ಈ ರೆಸ್ಟೋರೆಂಟಲ್ಲಿ ತಿನ್ನಬೇಕು ಅಂದ್ರೆ ಬರೋಬ್ಬರಿ 4 ವರ್ಷ ಕಾಯಬೇಕು !

First Published | Aug 3, 2023, 5:14 PM IST

ಯುಕೆಯಲ್ಲಿರುವ ಒಂದು ರೆಸ್ಟೋರೆಂಟ್‌ನಲ್ಲಿ ನೀವು ತಿನ್ನಬೇಕು ಅಂದ್ರೆ ಅದಕ್ಕೆ ನಾಲ್ಕು ವರ್ಷ ಕಾಯಬೇಕಂತೆ. ಅಚ್ಚರಿ ಆದ್ರೂ ಸತ್ಯ ಇದು. ಅಂತಹ ವಿಶೇಷತೆ ಈ ಹೊಟೇಲ್‌ನಲ್ಲಿ ಏನಿದೆ? ಯಾಕೆ ಜನ ನಾಲ್ಕು ವರ್ಷ ಕಾಯುತ್ತಾರೆ ನೋಡೋಣ. 
 

ಒಂದು ರೆಸ್ಟೋರೆಂಟ್ ಗೆ (restaurant) ಹೋಗ್ತೀರಿ, ಅಲ್ಲಿ ಪೂರ್ತಿ ಜನ ಇರ್ತಾರೆ, ಆವಾಗ ವೈಟ್ ಮಾಡ್ಬೇಕಾಗಿ ಬರುತ್ತೆ. ಒಂದು ರೆಸ್ಟೋರೆಂಟ್ ನಲ್ಲಿ ತಿನ್ಬೇಕು ಅಂತಾದ್ರೆ ನೀವು ಎಷ್ಟು ಹೊತ್ತು ವೈಟ್ ಮಾಡ್ತೀರಾ? ಅರ್ಧ ಗಂಟೆ? ಒಂದು ಗಂಟೆ? ಜಾಸ್ತಿ ಅಂದ್ರೆ ಎರಡು ಗಂಟೆ? ಅಲ್ವಾ? ಅದುವೇ ಜಾಸ್ತಿ ಅನ್ನಬಹುದು. ಆದ್ರೆ ಯುಕೆಯಲ್ಲೊಂದು ರೆಸ್ಟೋರೆಂಟ್ ಇದೆ. ಅಲ್ಲಿ ತಿನ್ನಲು ಬರೋಬ್ಬರಿ 4 ವರ್ಷ ಕಾಯಬೇಕು.
 

ಕ್ರಿ.ಶ 1800 ರಲ್ಲಿ ನಿರ್ಮಿಸಲಾದ 'ದಿ ಬ್ಯಾಂಕ್ ಟ್ಯಾವರ್ನ್' (the bank tavern) ರೆಸ್ಟೋರೆಂಟ್ ಅನೇಕ ಗಲಭೆಗಳು ಮತ್ತು ಎರಡು ವಿಶ್ವ ಯುದ್ಧಗಳಿಗೆ ಸಾಕ್ಷಿಯಾದ ನಂತರವೂ ಸ್ಥಿರವಾಗಿ ನಿಂತಿದೆ. ಲಂಡನ್‌ನಿಂದ ಎರಡೂವರೆ ಗಂಟೆಗಳ ಪ್ರಯಾಣಿಸುವಷ್ಟು ದೂರದಲ್ಲಿರುವ ಈ ರೆಸ್ಟೋರೆಂಟ್ ತನ್ನನ್ನು 'ಬಿಗ್ ಹಾರ್ಟೇಡ್ ಸ್ಮಾಲ್ ಪಬ್' ಎಂದು ಕರೆದುಕೊಳ್ಳುತ್ತದೆ. 200 ವರ್ಷಗಳಿಗಿಂತ ಹಳೆಯದಾದ ಈ ರೆಸ್ಟೋರೆಂಟ್‌ನಲ್ಲಿ ಬುಕ್ಕಿಂಗ್‌ಗಾಗಿ ವೈಟಿಂಗ್ ಲಿಸ್ಟ್  4 ವರ್ಷಗಳವರೆಗೆ ಇರುತ್ತದೆ.
 

Tap to resize

ಈ ರೆಸ್ಟೋರೆಂಟ್‌ನ ಕಾಯುವ ಸಮಯ (waiting period)ವಿಶ್ವದಲ್ಲೇ ಅತ್ಯಧಿಕವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ರೆಸ್ಟೋರೆಂಟ್‌ನ ಭಾನುವಾರದ ಊಟಕ್ಕೆ ಟೇಬಲ್ ರಿಸರ್ವ್ ಮಾಡಲು ನಾಲ್ಕು ವರ್ಷ ಕಾಯಬೇಕಾಗುತ್ತದೆ. ಅಷ್ಟು ವರ್ಷ ಕಾಯುವ ಹಾಗಿದ್ರೆ ಮಾತ್ರ ನೀವಿಲ್ಲಿ ಬುಕ್ ಮಾಡಬಹುದು. 
 

ಯುಕೆಯ ಸೆಂಟ್ರಲ್ ಬ್ರಿಸ್ಟಲ್ನಲ್ಲಿರುವ (Central Bristle) ಬ್ಯಾಂಕ್ ಟ್ಯಾವೆರ್ನ್ ರೆಸ್ಟೋರೆಂಟ್‌ನಲ್ಲಿ ಬುಕಿಂಕ್‌ನ ವೇಟಿಂಗ್ ಲಿಸ್ಟ್ ಕೇಳಿದ್ರೆ ಅಚ್ಚರಿಯಾಗಬಹುದು. ಈ ರೆಸ್ಟೋರೆಂಟ್ ತನ್ನ ವಿಶೇಷ ಮೆನು 'ಸಂಡೇ ಸ್ಪೆಷಲ್' ಗೆ(Sunday special) ಸಾಕಷ್ಟು ಪ್ರಸಿದ್ಧ. ವಿಶೇಷ ಬೀಫ್ ತಯಾರಿಸಲಾಗುತ್ತದೆ.
 

ರೋಸ್ಮರಿಯಲ್ಲಿ ಬೆರೆಸಿದ ಜೇನುತುಪ್ಪ ಮತ್ತು ಫ್ರೈ ಮಾಡಿದ ಬೇಬಿ ಮಟನ್ ಇಲ್ಲಿನ ಸ್ಪೆಷಲ್ ಡಿಶ್. ಇದಲ್ಲದೆ, ಬೇಳೆಕಾಳುಗಳು, ತರಕಾರಿ ಮತ್ತು ರೋಟಿ ಸಹ ಇಲ್ಲಿ ಸರ್ವ್ ಮಾಡಲಾಗುತ್ತೆ. ಈ ರೆಸ್ಟೋರೆಂಟ್ ಭಾನುವಾರದಂದು ಗ್ರೀಕ್ ಸ್ಕ್ವಿಡ್ ಬಾಲ್ಸ್, ದಾಲ್ ಪಕೋಡ, ಮೇಪಲ್ ಸಿರ್ಚಾ ಗ್ಲೇಜ್ಡ್, ಬೆಲ್ಲಿ ಬೀಫ್, ಪೋರ್ಕ್ ಸಹ ಸರ್ವ್ ಮಾಡ್ತಾರೇ. ಅದೇ ಸಮಯದಲ್ಲಿ, ಸಿಹಿತಿಂಡಿಯಲ್ಲಿ ರಾಸ್ಪೆರಿ ಕರ್ಡ್ ಪನ್ನಾ ಕೋಟಾ ಮತ್ತು ಗೂಸ್ ಬೆರ್ರಿ ಸ್ಪಾಂಜ್ ಜೊತೆಗೆ ಸ್ಟ್ರಾಬೆರಿ ಮತ್ತು ಬಿಳಿ ಚಾಕೊಲೇಟ್ ಬಡಿಸುತ್ತಾರೆ. 
 

ಈ ರೆಸ್ಟೋರೆಂಟ್ ಮೆನು ಪ್ರಕಾರ ಸುಮಾರು 26.95 ಪೌಂಡ್ ಅಂದರೆ ಮೂರು ಕೋರ್ಸ್ ಊಟಕ್ಕೆ 2850 ರೂಪಾಯಿಗಳು ಅಥವಾ ಎರಡು ಕೋರ್ಸ್ ಊಟಕ್ಕೆ 21.95 ಪೌಂಡ್ ಅಂದರೆ 2320 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.  ವೆಬ್ಸೈಟ್ ಮಾಹಿತಿ ಪ್ರಕಾರ, ಗ್ರಾಹಕರು ಭಾನುವಾರ ತಮ್ಮ ಮಧ್ಯಾಹ್ನದ ಊಟಕ್ಕಾಗಿ ಆಹಾರದ ಮೆನುವನ್ನು (Sunday special menu) ಆಯ್ಕೆ ಮಾಡಬಹುದು. ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಊಟವನ್ನು ಸರ್ವ್ ಮಾಡಲಾಗುತ್ತೆ.. 
 

ಬ್ಯಾಂಕ್ ಟ್ಯಾವರ್ನ್ ನ ಸಂಡೇ ರೋಸ್ಟ್ ಮಿಲ್ (Sunday roast meal) 2019 ರಲ್ಲಿ ಬ್ರಿಸ್ಟಲ್ ನ ಅಬ್ಸರ್ವರ್ ಮಾಸಿಕ ಆಹಾರ ಪ್ರಶಸ್ತಿಯನ್ನು ಸಹ ಪಡೆದಿದೆ. ಇನ್ನು  2018 ರಲ್ಲಿ ಬ್ರಿಸ್ಟಲ್ ಗುಡ್ ಫುಡ್ ಪ್ರಶಸ್ತಿ ಸಹ ಈ ರೆಸ್ಟೋರೆಂಟ್ ಪಡೆದಿದೆ. ಅವರ ಭಾನುವಾರದ ರೋಸ್ಟ್ ಮೀಲ್ ಬ್ರಿಸ್ಟಲ್ ನಲ್ಲಿ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. 
 

ಮಾಹಿತಿಯ ಪ್ರಕಾರ, ಭಾನುವಾರ ಆನ್ಲೈನ್ ಬುಕಿಂಗ್ ಕ್ಲೋಸ್ ಆಗಿದ್ರೆ, ಗ್ರಾಹಕರು ನೇರವಾಗಿ ರೆಸ್ಟೋರೆಂಟ್ಗೆ ಹೋಗುವ ಮೂಲಕ ತಮ್ಮ ಅದೃಷ್ಟ ಪರೀಕ್ಷಿಸಬಹುದು. ಟೇಬಲ್ ಖಾಲಿಯಾಗಿದ್ದರೆ ಮತ್ತು ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸಿದ್ದರೆ, ನೀವು ಬುಕಿಂಗ್ ಪಡೆಯುತ್ತೀರಿ.
 

Latest Videos

click me!