ನೋಡ ಬನ್ನಿ, ಹಚ್ಚ ಹಸಿರ ಪರಿಸರ, ಮನಸಿಗೆ ಮುದ ನೀಡುವ ಗಿರಿಧಾಮ

First Published | May 19, 2023, 12:42 PM IST

ಹಚ್ಚ ಹಸಿರ ಪರಿಸರವನ್ನು ನೋಡಿದ್ರೆ ಎಂಥವರ ಮನಸ್ಸಾದ್ರೂ ಅರಳುತ್ತೆ. ಲೈಫ್‌ನ ಪ್ರಾಬ್ಲಂ ಎಲ್ಲಾ ಮರೆತುಹೋಗಿ ಒಂದು ಕ್ಷಣಕ್ಕೆ ರಿಲ್ಯಾಕ್ಸ್ ಆಗುತ್ತೆ. ಅಂಥಾ ಕೆಲವು ಪರಿಸರದ ಫೋಟೋಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ.

ಚಾರ್ಮಾಡಿ
ಚಾರ್ಮಾಡಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ಇದು ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ಹುಲ್ಲುಗಾವಲುಗಳನ್ನು ಹೊಂದಿದೆ.

ಊಟಿ
ತಮಿಳುನಾಡಿನ ಸುಂದರವಾದ ಗಿರಿಧಾಮಗಳಲ್ಲಿ ಊಟಿ ಕೂಡ ಒಂದಾಗಿದೆ. ನೀಲಗಿರಿ ಬೆಟ್ಟಗಳ ನಡುವೆ ನೆಲೆಸಿರುವ ಊಟಿಯನ್ನು ಉದಕಮಂಡಲಂ ಎಂದು ಕೂಡಾ ಕರೆಯುತ್ತಾರೆ. ಇದು ತಮಿಳುನಾಡು ರಾಜ್ಯದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಪಲ್ಸ್ ಇಲ್ಲಿಗೆ ಬರುತ್ತಾರೆ. ಊಟಿ ತನ್ನ ಆಹ್ಲಾದಕರವಾದ ವಾತಾವರಣಕ್ಕೆ ಹೆಚ್ಚು ಜನಪ್ರಿಯವಾಗಿದೆ.

Tap to resize

ಕೊಚ್ಚಿ ಫೋರ್ಟ್
ಆಕರ್ಷಕ ಕಡಲತೀರದ ಪ್ರದೇಶವಾಗಿರುವ ಫೋರ್ಟ್ ಕೊಚ್ಚಿಯು ಡಚ್, ಪೋರ್ಚುಗೀಸ್ ಮತ್ತು ಬ್ರಿಟಿಷ್ ವಸಾಹತುಶಾಹಿ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಫೋರ್ಟ್ ಕೊಚ್ಚಿ ಬೀಚ್‌ನಲ್ಲಿ ವಿಸ್ತಾರವಾದ ಬಿದಿರಿನ ಮೀನುಗಾರಿಕೆ ಬಲೆಗಳಿಗೆ ಹೆಸರುವಾಸಿಯಾಗಿದೆ. ಕೇರಳದ ಹೆಸರುವಾಸಿ ತಿನಿಸುಗಳು ಇಲ್ಲಿ ಸಿಗುತ್ತವೆ. ಕೊಚ್ಚಿ ಫೋರ್ಟ್‌ ಪಾರಂಪರಿಕ ಕಟ್ಟಡಗಳು, ಕಲಾ ಗ್ಯಾಲರಿಗಳನ್ನು ಹೊಂದಿವೆ.

ಕೊಡಚಾದ್ರಿ
ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದೆ. ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು 1343 ಮೀ. ಎತ್ತರವಿದೆ.

ಜಮ್ಜುಕಾಶ್ಮೀರ
ಜಮ್ಜುಕಾಶ್ಮೀರವನ್ನು ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯುತ್ತಾರೆ. ಇದು ಲಡಾಖ್ ಇಂಡಸ್ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣಗಳಲ್ಲಿ ಒಂದಾಗಿದೆ. ಆಕರ್ಷಕ ಕೆರೆಗಳು, ಕಣ್ಮನ ಸೆಳೆಯುವ ಪರ್ವತ, ಆಕರ್ಷಕ ಭೂಪ್ರದೇಶ ಹಾಗೂ ಬೆಟ್ಟದ ಆಕರ್ಷಕ ತಪ್ಪಲುಗಳು ಇಲ್ಲಿ ಎಲ್ಲರ ಗಮನ ಸೆಳೆಯುತ್ತವೆ.

nature

ವಾಲ್ಪಾರೈ 
ತಮಿಳುನಾಡಿನಲ್ಲಿರುವ ಈ ಪ್ರದೇಶ ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಇದು ಸಮುದ್ರ ಮಟ್ಟದಿಂದ 3,474 ಅಡಿ (1,059 ಮೀ) ಎತ್ತರದಲ್ಲಿದೆ. ಮೂಲತಃ ಪೂಣಚಿಮಲೈ ಎಂದೂ ಇದನ್ನು ಕರೆಯುತ್ತಾರೆ. ಇದು ಭಾರತದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಒಂದು ತಾಲೂಕು ಮತ್ತು ಗಿರಿಧಾಮವಾಗಿದೆ. ಇದು ಅನಮಲೈ ಹುಲಿ ಸಂರಕ್ಷಿತ ಪ್ರದೇಶವನ್ನು ಒಳಗೊಂಡಿದೆ ಇದನ್ನು ಮೊದಲು ಅನೈಮಲೈ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತಿತ್ತು.

Latest Videos

click me!