Kamakya Templ : ಕಾಮಾಕ್ಯದಲ್ಲಿ ಪಾರಿವಾಳ ಹಾರಿಬಿಡುವ ಹಾಗೂ ಮೇಕೆಯನ್ನು ದೇವಾಲಯಕ್ಕೆ ಬಿಡುವ ಪದ್ದತಿ ಇದೆ. ಅನಂತ್ ಅಂಬಾನಿ ಕೂಡ ಪಾರಿವಾಳ ಹಾರಿಬಿಟ್ಟಿದ್ದಾರೆ. ದೇವಸ್ಥಾನದಲ್ಲಿ ಈ ಪದ್ಧತಿ ಜಾರಿಗೆ ಬಂದಿದ್ದು ಹೇಗೆ? ಈ ಪದ್ಧತಿ ಹಿಂದಿನ ಕಾರಣ ಏನು ಗೊತ್ತಾ?
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ, ಮಂಗಳವಾರ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂಬಾನಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ಥಳೀಯ ಸಂಪ್ರದಾಯದಂತೆ ಪಾರಿವಾಳಗಳನ್ನು ಹಾರಿಬಿಟ್ಟು, ಮೇಕೆಗಳನ್ನು ದೇವಾಲಯದ ಆವರಣಕ್ಕೆ ಬಿಟ್ಟರು. ದೇವಾಲಯದ ಈ ವಿಶೇಷ ಸಂಪ್ರದಾಯ ಈಗ ಚರ್ಚೆಯಲ್ಲಿದೆ.
26
ತಾಂತ್ರಿಕ ಆಚರಣೆ ಕೇಂದ್ರ ಕಾಮಾಕ್ಯ
ಕಾಮಾಕ್ಯ ದೇವಾಲಯವು ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದೆ. ತಾಂತ್ರಿಕ ಆಚರಣೆಯ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ. ದೇವಿಯ ಯೋನಿ ರೂಪವನ್ನು ಇಲ್ಲಿ ಪೂಜಿಸಲಾಗುತ್ತದೆ. ಇದನ್ನು ಇಡೀ ವಿಶ್ವದ ಜೀವನ ಮತ್ತು ಜನನದ ಮೂಲವೆಂದು ಪರಿಗಣಿಸಲಾಗುತ್ತದೆ. ಕಾಮಾಕ್ಯ ಇಡೀ ವಿಶ್ವದ ತಾಯಿ ಎಂದು ನಂಬಲಾಗಿದೆ. ಶಾಸ್ತ್ರೀಯ ಪೂಜಾ ವ್ಯವಸ್ಥೆ ಮತ್ತು ಸ್ಥಳೀಯ ಅಸ್ಸಾಮೀಸ್ ಮತ್ತು ಬುಡಕಟ್ಟು ನಂಬಿಕೆಗಳಿಂದ ಪ್ರಭಾವಿತವಾಗಿ ದೇವಾಲಯದಲ್ಲಿ ಅನೇಕ ಜಾನಪದ ಸಂಪ್ರದಾಯಗಳು ಅಭಿವೃದ್ಧಿಗೊಂಡಿವೆ. ಈ ಸಂಪ್ರದಾಯಗಳಲ್ಲಿ ಪಾರಿವಾಳಗಳನ್ನು ಹಾರಿಸುವುದು ಮತ್ತು ಮೇಕೆಗಳನ್ನು ಬಿಡುವುದು ಸೇರಿವೆ.
36
ಪಾರಿವಾಳ ಹಾರಿಸೋದು ಏಕೆ?
ಕಾಮಾಕ್ಯ ದೇವಸ್ಥಾನದಲ್ಲಿ, ಜನರು ಹರಕೆ ಹೊತ್ತುಕೊಂಡಾಗ ಅಥವಾ ಹರಗೆ ತೀರಿಸಲು ಪಾರಿವಾಳಗಳು ಮತ್ತು ಮೇಕೆಗಳನ್ನು ಅರ್ಪಣೆಯಾಗಿ ಬಿಡುತ್ತಾರೆ. ಎರಡೂ ಜೀವಿಗಳನ್ನು ದೇವಿಗೆ ಅರ್ಪಿಸುವ ವಿಧಾನ ಇದೆ. ಇದನ್ನು ಜೀವಂತ ಅರ್ಪಣೆ ಎನ್ನಲಾಗುತ್ತದೆ. ಈ ತ್ಯಾಗ ರಕ್ತಪಾತ, ನೋವು ಮತ್ತು ಹಿಂಸೆಯನ್ನು ಒಳಗೊಂಡಿರುವುದಿಲ್ಲ.
ಒಂದು ಜಾನಪದ ಕಥೆಯ ಪ್ರಕಾರ, ದಂಪತಿ ಮಗುವಿಗಾಗಿ ದೇವಿ ಮುಂದೆ ಹರಕೆ ಹೊತ್ತಿದ್ದರು. ಮಗು ಜನಿಸಿದ ನಂತರ ದಂಪತಿ ಪಾರಿವಾಳವನ್ನು ಬಲಿ ನೀಡಲು ಮುಂದಾದ್ರು. ಆದ್ರೆ ಅಲ್ಲಿದ್ದ ಎಲ್ಲ ಪಾರಿವಾಳಗಳು ಕೂಗಲು ಶುರು ಮಾಡಿದ್ದರಿಂದ ದಂಪತಿ ಪಾರಿವಾಳ ಬಲಿ ನೀಡುವ ಬದಲು ಪಾರಿವಾಳವನ್ನು ಹಾರಿಬಿಟ್ಟರು. ಅಲ್ಲಿಂದ ದೇವಿಗೆ ಪಾರಿವಾಳ ಅರ್ಪಿಸುವ ಪದ್ಧತಿ ಬದಲಾಗಿದೆ. ದುಃಖ ಅಥವಾ ನಕಾರಾತ್ಮಕತೆಯಿಂದ ವಿಮೋಚನೆಯ ಸಂಕೇತವೆಂದು ಪರಿಗಣಿಸುತ್ತಾರೆ.
56
ಕಾಮದೇವನ ಜೊತೆ ಸಂಬಂಧ
ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ, ಪಾರಿವಾಳಗಳು ಕಾಮದೇವನೊಂದಿಗೆ ಸಂಬಂಧ ಹೊಂದಿವೆ. ಪಾರಿವಾಳಗಳು ಮತ್ತು ಕಾಮದೇವರ ನಡುವಿನ ಸಂಪರ್ಕವು ಪ್ರೀತಿ, ಸಂದೇಶಗಳು ಮತ್ತು ಪೌರಾಣಿಕ ನಂಬಿಕೆಗಳಿಂದ ಹುಟ್ಟಿಕೊಂಡಿದೆ. ಹಿಂದೂ ಪುರಾಣಗಳ ಪ್ರಕಾರ, ಪಾರಿವಾಳಗಳನ್ನು ಪ್ರೀತಿ ಮತ್ತು ಕಾಮದ ದೇವರು ಕಾಮದೇವ ಮತ್ತು ಅವನ ಪತ್ನಿ ರತಿ ದೇವತೆಯ ನೆಚ್ಚಿನ ಪಕ್ಷಿ ಅಥವಾ ವಾಹನವೆಂದು ಪರಿಗಣಿಸಲಾಗುತ್ತದೆ.
66
ಪ್ರೀತಿ ಸಂಕೇತ
ಪ್ರಾಚೀನ ಕಾಲದಿಂದಲೂ, ಪಾರಿವಾಳಗಳನ್ನು ಪ್ರೀತಿ, ವಾತ್ಸಲ್ಯ ಮತ್ತು ಪ್ರೇಮ ಪತ್ರಗಳನ್ನು ತಿಳಿಸಲು ಬಳಸಲಾಗುತ್ತಿತ್ತು. ಪ್ರೇಮಿಗಳ ನಡುವೆ ಸಂದೇಶಗಳನ್ನು ಕಳುಹಿಸಲು ಪಾರಿವಾಳಗಳನ್ನು ಸಹ ಬಳಸುತ್ತಿದ್ದರು. ಈ ಸಂಕೇತವು ಭಾರತೀಯ ಸಂಸ್ಕೃತಿಗೆ ಸೀಮಿತವಾಗಿಲ್ಲ. ಪ್ರಾಚೀನ ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿ, ಪ್ರೀತಿಯ ದೇವತೆಯಾದ ಶುಕ್ರ,ಬಿಳಿ ಪಾರಿವಾಳಗಳೊಂದಿಗೆ ಸಂಬಂಧ ಹೊಂದಿದೆ. ಇದು ಪ್ರೀತಿ, ಫಲವತ್ತತೆ ಮತ್ತು ಲೈಂಗಿಕತೆಯನ್ನು ಸಂಕೇತಿಸುತ್ತದೆ. ಪಾರಿವಾಳಗಳು ನಕಾರಾತ್ಮಕತೆ, ಅಡೆತಡೆಗಳು ಮತ್ತು ರೋಗಗಳನ್ನು ನಿವಾರಣೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.