ನಂದಿ ಹಿಲ್ಸ್
ಬೆಂಗಳೂರಿಗೆ ವೀಕೆಂಡ್‌ನಲ್ಲಿ ರಿಫ್ರೆಶ್ ಆಗೋಕೆ ಬೆಸ್ಟ್ ಪ್ಲೇಸ್ ನಂದಿ ಹಿಲ್ಸ್. ಇಲ್ಲಿನ ಸೂರ್ಯೊದಯ ನೋಡೋಕೆ ಎರಡು ಕಣ್ಣೂ ಸಾಲದು. ಇದು ಬೆಂಗಳೂರಿನಿಂದ ಜಸ್ಟ್ 61 ಕಿಮೀ ದೂರದಲ್ಲಿದೆ.
ರಾಮನಗರ ಬೆಟ್ಟ
ಬೆಂಗಳೂರಿನಿಂದ 49 ಕಿಮೀ ದೂರದಲ್ಲಿರುವ ರಾಮನಗರ ಬೆಟ್ಟ ದೊಡ್ಡ ದೊಡ್ಡ ಕಲ್ಲು, ಬಂಡೆಗಳಿಂದ ಕೂಡಿದ್ದು, ನೋಡಲು ಕಣ್ಣಿಗೆ ತುಂಬಾ ಅದ್ಭುತವಾಗಿ ಕಾಣುತ್ತದೆ. ಮೆಟ್ಟಿಲು, ಕಡಿದಾದ ಬೆಟ್ಟ ಟ್ರಿಕ್ಕಿಗ್‌ಗೆ ಹೋಗುವವರಿಗೆ ಬೆಸ್ಟ್ ಜಾಗ.
ಸಾವನದುರ್ಗ
ಬೆಂಗಳೂರಿನಿಂದ 50 ಕಿಮೀ ದೂರದಲ್ಲಿರುವ ಸಾವನದುರ್ಗ ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟವಾಗಿದೆ. ವೀಕೆಂಡ್‌ನಲ್ಲಿ ಸ್ನೇಹಿತರ ಜೊತೆ ಟ್ರಕ್ಕಿಂಗ್ ಹೋಗಲು ಉತ್ತಮ ಆಯ್ಕೆಯಾಗಿದೆ.
ಮಾಕಲಿ ದುರ್ಗ
ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ಈ ಜಾಗ ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ 18 ಕಿಲೋಮೀಟರ್ ದೂರದಲ್ಲಿದೆ.
ಅಂತರಗಂಗೆ
ಅಂತರಗಂಗೆ ಬೆಟ್ಟ ಕೋಲಾರದ ಮೊದಲ ಪ್ರವಾಸ ಸ್ಥಳವಾಗಿದೆ. ಬೆಟ್ಟ, ಗುಹೆಗಳು ಈ ಸ್ಥಳದ ವಿಶೇಷತೆಯಾಗಿದೆ. ಕೋಲಾರದಿಂದ ಮೂರು ಕಿ. ಮೀ. ದೂರದಲ್ಲಿದೆ.ಇದು ದೇವಸ್ಥಾನವಿರುವ ಪವಿತ್ರ ಸ್ಥಳವಾಗಿದೆ. ಅಂತರಗಂಗೆ ಬೆಟ್ಟವು ಪ್ರವಾಸಿಗರಿಗೆ ಹೇಳಿ ಮಾಡಿದ ಸ್ಥಳ.
ಸ್ಕಂದಗಿರಿ
ಸ್ಕಂದಗಿರಿ, ಫೇಮಸ್ ಟ್ರಕ್ಕಿಂಗ್ ಸ್ಪಾಟ್ ಆಗಿದೆ. ಹಳೆಯ ಕೋಟಿ, ಸುಂದರವಾದ ಸೂರ್ಯೋದಯದ ದೃಶ್ಯಕ್ಕೆ ಈ ಸ್ಥಳ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನಿಂದ 61 ಕಿಮೀ ದೂರದಲ್ಲಿದೆ.