ದೀರ್ಘ ಪ್ರಯಾಣಕ್ಕೆ ಅತ್ಯುತ್ತಮ ಸಾರಿಗೆ ಅಂದ್ರೆ ಭಾರತೀಯ ರೈಲ್ವೆ. ಆದ್ರೆ ಜನಸಂದಣಿ ಹೆಚ್ಚಿರುವ ರೈಲುಗಳಲ್ಲಿ ಕನ್ಫರ್ಮ್ ಟಿಕೆಟ್ ಸಿಗೋದು ಲಾಟರಿ ಹೊಡೆದಂತೆ. ಆದ್ರೂ ಕೆಲವರು ವೇಟಿಂಗ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್‌ನಲ್ಲಿ ಬಂದಿರುತ್ತಾರೆ.
25
ಈ ವೇಳೆ ಟಿಕೆಟ್ ಪರಿಶೀಲಕರು ಜನರಲ್ ಕೋಚ್‌ಗೆ ಹೋಗುವಂತೆ ಹೇಳುತ್ತಾರೆ. ವೇಟಿಂಗ್ ಟಿಕೆಟ್ ಹಣ ರಿಫಂಡ್ ಆಗುತ್ತದೆ. ಹಾಗಾಗಿ ವೇಟಿಂಗ್ ಟಿಕೆಟ್ ಹಿಡಿದು ಜನರಲ್ ಕೋಚ್‌ನಲ್ಲಿ ಪ್ರಯಾಣಿಸಬಹುದಾ? ಈ ಬಗ್ಗೆ ಭಾರತೀಯ ರೈಲ್ವೆಯ ನಿಯಮ ಏನು ಹೇಳುತ್ತೆ? ಎಂಬುದರ ಮಾಹಿತಿ ಇಲ್ಲಿದೆ.
35
ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಪಾಲಿಸಬೇಕಾದ ಹಲವು ನಿಯಮಗಳನ್ನು ರೂಪಿಸಿದೆ. ಪ್ರಯಾಣಿಕರು ಸಹ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಈ ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
45
ವೇಟಿಂಗ್ ಟಿಕೆಟ್ ಹಿಡಿದು ಜನರಲ್ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಕರಣಗಳು ಹಲವು ಕಂಡು ಬರುತ್ತವೆ. ವೇಟಿಂಗ್ ಟಿಕೆಟ್ ಹಿಡಿದು ಜನರಲ್ ಕೋಚ್‌ನಲ್ಲಿ ಪ್ರಯಾಣಿಕರು ಪ್ರಯಾಣಿಸುವಂತಿಲ್ಲ. ಒಂದು ವೇಳೆ ಟಿಟಿಇ ನಿಮ್ಮನ್ನು ಹಿಡಿದ್ರೆ ದಂಡ ಪಾವತಿಸಬೇಕಾಗುತ್ತದೆ. ಎಷ್ಟು ದಂಡ ಪಾವತಿಸಬೇಕು ಎಂಬದನ್ನು ನೋಡೋಣ ಬನ್ನಿ
55
ಎಸಿ ಕೋಚ್‌ನಲ್ಲಿ ವೇಟಿಂಗ್ ಟಿಕೆಟ್‌ನೊಂದಿಗೆ ಪ್ರಯಾಣಿಸಿದ್ರೆ 440 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಟಿಟಿಇ ಬಯಸಿದರೆ ಅಂತಹ ಪ್ರಯಾಣಿಕರನ್ನು ರೈಲಿನಿಂದ ಮುಂದಿನ ನಿಲ್ದಾಣದಲ್ಲಿ ಕೆಳಗೆ ಇಳಿಸಬಹುದು. ಸ್ಲೀಪರ್ ಕೋಚ್‌ನಲ್ಲಿದ್ದರೆ 250 ರೂ. ದಂಡ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ರೈಲ್ವೆ ಟಿಕೆಟ್ ಕೌಂಟರ್‌ನಿಂದ ಟಿಕೆಟ್ ಖರೀದಿಸಿದ್ದರೆ ಮತ್ತು ಅದು ವೇಟಿಂಗ್‌ನಲ್ಲಿದ್ರೆ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುವ ಅವಕಾಶವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.