IRCTC Tour: ಅರುಣಾಚಲಂನಿಂದ ರಾಮೇಶ್ವರಂವರೆಗೂ, ಜಸ್ಟ್‌ 16 ಸಾವಿರಕ್ಕೆ ಏಳು ಪುಣ್ಯಕ್ಷೇತ್ರಗಳ ದರ್ಶನ

Published : Sep 05, 2026, 03:28 PM IST

ಐಆರ್‌ಸಿಟಿಸಿ 'ದಿವ್ಯ ದಕ್ಷಿಣ ಯಾತ್ರೆ ವಿತ್ ಅರುಣಾಚಲಂ' ಹೆಸರಿನಲ್ಲಿ 9 ದಿನಗಳ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಈ ಯಾತ್ರೆಯು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ತಮಿಳುನಾಡಿನ ಅರುಣಾಚಲಂ, ರಾಮೇಶ್ವರಂ, ಮಧುರೈ ಸೇರಿದಂತೆ ಏಳು ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನವನ್ನು ಒದಗಿಸುತ್ತದೆ.

PREV
17
ದಿವ್ಯ ದಕ್ಷಿಣ ಯಾತ್ರೆ ವಿತ್ ಅರುಣಾಚಲಂ

ದಕ್ಷಿಣ ಭಾರತದ ಪ್ರಮುಖ ದೇವಾಲಯಗಳು, ಆಧ್ಯಾತ್ಮಿಕ ಕ್ಷೇತ್ರಗಳ ದರ್ಶನ ಪಡೆದುಕೊಳ್ಳಬೇಕು ಎಂದು ಬಯಸುತ್ತಿರುವ ಭಕ್ತರಿಗೆ ಐಆರ್‌ಸಿಟಿಸಿ ಪ್ರತ್ಯೇಕ ಟೂರ್‌ ಪ್ರಕಟಿಸಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೆಷನ್ ಲಿಮಿಟೆಡ್ ರೂಪಿಸಿರುವ ಈ 9 ದಿನಗಳ ಯಾತ್ರೆಯಲ್ಲಿ ಭಾರತ್ ಗೌರವ್ ಟೂರಿಸ್ಟ್ ಟ್ರೈನ್‌ನಲ್ಲಿ ಸಾಗಲಿದೆ. ಐಆರ್‌ಸಿಟಿಸಿ ಸೌತ್ ಸೆಂಟ್ರಲ್ ಝೋನ್ ತಿಳಿಸಿರುವ ವಿವರಗಳ ಅನ್ವಯ, 'ದಿವ್ಯ ದಕ್ಷಿಣ ಯಾತ್ರೆ ವಿತ್ ಅರುಣಾಚಲಂ' ಹೆಸರಿನಲ್ಲಿ ಆಯೋಜಿಸುತ್ತಿರುವ ಈ ಟೂರ್ ಅಕ್ಟೋಬರ್ 06 ರಿಂದ ಅಕ್ಟೋಬರ್ 14 ವರೆಗೂ ಇರಲಿದೆ.

27
ತಮಿಳುನಾಡಿನ ಏಳು ಪುಣ್ಯಕ್ಷೇತ್ರಗಳ ದರ್ಶನ

ತಮಿಳುನಾಡಿನ ಏಳು ಪುಣ್ಯಕ್ಷೇತ್ರಗಳು, ಸಾಂಸ್ಕೃತಿಕ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ತಿರುವಣ್ಣಮಲೈನಲ್ಲಿರುವ ಅರುಣಾಚಲಂ ಆಲಯ, ಚಿದಂಬರಂನ ನಟರಾಜ ಆಲಯ, ತಿರುಚಾನಪಲ್ಲಿಯ ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ಆಲಯ, ತಂಜಾವೂರಿನ ಬೃಹದೀಶ್ವರ ಆಲಯ, ರಾಮೇಶ್ವರಂನ ರಾಮನಾಥಸ್ವಾಮಿ ಆಲಯ, ಮದುರೈನಲ್ಲಿರುವ ಮೀನಾಕ್ಷಿ ಅಮ್ಮನ್ ಆಲಯ ದರ್ಶನ ಪಡೆದುಕೊಳ್ಳುವ ಅವಕಾಶವಿದೆ. ಕನ್ಯಾಕುಮಾರಿಯ ರಾಕ್ ಮೆಮೊರಿಯಲ್, ಗಾಂಧಿ ಮಂಡಪ, ಕುಮಾರಿ ಅಮ್ಮನ್ ಆಲಯಕ್ಕೆ ಭೇಟಿ ನೀಡಬಹುದು. ಈ ಪ್ಯಾಕೇಜ್‌ನಲ್ಲಿ ಆಲಯ ಭೇಟಿ ಜೊತೆಗೆ ರಾತ್ರಿಯ ವಸತಿ, ಸಾರಿಗೆ, ರೈಲು ಪ್ರಯಾಣ ಇರಲಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಪ್ರದೇಶಗಳ ಒಂದೇ ಯಾತ್ರೆಯಲ್ಲಿ ನೋಡಲು ಈ ಪ್ರಯಾಣವನ್ನು ಐಆರ್ಸಿಟಿಸಿ ಯೋಜನೆ ರೂಪಿಸಿದೆ.

37
ಅಕ್ಟೋಬರ್‌ 6ರ ಬೆಳಗ್ಗೆ 7:35ಕ್ಕೆ ಯಾತ್ರೆ ಆರಂಭ

ಭಾರತ್ ಗೌರವ್ ಟೂರಿಸ್ಟ್ ಟ್ರೈನ್ 2026 ಅಕ್ಟೋಬರ್‌ 6ರ ಬೆಳಗ್ಗೆ 7:35ಕ್ಕೆ ಸಿಕಿಂದ್ರಾಬಾದ್‌ನಿಂದ ಹೊರಡುತ್ತದೆ. ಪ್ರಯಾಣಿಕರು ಮಾರ್ಗದಲ್ಲಿರುವ ಹಲವು ರೈಲ್ವೆ ನಿಲ್ದಾಣಗಳಲ್ಲಿ ಹತ್ತಬಹುದಾಗಿದೆ. ಇದರಲ್ಲಿ ಪ್ರಮುಖವಾಗಿ ತೆಲಂಗಾಣ ಮತ್ತು ಆಂಧ್ರದ ಚೆರ್ಲಪಲ್ಲಿ, ಜನಗಾಂವ್, ಕಾಜಿಪೇಟ್, ವಾರಂಗಲ್, ಮಹಬೂಬಾಬಾದ್, ಖಮ್ಮಂ, ಮಧಿರಾ, ವಿಜಯವಾಡ, ತೆನಾಲಿ, ಓಂಗೋಲ್, ನೆಲ್ಲೂರು, ಗುಡೂರು ಮತ್ತು ರೇಣಿಗುಂಟಾ ನಿಲ್ದಾಣಗಳು ಸೇರಿವೆ. ಪ್ರಯಾಣಿಕರು ಅಕ್ಟೋಬರ್ 7 ರಂದು ತಿರುವಣ್ಣಾಮಲೈ ತಲುಪಲಿದ್ದಾರೆ. ಅಲ್ಲಿ ವಸತಿ ವ್ಯವಸ್ಥೆಯನ್ನು ಪೂರ್ಣಗೊಳಿಸಿದ ನಂತರ, ಅವರು ಅರುಣಾಚಲಂ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 8 ರಂದು ಅವರು ಚಿದಂಬರಂಗೆ ಪ್ರಯಾಣಿಸಿ ನಟರಾಜ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ನಂತರ ತಿರುಚಿರಾಪಳ್ಳಿಗೆ ತೆರಳಿ ಅಲ್ಲಿ ರಾತ್ರಿ ವಾಸ್ತವ್ಯ ಹೂಡುತ್ತಾರೆ. ಮರುದಿನ ಅವರು ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸುಮಾರು 60 ಕಿಲೋಮೀಟರ್ ಪ್ರಯಾಣಿಸಿ ತಂಜಾವೂರನ್ನು ತಲುಪಲಿದ್ದು, ಅಲ್ಲಿ ಬೃಹದೀಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

47
ಅಕ್ಟೋಬರ್ 14ರಂದು ಬೆಳಗ್ಗೆ ಯಾತ್ರೆ ಅಂತ್ಯ

ಅಲ್ಲಿಂದ ಈ ಯಾತ್ರೆ ರಾಮೇಶ್ವರಂ ಕಡೆ ಸಾಗಲಿದೆ. ಅಕ್ಟೋಬರ್ 10ರ ಬೆಳಗ್ಗೆ ರಾಮೇಶ್ವರಂ ತಲುಪಲಿದೆ. ಆ ಬಳಿಕ ರಾಮನಾಥಸ್ವಾಮಿ ಆಲಯದೊಂದಿಗೆ ಇತರ ದೇವಾಲಯಗಳ ದರ್ಶನ ಪಡೆದುಕೊಳ್ಳಬಹುದಾಗಿದೆ. ಅಕ್ಟೋಬರ್ 11 ರಂದು ಮಧುರೆಗೆ ಪ್ರಯಾಣಿಸಿ, ಪ್ರಸಿದ್ಧ ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅದೇ ರಾತ್ರಿ ರೈಲು ಕನ್ಯಾಕುಮಾರಿಯತ್ತ ಹೊರಡಲಿದೆ. ಅಕ್ಟೋಬರ್ 12 ರಂದು ಅವರು ಕನ್ಯಾಕುಮಾರಿಯಲ್ಲಿರುವ ರಾಕ್ ಮೆಮೋರಿಯಲ್, ಗಾಂಧಿ ಮಂಟಪ ಮತ್ತು ಸನ್‌ಸೆಟ್ ಪಾಯಿಂಟ್‌ಗೆ ಭೇಟಿ ನೀಡಲಿದ್ದಾರೆ. ತದನಂತರ, ಸಿಕಂದರಾಬಾದ್‌ಗೆ ವಾಪಸ್ ಪ್ರಯಾಣ ಆರಂಭವಾಗಲಿದೆ. ಅಕ್ಟೋಬರ್ 14ರಂದು ಬೆಳಗ್ಗೆ ಸಿಕ್ರಿಂದ್ರಾಬಾದ್‌ ತಲುಪಿ ಯಾತ್ರೆ ಪೂರ್ಣಗೊಳ್ಳಲಿದೆ.

57
ಇಲ್ಲಿದೆ ನೋಡಿ ದರ ಪಟ್ಟಿ!

ಈ ಟೂರ್‌ಗಾಗಿ ಐಆರ್‌ಸಿಟಿಸಿ ಮೂರು ರೀತಿಯ ಪ್ಯಾಕೆಜ್ ನೀಡಿದೆ. ಇದರಲ್ಲಿ ಜಿಎಸ್‌ಟಿ ಕೂಡ ಸೇರಿದೆ. ಎಕಾನಮಿ ಪ್ಯಾಕೇಜ್‌ನಲ್ಲಿ ಸ್ಪೀಪರ್ ಕ್ಲಾಸ್ ಪ್ರಯಾಣಕ್ಕೆ ಹಿರಿಯರಿಗೆ 15,800, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 14,800 ಪಾವತಿ ಮಾಡಬೇಕಿದೆ. ಸ್ಟಾಂಡರ್ಡ್ ಪ್ಯಾಕೇಜ್‌ನಲ್ಲಿ 3ಎಸಿ ಪ್ರಯಾಣ ಇರಲಿದೆ. ಹಿರಿಯರಿಗೆ 23,200, ಮಕ್ಕಳಿಗೆ 22,000 ದರ ನಿಗಧಿಯಾಗಿದೆ. ಕಂಫರ್ಟ್ ಪ್ಯಾಕೇಜ್‌ನಲ್ಲಿ 2ಎಸಿ ಪ್ರಯಾನ ಇರಲಿದೆ. ಹಿರಿಯರಿಗೆ 29,600, ಮಕ್ಕಳಿಗೆ 28,100 ರೂಪಾಯಿ ನಿಗದಿಯಾಗಿದೆ. ಒಟ್ಟು 705 ಸೀಟ್ ಇದೆ. ಇದರಲ್ಲಿ 237 ಸ್ಲೀರ್ ಕ್ಲಾಸ್ ಸೀಟು, 416 3ಎಸಿ ಸೀಟು, 52 2ಎಸಿ ಸೀಟು ಇರಲಿದೆ. ಭಾರತ್ ಗೌರವ್ ಟ್ರೈನ್‌ನಲ್ಲಿ ರೈಲ್ವೆ ಟೂರಿಸಂ ಪ್ರೋತ್ಸಾಹಿಸಲು ಇಂಡಿಯನ್ ರೈಲ್ವೇಸ್ ಸುಮಾರು 33 ಶೇಕಡಾ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ ಪ್ರಕಟಿಸಿದ ಟೂರ್ ದರಲ್ಲಿ ಇರಲಿದೆ.

67
ಏನೆಲ್ಲಾ ಫ್ರೀ? ಯಾವುದಕ್ಕೆ ಹಣ ಕೊಡಬೇಕು?

ಟ್ರೈನ್ ಪ್ರಯಾಣ, ವಸತಿ, ವಾಶ್ ಅಂಡ್ ಚೇಂಜ್ ಸದುಪಯೋಗ, ಆಯಾ ಕೆಟಗಿರಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಪ್ಯಾಕೇಜ್‌ನಲ್ಲಿ ಇರಲಿದೆ. ಎಕಾನಮಿ ಕ್ಯಾಟಗಿರಿ ಪ್ರಯಾಣಿಕರಿಗೆ ನಾನ್ ಎಸಿ ವಸತಿ, ನಾನ್ ಎಸಿ ಸಾರಿಗೆ ಇರುತ್ತದೆ. ಸ್ಯಾಂಡರ್ಡ್ ಕ್ಯಾಟಗರಿಯಲ್ಲಿ ಎಸಿ ರೂಮ್, ಸಾರಿಗೆ ನಾನ್ ಎಸಿ ಇರಲಿದೆ. ಕಂಫರ್ಟ್ ಕ್ಯಾಟಗಿರಿಯಲ್ಲಿ ಪ್ರಯಾಣಿಕರಿಗೆ ಎಸಿ ರೂಮ್, ಎಸಿ ಸಾರಿಗೆ ವ್ಯವಸ್ಥೆ ಇರಲಿದೆ. ಬೆಳಗ್ಗೆ ಟೀ, ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಕೂಡ ಪ್ಯಾಕೇಜ್ ಭಾಗವಾಗಿರುತ್ತದೆ. ಎಲ್ಲಾ ಊಟವೂ ಸಸ್ಯಹಾರಿಯೇ ಇರುತ್ತದೆ. ಪ್ರಯಾಣಿಕರಿಗೆ ಟ್ರಾವೆಲ್ ಇನ್ಶುರೆನ್ಸ್, ಪ್ರವಾಸ ಮಾರ್ಗದರ್ಶಕರ ಸೇವೆಗಳು, ಪ್ರಯಾಣದ ಅವಧಿಯಲ್ಲಿ ಭದ್ರತಾ ಸಿಬ್ಬಂದಿಯ ಉಪಸ್ಥಿತಿ ಹಾಗೂ IRCTC ಪ್ರವಾಸ ವ್ಯವಸ್ಥಾಪಕರಿಂದ ನೆರವು ಒದಗಿಸಲಾಗುತ್ತದೆ. ಅನ್ವಯವಾಗುವ ಎಲ್ಲಾ ತೆರಿಗೆಗಳೂ ಪ್ಯಾಕೇಜ್ ದರದಲ್ಲಿಯೇ ಸೇರಿರುತ್ತವೆ.

77
ಟಿಕೆಟ್ ದರದೊಂದಿಗೆ ಪ್ಯಾಕೇಜ್‌ನಲ್ಲಿ ಏನಿದೆ?

ಪ್ಯಾಕೇಜ್ ದರ ಸಲ್ಲಿಸಿದ ಬಳಿಕ ಎಲ್ಲಾ ಖರ್ಚುಗಳು ಇದರಲ್ಲಿಯೇ ಇರುತ್ತದೆ. ಸ್ಮಾರಕ ಕಟ್ಟಡಗಳಿಗೆ ಎಂಟ್ರಿ, ದರ, ಬೋಟಿಂಗ್, ಅಡ್ವೆಂಚರ್ ಸ್ಪೋರ್ಟ್ಸ್, ಲೋಕಲ್ ಗೈಡ್ ಖರ್ಚುಗಳು ಇದರಲ್ಲಿ ಇರೋದಿಲ್ಲ. ರೂಮ್ ಸರ್ವೀಸ್ ದರ ಕೂಡ ಪ್ರಯಾಣಿಕರು ಪಾವತಿಸಬೇಕು. ಇನ್ನು, ಲಾಂಡ್ರಿ, ಮಿನರಲ್ ವಾಟರ್, ಇತರೇ ಜ್ಯೂಸ್‌ಗಳು ರೆಗ್ಯಲರ್ ಮೆನುವಿನಲ್ಲಿ ಇಲ್ಲದ ಆಹಾರ ಖರ್ಚು ಪ್ರಯಾಣಿರೇ ಪಾವತಿಸಬೇಕು. ಒಟ್ಟಾರೆ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳನ್ನು ಒಂದೇ ಟೂರ್‌ನಲ್ಲಿ ನೋಡಬೇಕು ಎಂದು ಭಾವಿಸುವವರಿಗೆ ಇದು ಉತ್ತಮ ಆಯ್ಕೆ. ಆದರೆ ಟಿಕೆಟ್ ದರದೊಂದಿಗೆ ಪ್ಯಾಕೇಜ್‌ನಲ್ಲಿ ಏನಿದೆ? ಹೆಚ್ಚುವರಿಯಲ್ಲಿ ಏನೆಲ್ಲಾ ಪಾವತಿ ಮಾಡಬೇಕು ಅಂತ ತಿಳಿದುಕೊಳ್ಳಕೊಂಡು ಟಿಕೆಟ್ ಬುಕ್ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories