ಈ ನಿಗೂಢ ಕೋಟೆಯ ದ್ವಾರದಲ್ಲಿ 7 ಹುಡುಗಿಯರನ್ನು ಇಂದಿಗೂ ಪೂಜಿಸುತ್ತಾರೆ

Published : Apr 07, 2023, 05:19 PM IST

ಕಳೆದ ಹಲವಾರು ವರ್ಷಗಳಿಂದ ಜನರು 7 ಹುಡುಗಿಯರನ್ನು ಪೂಜಿಸುತ್ತಿರುವ ಕೋಟೆಯ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಈ ಕೋಟೆಯ ವಿಶೇಷತೆ ಏನು ಅನ್ನೋದನ್ನು ತಿಳಿದುಕೊಳ್ಳೋಣ.  

PREV
17
ಈ ನಿಗೂಢ ಕೋಟೆಯ ದ್ವಾರದಲ್ಲಿ 7 ಹುಡುಗಿಯರನ್ನು ಇಂದಿಗೂ ಪೂಜಿಸುತ್ತಾರೆ

ನಮ್ಮ ದೇಶದಲ್ಲಿ ಜನರು ಕಾಲಿಡಲು ಸಹ ಹೆದರುವ ಅನೇಕ ಸ್ಥಳಗಳಿವೆ. ಅಂತಹ ಒಂದು ಸ್ಥಳ ಲಲಿತಪುರದಲ್ಲೂ ಇದೆ. ಲಲಿತಪುರದ ತಾಲ್ ಬೆಹಟ್ (Talbehat, Lalitpur) ಎಂಬ ಹಳ್ಳಿಯಲ್ಲಿನ ಕೋಟೆಯಲ್ಲಿ 150 ವರ್ಷಗಳ ಹಿಂದೆ ಆಘಾತಕಾರಿ ಘಟನೆ ನಡೆಯಿತು. ಅದರ ನಂತರ ಜನರು ಇಲ್ಲಿ ಹುಡುಗಿಯರನ್ನು ಪೂಜಿಸಲು ಪ್ರಾರಂಭಿಸಿದರು. ಈ ಕೋಟೆಯ ದ್ವಾರದಲ್ಲಿ 7 ಹುಡುಗಿಯರನ್ನು ಏಕೆ ಪೂಜಿಸಲಾಗುತ್ತದೆ ಎಂದು ತಿಳಿದುಕೊಳ್ಳೋಣ. 

27

ಪ್ರತಿ ರಾತ್ರಿ ಹುಡುಗಿಯರು ಕಿರುಚುವುದನ್ನು ಕೇಳಬಹುದು
ಇತಿಹಾಸಕಾರರ ಪ್ರಕಾರ, ಅಕ್ಷಯ ತೃತೀಯದ ದಿನದಂದು, ತಾಲ್ ಬೆಹಟ್ ರಾಜ್ಯದ 7 ಹುಡುಗಿಯರು ರಾಜ ಮರ್ದಾನ್ ಸಿಂಗ್ (King Mardan Singh) ಅವರ ಈ ಕೋಟೆಗೆ ದಕ್ಷಿಣೆ ಕೇಳಲು ಹೋಗಿದ್ದರಂತೆ. ಆಗ ರಾಜನ ತಂದೆ ಪ್ರಹ್ಲಾದನು ಕೋಟೆಯಲ್ಲಿ ಒಬ್ಬನೇ ಇದ್ದನು. ಹುಡುಗಿಯರ ಸೌಂದರ್ಯ ನೋಡಿದ ಅವನು ಏಳು ಹುಡುಗಿಯರೊಂದಿಗೆ ಕೆಟ್ಟದಾಗಿ ವರ್ತಿಸಿದನು. 
 

37

ಈ ಆಘಾತಕಾರಿ ಘಟನೆಯಿಂದ ಮನನೊಂದ ಬಾಲಕಿಯರು ಅರಮನೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಇಂದಿಗೂ ತಾಲ್ ಬೆಹಟ್ ಕೋಟೆಯಲ್ಲಿ ಆ ಏಳು ಸಂತ್ರಸ್ತ ಹುಡುಗಿಯರ ಕಿರುಚಾಟ ಕೇಳಿಸುತ್ತದೆ ಎನ್ನುವ ನಂಬಿಕೆ ಇದೆ. 

47

ಹುಡುಗಿಯರನ್ನು ಏಕೆ ಪೂಜಿಸಲಾಗುತ್ತದೆ?
ರಾಜಾ ಮರ್ದಾನ್ ಸಿಂಗ್ 1850ರಲ್ಲಿ ಲಲಿತಪುರದಲ್ಲಿ ತಾಲ್ ಬೆಹಟ್ ಕೋಟೆಯನ್ನು ನಿರ್ಮಿಸಿದನು. 1857 ರ ಕ್ರಾಂತಿಯಲ್ಲಿ ರಾಜಾ ಮರ್ದನ್ ಸಿಂಗ್ ರಾಣಿ ಲಕ್ಷ್ಮಿಬಾಯಿಯನ್ನು ಬೆಂಬಲಿಸಿದರು. ಅವರನ್ನು ಇಂದಿಗೂ ಕ್ರಾಂತಿಕಾರಿ ಎಂದು ನೆನಪಿಸಿಕೊಳ್ಳಲಾಗುತ್ತದೆ. ಆದರೆ ರಾಜಾ ಮರ್ದನ್ ಸಿಂಗ್ ಅವರ ಮಕ್ಕಳು ಅವರು ಮಾಡಿದ ಕ್ರಮದಿಂದ ಅಸಮಾಧಾನಗೊಂಡಿದ್ದರು. 

57

ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಕ ಭಾನು ಪ್ರತಾಪ್, 'ಸಾರ್ವಜನಿಕರ ಕೋಪವನ್ನು ಶಾಂತಗೊಳಿಸಲು ಮತ್ತು ತಂದೆಯ ಕಾರ್ಯಗಳಿಗೆ ಪಶ್ಚಾತ್ತಾಪಪಡಲು ರಾಜಾ ಮರ್ದಾನ್ ಸಿಂಗ್ ಹುಡುಗಿಯರಿಗೆ ಗೌರವ ಸಲ್ಲಿಸಿದರು. ಅವರು ಕೋಟೆಯ ಮುಖ್ಯ ದ್ವಾರದಲ್ಲಿ 7 ಹುಡುಗಿಯರ ಚಿತ್ರಗಳನ್ನು ಮಾಡಿದ್ದರು, ಅದು ಇಂದಿಗೂ ಇದೆ. ಕೋಟೆಯ ಬಾಗಿಲಿನ ಮೇಲೆ 7 ಹುಡುಗಿಯರ ವರ್ಣಚಿತ್ರಗಳನ್ನು (painting of 7 girls) ಪ್ರತ್ಯೇಕವಾಗಿ ರಚಿಸಲಾಗಿದೆ. 

67

ಈ ಘಟನೆಯು ಅಕ್ಷಯ ತೃತೀಯ ದಿನದಂದು ನಡೆಯಿತು, ಆದ್ದರಿಂದ ಇಂದಿಗೂ ಈ ಹಬ್ಬವನ್ನು ಇಲ್ಲಿ ಆಚರಿಸುವುದಿಲ್ಲ. ಅಕ್ಷಯ ತೃತೀಯದಂದು ಸ್ಥಳೀಯ ನಿವಾಸಿಗಳು ಕೋಟೆಯ ಮುಖ್ಯ ದ್ವಾರದಲ್ಲಿ ರಚಿಸಲಾದ ಏಳು ಹುಡುಗಿಯರ ವರ್ಣಚಿತ್ರಗಳನ್ನು ಪೂಜಿಸಲು ಈ ಸ್ಥಳಕ್ಕೆ ಬರುತ್ತಾರೆ, ಇದರಿಂದ ಅವರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. 

77

ಈ ಘಟನೆಯು ಅಕ್ಷಯ ತೃತೀಯ ದಿನದಂದು ನಡೆಯಿತು, ಆದ್ದರಿಂದ ಇಂದಿಗೂ ಈ ಹಬ್ಬವನ್ನು ಇಲ್ಲಿ ಆಚರಿಸುವುದಿಲ್ಲ. ಅಕ್ಷಯ ತೃತೀಯ ದಿನದಂದು, ಸ್ಥಳೀಯ ನಿವಾಸಿಗಳು ಕೋಟೆಯ ಮುಖ್ಯ ದ್ವಾರದಲ್ಲಿ ರಚಿಸಲಾದ ಏಳು ಹುಡುಗಿಯರ ವರ್ಣಚಿತ್ರಗಳನ್ನು ಪೂಜಿಸಲು ಈ ಸ್ಥಳಕ್ಕೆ ಬರುತ್ತಾರೆ, ಇದರಿಂದ ಅವರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. 

Read more Photos on
click me!

Recommended Stories