ಶಿವನಮುಖ, ದೇವಕೆರೆ, ಹೂವಿನ ಬಳ್ಳಿ; ರಾಜ್ಯದ ಪ್ರಮುಖ ನಗರಗಳ ಹಿಂದಿನ ಹೆಸರು ಕೇಳಿದ್ರೆ ಖುಷಿ ಆಗುತ್ತೆ!

Cities in Karnataka: ಕಾಲಕ್ಕೆ ತಕ್ಕಂತೆ ಬದಲಾದ ನಗರಗಳ ಹೆಸರುಗಳ ಬಗ್ಗೆ ತಿಳಿಯಿರಿ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ನಗರಗಳ ಹಿಂದಿನ ಹೆಸರುಗಳ ಮಾಹಿತಿ ಇಲ್ಲಿದೆ.

Do you know the history of changing the names of cities in Karnataka mrq
ನಗರಗಳ ಹೆಸರು

ಕಾಲದಿಂದ ಕಾಲಕ್ಕೆ ಕೆಲವು ವಸ್ತುಗಳು ಬದಲಾಗುತ್ತಿರುತ್ತವೆ. ಹಾಗೆಯೇ ಹೆಸರುಗಳು ಸಹ ಬದಲಾವಣೆಗೊಂಡಿರುತ್ತವೆ. ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ನಗರಗಳ ಮೂಲ ಹೆಸರು ಏನು ಎಂಬುದರ  ಮಾಹಿತಿ ಇಲ್ಲಿದೆ.

Do you know the history of changing the names of cities in Karnataka mrq
ಬೆಂಗಳೂರು - Bengaluru

ರಾಜಧಾನಿ ಬೆಂಗಳೂರು ಮೂಲ ಹೆಸರು 'ಬೆಂದ ಕಾಳೂರು' ಎಂದು ಕರೆಯಲಾಗುತ್ತಿತ್ತು. ಕಾಲನಂತರ ಇದು ಬೆಂಗಳೂರು ಆಗಿ ಬದಲಾಯ್ತು. ಬೆಂದ ಕಾಳೂರಿನ ಅರ್ಥ ಬೇಯಿಸಿದ ಅವರೆಕಾಳು ಎಂದರ್ಥ. ಕಳೆದುಹೋದ ಹೊಯ್ಸಳ ರಾಜನಿಗೆ ದಯಾಳು ಮಹಿಳೆ ಬೇಯಿಸಿದ ಕಾಳುಗಳನ್ನು ತಿನ್ನಿಸಿದಳು ಎಂಬ ಕಾರಣಕ್ಕೆ ಈ ಹೆಸರು ಬಂತು ಎಂಬ ಕಥೆ ಇದೆ.


ಮೈಸೂರು - Mysuru

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೆಸರು ಮಹಿಷಾಸುರ ಪಟ್ಟಣ  ಎಂದು ಕರೆಯಲಾಗುತ್ತಿತ್ತು. ಮಹಿಷಾಸುರನನ್ನು ತಾಯಿ ಚಾಮುಂಡೇಶ್ವರಿ ಹತ ಮಾಡಿದ ಬಳಿಕ ಈ ಪಟ್ಟಣವನ್ನು ಮಹಿಷಾಸುರ ಪಟ್ಟಣ ಎಂದು ಕರೆಯಲಾಯ್ತು. ಕಾಲನಂತರ ಇದು ಮೈಸೂರು ಎಂದು  ಕರೆಯಲಾಯ್ತು.

ಹೂವಿನ ಬಳ್ಳಿ - Hubballi

ಚೋಟಾ ಮುಂಬೈ ಅಂತಾನೇ ಕರೆಸಿಕೊಳ್ಳುವ ಹುಬ್ಬಳ್ಳಿಯನ್ನು "ಹೂವಿನ ಬಳ್ಳಿ"  ಎಂದು ಕರೆಯಲಾಗುತ್ತಿತ್ತು. ಈ ನಗರದಲ್ಲಿ ಅತಿಹೆಚ್ಚು ಹೂಗಳ ವ್ಯಾಪಾರ ನಡೆಯುತ್ತಿತ್ತು. ಹಾಗಾಗಿ ಇದನ್ನು ಹೂಗಳ ನಗರ ಎಂದು ಫೇಮಸ್ ಆಗಿತ್ತು.

ಮಂಗಳೂರು - Mangaluru

ಇನ್ನು ಕರ್ನಾಟಕದ ಹೆಬ್ಬಾಗಿಲು ಮಂಗಳೂರು ನಗರವನ್ನು ದೇವತೆ ಮಂಗಳಾದೇವಿ ಹೆಸರಿನಿಂದ ಗುರುತಿಸಲಾಗುತ್ತಿತ್ತು . 9ನೇ ಶತಮಾನದಲ್ಲಿ ರಾಜನೊಬ್ಬ ಮಂಗಳಾದೇವಿ ದೇವಸ್ಥಾನವನ್ನ ನಿರ್ಮಾಣ ಮಾಡುತ್ತಾನೆ. ಇಂದು ಮಂಗಳೂರು ಎಂದು ಕರೆಯಲಾಗುತ್ತದೆ 

ಶಿವಮೊಗ್ಗ - Shivamogga

ಶಿವನ ಮುಖವೇ ಇಂದು ಶಿವಮೊಗ್ಗ ಆಗಿದೆ. ಇದಕ್ಕೆ ಸಿಹಿ ಮೊಗ್ಗೆ ಎಂಬ ಹೆಸರು ಇತ್ತು ಎಂದು ಹೇಳಲಾಗುತ್ತದೆ. ಸಿಹಿ ಮೊಗ್ಗೆಯೇ ಬದಲಾದ ಕಾಲದಲ್ಲಿ ಶಿವಮೊಗ್ಗ ಎಂದು ಕರೆಯಲಾಗುತ್ತದೆ. ಹಿರಿಯರು ಇದನ್ನು ಶಿವಮೊಗ್ಗೆ ಅಂತಾನೇ ಎಂದು ಕರೆಯುತ್ತಾರೆ. ಇಲ್ಲಿಯ ಜೋಗ ಜಲಪಾತ ವಿಶ್ವ ಪ್ರಸಿದ್ಧವಾಗಿದೆ.

ಬೆಳಗಾವಿ - Belagavi

ಗಡಿ ಜಿಲ್ಲೆ, ಕುಂದಾ ನಗರಿ ಬೆಳಗಾವಿಯನ್ನು "ವೆನುಗ್ರಾಮ" ಎಂದು ಕರೆಯಲಾಗುತ್ತಿತ್ತು. ವೆನುಗ್ರಾಮ ಅಂದ್ರೆ ಬಂಬೂ ಹಳ್ಳಿ ಎಂದರ್ಥ. ಹಾಗೆ ಇದನ್ನು ಕೋಟೆಗಳ ನಾಡು ಎಂದು ಕರೆಯಲಾಗುತ್ತದೆ. 

ದಾವಣಗೆರೆ - Davanagere

ಬೆಣ್ಣೆ ನಗರಿ ದಾವಣಗೆರೆ ಹೆಸರು ದೇವ-ಕೆರೆಯಿಂದ ಬಂತು ಎಂಬ ನಂಬಿಕೆ ಇದೆ. ಅಂದ್ರೆ ಇಲ್ಲಿಯ ದೇವರ ಕೆರೆ ಇಲ್ಲಿತ್ತು. ದಾರಿಹೋಕರು, ವ್ಯಾಪಾರಿಗಳು, ಪ್ರವಾಸಿಗರು ಈ ಕೆರೆಯ ನೀರು ಕುಡಿದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.  ದೇವ-ಕೆರೆಯಿಂದ ದಾವಣಗೆರೆಯಾಗಿ ಬದಲಾಗಿದೆ.

ಬಳ್ಳಾರಿ - Ballary

ಬಿಸಿಲು ನಾಡು ಬಳ್ಳಾರಿಯ  ಮೂಲ ಹೆಸರು ಬಳ್ಳೇಶ್ವರಿ ಆಗಿತ್ತು. ಬಳ್ಳೇಶ್ವರಿ ಅನ್ನೋದು ದೇವತೆಯ ಹೆಸರು ಆಗಿದೆ. ಕಲ್ಲು ಬಂಡೆಗಳಿಂದ ಈ ಪ್ರದೇಶ ಆವರಿಸೋದರಿಂದ ಇದನ್ನು ಬಳ್ಳಾರಿ ಎಂದು ಕರೆಯಲಾಗುತ್ತಿದೆ ಎಂಬ ನಂಬಿಕೆಯೂ ಇದೆ.

Latest Videos

click me!