ರೈಲಿನಲ್ಲಿ RAC ಸೀಟು ಅಂದ್ರೇನು? ಫುಲ್ ಪೇಮೆಂಟ್ ಮಾಡಿದ್ರೂ ಇಬ್ರು ಸೀಟ್ ಶೇರ್ ಮಾಡ್ಕೋಬೇಕು ಯಾಕೆ?

Published : Sep 09, 2023, 11:05 AM ISTUpdated : Sep 09, 2023, 11:07 AM IST

ರೈಲಿನಲ್ಲಿ ಸೀಟು ಕಾಯ್ದಿರಿಸಲು ಯತ್ನಿಸಿದಾಗ ಕೆಲವೊಮ್ಮೆ ಸೀಟ್ ಕನ್‌ಫರ್ಮ್‌ ಆಗದೆ RAC ಸೀಟು ಸಿಗುತ್ತದೆ. ಹಾಗಂದ್ರೇನು? ಪೂರ್ತಿ ಹಣ ಪಾವತಿಸಿದರೂ ಈ ಸೀಟ್ ಸಿಕ್ಕರೆ ಇಬ್ಬರೂ ಸೀಟ್ ಶೇರ್ ಮಾಡಿಕೊಳ್ಳಬೇಕು ಯಾಕೆ?

PREV
16
ರೈಲಿನಲ್ಲಿ RAC ಸೀಟು ಅಂದ್ರೇನು? ಫುಲ್ ಪೇಮೆಂಟ್ ಮಾಡಿದ್ರೂ ಇಬ್ರು ಸೀಟ್ ಶೇರ್ ಮಾಡ್ಕೋಬೇಕು ಯಾಕೆ?

ರೈಲಿನಲ್ಲಿ ಪ್ರಯಾಣಿಸುವುದು ಆರಾಮದಾಯಕ ನಿಜ. ಆದರೆ ಸೀಟ್ ಬುಕ್ ಮಾಡುವುದು ಮಾತ್ರ ಹಲವರಿಗೆ ತಲೆನೋವು ತರೋ ವಿಚಾರ. ಅದರಲ್ಲೂ ಕೊನೆಯ ಕ್ಷಣದಲ್ಲಿ ಸೀಟ್ ಬುಕ್ ಮಾಡುವುದು, ಸೀಟ್ ಕನ್ಫರ್ಮ್‌ ಆಗದೇ ಇರುವುದು ಟೆನ್ಶನ್‌ಗೆ ಕಾರಣವಾಗುತ್ತದೆ. ಹೀಗೆ ಸೀಟ್ ಕನ್ಫರ್ಮ್‌ ಆಗದೇ ಇದ್ದಾಗ  RAC ಸೀಟು ದೊರಕುತ್ತದೆ. ಹಾಗಂದ್ರೇನು?

26

ರೈಲಿನ ರಿಸರ್ವ್‌ಡ್‌ ಕೋಚ್‌ನಲ್ಲಿ ಸ್ಲೀಪರ್ ಕ್ಲಾಸ್‌ನಿಂದ ಸೆಕೆಂಡ್ ಎಸಿ ವರೆಗೆ ಆರ್‌ಎಸಿ ಸೀಟುಗಳನ್ನು ನೋಬಹುದು. ಕೋಚ್‌ನಲ್ಲಿನ 6 ಮುಖ್ಯ ಆಸನಗಳ ಹೊರತಾಗಿ, ಹಜಾರದ ಇನ್ನೊಂದು ಬದಿಯಲ್ಲಿ 2 ಸೀಟುಗಳಿರುತ್ತವೆ. ಈ ಆಸನದಲ್ಲಿ 2 ಜನರು ಕುಳಿತುಕೊಳ್ಳಬಹುದು ಅಥವಾ ಒಬ್ಬ ಪ್ರಯಾಣಿಕರು ಮಾತ್ರ ಈ ಆಸನವನ್ನು ಪಡೆಯುತ್ತಾರೆ. ಇದುವೇ RAC ಸೀಟ್‌.
 

36

RAC ಎಂಬುದು ರಿಸರ್ವೇಶನ್ ಎಗೇನ್ಸ್ಟ್ ಕ್ಯಾನ್ಸಲೇಷನ್ ನ ಸಂಕ್ಷಿಪ್ತ ರೂಪವಾಗಿದೆ. RAC ಟಿಕೆಟ್ ಪ್ರಯಾಣಿಕರಿಗೆ ರೈಲಿನಲ್ಲಿ ಪ್ರಯಾಣಿಸಲು ಅನುಮತಿಸುತ್ತದೆ. ಆದರೆ ಬರ್ತ್ ಅನ್ನು ಖಾತರಿಪಡಿಸುವುದಿಲ್ಲ. ಯಾವ ಸಂದರ್ಭಗಳಲ್ಲಿ RAC ಸೀಟ್ ದೃಢೀಕರಿಸಲ್ಪಡುತ್ತದೆ ತಿಳಿಯೋಣ.

46

ರೈಲಿನಲ್ಲಿ ಸೀಟು ಕಾಯ್ದಿರಿಸಲು ಯತ್ನಿಸಿದಾಗ, ಯಾವುದೇ ಸೀಟು ಸಿಗದಿದ್ದರೂ ಕೊನೆಯವರೆಗೂ ನಿಮಗೆ ಟಿಕೆಟ್‌ ಸಿಗುವ ಮುನ್ಸೂಚನೆಯಂತೇ ವೇಟಿಂಗ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇರುತ್ತದೆ. ಕೊನೆಯಲ್ಲಿ ಸೀಟೇನಾದ್ರೂ ಖಾಲಿ ಇದ್ದಲ್ಲಿ ನಿಮಗೆ ಆ ಸೀಟನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಅದೇ ಸೀಟಿಗೆ ಮತ್ತೊಬ್ಬ ಪ್ರಯಾಣಿಕರಿಗೂ ಕೂರುವ ಅವಕಾಶ ಮಾಡಿಕೊಡಲಾಗುತ್ತದೆ.

56

ಪ್ರಯಾಣಿಕರಿಗೆ ಒಂದೇ ಆಸನವನ್ನು ಸಂಪೂರ್ಣವಾಗಿ ನೀಡಲಾಗುವುದು ಅಥವಾ ಪೂರ್ಣ ಆಸನವನ್ನು ಬೇರೆ ಸ್ಥಳದಲ್ಲಿ ನೀಡಲಾಗುತ್ತದೆ. ರದ್ದಾದ ಟಿಕೆಟ್ ಬದಲಿಗೆ ಮತ್ತೊಂದು ಟಿಕೆಟ್ ಕನ್ಫರ್ಮ್ ಆಗುತ್ತದೆ. ಇದು ಒಂದು ರೀತಿಯ ವೇಟಿಂಗ್ ಲಿಸ್ಟ್. ಆದರೆ, ಇದು ಅತ್ಯುತ್ತಮ ವೇಟಿಂಗ್ ಲಿಸ್ಟ್ ಟಿಕೆಟ್ ಎಂದು ಪರಿಗಣಿಸಲಾಗಿದೆ.

66

ಅರ್ಧದಷ್ಟು ಸೀಟಿಗೆ ರೈಲ್ವೇ ಏಕೆ ಪೂರ್ಣ ಹಣವನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ಹಲವರು ಯೋಚಿಸುತ್ತಾರೆ. ರೈಲ್ವೇ ವೇಟಿಂಗ್ ಟಿಕೆಟ್‌ಗೆ ಸಂಪೂರ್ಣ ಹಣವನ್ನು ವಿಧಿಸುತ್ತದೆ. ಇದರಲ್ಲಿ ಅರ್ಧದಷ್ಟು ಸೀಟುಗಳು ಸಹ ಲಭ್ಯವಿಲ್ಲದ ಕಾಯುವ ಟಿಕೆಟ್‌ಗಳೂ ಸೇರಿವೆ. ಆದ್ದರಿಂದ, ಜನರು ಪ್ರಯಾಣಿಸಲು ಕನಿಷ್ಠ ಅರ್ಧದಷ್ಟು ಆಸನವನ್ನು ಹೊಂದಿರುವಲ್ಲಿ RAC ಕಾಯುತ್ತಿರುವಾಗ, ಅವರು ಪೂರ್ಣ ಮೊತ್ತವನ್ನು ಪಾವತಿಸಲು ಸಿದ್ಧರಾಗಿರುತ್ತಾರೆ.

Read more Photos on
click me!

Recommended Stories