚ್ಚರಿ ಉಂಟು ಮಾಡುವಂತೆ ಮಾಡುತ್ತದೆ. ದುಬೈನ ಈ ಮಿರಾಕಲ್ ಗಾರ್ಡನ್ ಪ್ರಪಂಚದಲ್ಲೇ ಅತ್ಯಂತ ಗಮನಾರ್ಹವಾದ ನೈಸರ್ಗಿಕ ಹೂವಿನ ಉದ್ಯಾನವಾಗಿದೆ. ಇಲ್ಲಿ ನೀವು 50 ಮಿಲಿಯನ್‌ಗೂ ಹೆಚ್ಚು ಹೂವುಗಳನ್ನು 250 ಮಿಲಿಯನ್‌ಗೂ ಹೆಚ್ಚು ಹೂವಿನ ಸಸಿಗಳನ್ನು ನೋಡಬಹುದು. ಸುಂದರವಾದ ದೃಶ್ಯಗಳ ಜೊತೆ ಹೂವಿನ ಅದ್ಭುತ ಲೋಕವನ್ನು ಇದು ನಿಮಗೆ ನೀಡುತ್ತದೆ. 

912
ಕಠಿಣವಾದ ಕಾನೂನುಗಳು

ದುಬೈ ಕೆಲವು ವಿಚಾರಗಳಲ್ಲಿ ಬಹಳ ಕಠಿಣವಾದ ನಿಯಮಗಳನ್ನು ಹೊಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ತೂರಾಡುವುದು, ಪರಸ್ಪರ ಚುಂಬಿಸುವುದು, ನೃತ್ಯ ಮಾಡುವುದು ದುಬೈನಲ್ಲಿ ಅಪರಾಧ, ಮೈ ಮರೆವವಿನಿಂದ ಮಾಡಿದ ಈ ಕೃತ್ಯಗಳು ಅಲ್ಲಿ ನಿಮ್ಮನ್ನು ಕಂಬಿ ಹಿಂದೆ ಕೂರಿಸಬಹುದು.  ಇದರ ಜೊತೆ ಸ್ಲೀವ್‌ಲೆಸ್ ಟಾಪ್‌, ಮೊಣಕಾಲಿನ ಮೇಲಿರು ತುಂಡುಡುಗೆಗಳನ್ನು ಹಾಕಿ ಸಾರ್ವಜನಿಕ ಸ್ಥಳಗಳಲ್ಲಿ ನೀವು ಸುತ್ತಾಡುವಂತಿಲ್ಲ, ದುಬೈ ಸರ್ಕಾರವು ನೈತಿಕತೆ ಮತ್ತು ಸಾಂಸ್ಕೃತಿಕ ನಡವಳಿಕೆಗಳನ್ನು ಎತ್ತಿಹಿಡಿಯುವಲ್ಲಿ ಕಟ್ಟುನಿಟ್ಟಾಗಿದೆ.

1012
ವಿದೇಶಿಯರಿಗೆ ವಿಫುಲ ಉದ್ಯೋಗ ನೀಡುವ ನಗರಿ

ದುಬೈ ಅನೇಕ ವಿದೇಶಿಯರನ್ನು ತನ್ನ ನಗರಕ್ಕೆ ಆಕರ್ಷಿಸಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಅನೇಕ ವಲಸಿಗರು ಉದ್ಯೋಗಗಳನ್ನು ಅರಸಿ ದುಬೈಗೆ ಪ್ರಯಾಣಿಸುತ್ತಾರೆ. ದುಬೈ ನಗರವು ವಿದೇಶಿಯರಿಗೆ ವ್ಯಾಪಕವಾದ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಅಂಕಿ ಅಂಶಗಳ ಪ್ರಕಾರ ಇಲ್ಲಿನ ಉದ್ಯೋಗ ಕ್ಷೇತ್ರಗಳಲ್ಲಿ 15 ಶೇ. ಜನ ಸ್ಥಳೀಯರಾಗಿದ್ದರೆ, ಉಳಿದ 85 ಶೇಕಡಾ ಜನ ವಿದೇಶಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಶ್ರೀಲಂಕಾ ಹಾಗೂ ಭಾರತದಿಂದ ಬಂದವರಾಗಿದ್ದಾರೆ. 

1112
ಅದ್ಭುತವೆನಿಸುವ ವಾಸ್ತುಶಿಲ್ಪ

ಇಡೀ ವಿಶ್ವದಲ್ಲೇ ಅತೀ ಎತ್ತರದ ಕಟ್ಟಡಗಳನ್ನು ಹೊಂದಿರುವ ಕಾರಣಕ್ಕೆ ದುಬೈ ಜನಪ್ರಿಯವಾಗಿದೆ. ದುಬೈನ ಗಗನಚುಂಬಿ ಕಟ್ಟಡಗಳೇ ಒಂದು ಅದ್ಭುತ. ನೀವು ಇಂತಹ ಗಗನಚುಂಬಿ ಕಟ್ಟಡಗಳ ಮೇಲಿನ ಮಹಡಿಗೆ ಭೇಟಿ ನೀಡಿದರೆ ಈ ಎತ್ತರದ ಕಟ್ಟಡಗಳ ಇನ್ನಷ್ಟು ಅಧ್ಬುತಗಳನ್ನು ನೋಡಬಹುದಾಗಿದೆ. ಇವು ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ನಿಮಗೆ ಆಕಾಶದ ಮೇಲಿರುವ ಅನುಭವ ನೀಡುತ್ತವೆ. 

1212
ಸಾಕುಪ್ರಾಣಿ ಸಿಂಹ

ನೀವು ಮನೆಯಲ್ಲಿ ಹೆಚ್ಚೆಂದರೆ ನಾಯಿ ಬೆಕ್ಕುಗಳನ್ನು ಸಾಕಿ ಖುಷಿ ಪಡುತ್ತಿರಬಹುದು ಅವುಗಳ ಹಣೆಗೆ ಮುತ್ತಿಕ್ಕಿ ಖುಷಿ ಪಡಬಹುದು ಆದರೆ ದುಬೈ ಹಾಗಲ್ಲ, ಇಲ್ಲಿನ ಜನ ಸಿಂಹವನ್ನೇ ಸಾಕುತ್ತಾರೆ. ಸಿಂಹಕ್ಕೆ ಮುತ್ತಿಕ್ಕುವುದು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು ಭಯವೂ ಎನಿಸಬಹುದು. ಆದರೆ ದುಬೈ ಜನಕ್ಕೆ ಇದೆಲ್ಲಾ ಸಾಮಾನ್ಯ, ಅವರು ಸಿಂಹಗಳನ್ನು (lion) ತಮ್ಮ ಮನೆಯಲ್ಲೇ ಸಾಕುತ್ತಾ ಅವುಗಳೊಂದಿಗೆ ಜೀವನ ಮಾಡುತ್ತಾರೆ.

Read more Photos on
click me!

Recommended Stories