ಜನರು ಆಹಾರ ತಿನ್ನುವಾಗ ಮೊಬೈಲ್ ಸ್ಕ್ರಾಲ್ ಮಾಡುವ ಅಭ್ಯಾಸ ಹೊಂದಿದ್ದಾರೆ. ಇದನ್ನು ನಾವು ನಮ್ಮ ಮನೆಲೂ ಸಹ ನೋಡಬಹುದು, ಅಥವಾ ನಾವೇ ಫೋನ್ ನೋಡುತ್ತಾ ಊಟನೂ ಮಾಡ್ತೀವಿ ಅಲ್ವಾ? ಆದರೆ ಕೆಲವು ಜನರು ಸಾಮಾಜಿಕ ಮಾಧ್ಯಮಕ್ಕೆ (social media) ಎಷ್ಟು ವ್ಯಸನಿಯಾಗಿದ್ದಾರೆ ಎಂದರೆ ಅವರು ಒಂದು ಕೈಯಿಂದ ಆಹಾರವನ್ನು ತಿನ್ನುತ್ತಾರೆ ಮತ್ತು ಇನ್ನೊಂದು ಕೈಯಲ್ಲಿ ಮೊಬೈಲ್ ಓಡಿಸುತ್ತಾರೆ. ಆದರೆ ಜಪಾನ್ ನ ರೆಸ್ಟೋರೆಂಟ್ ಒಂದರಲ್ಲಿ ಗ್ರಾಹಕರು ಇನ್ನು ಮುಂದೆ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ.
ಜಪಾನ್ ನ ರೆಸ್ಟೋರೆಂಟ್ (Japan Restaurant) ಒಂದು ಊಟ ಮಾಡುವಾಗ ಮೊಬೈಲ್ ಫೋನ್ ಗಳನ್ನು ಬಳಸುವುದನ್ನು ನಿಷೇಧಿಸಿವೆ. ರೆಸ್ಟೋರೆಂಟ್ ನ ಈ ನಡೆಗೆ ಎಲ್ಲೆಡೆ ಶ್ಲಾಘನೆ ಕೇಳಿಬರುತ್ತಿದೆ. ಯಾಕೆ ಹೀಗೆ ಮಾಡಲಾಗಿದೆ ಅನ್ನೋದರ ಹಿಂದಿನ ಕಾರಣವನ್ನು ತಿಳಿದುಕೊಳ್ಳೋಣ.
ಟೋಕಿಯೊದಲ್ಲಿರುವ ಡೆಬು ಚಾನ್ ಎಂಬ ಈ ರೆಸ್ಟೋರೆಂಟ್ ಈ ಕೆಲಸವನ್ನು ಮಾಡಿದೆ. ಸಿಎನ್ಎನ್ ವರದಿಯ ಪ್ರಕಾರ, ರಾಮೆನ್ ನೂಡಲ್ಸ್ ಪೂರೈಸುವ ರೆಸ್ಟೋರೆಂಟ್ಸ್‌ಗೆ ಬೇಗ ತಿನ್ನಿ ಮತ್ತು ಸ್ಥಳವನ್ನು ಖಾಲಿ ಮಾಡಿ ಎಂಬ ನಿಯಮ ಇದೆ. ರಾಮೆನ್ ನೂಡಲ್ಸ್ (ramen noodles) ತಿನ್ನುವವರ ಸಂಖ್ಯೆ ಹೆಚ್ಚಿರೋದ್ರಿಂದ ಬಂದ ಗ್ರಾಹಕರು ಬೇಗನೆ ತಿಂಡಿ ತಿಂದು ಹೊರಡುವ ಸಲುವಾಗಿ ಈ ನಿಯಮ ಮಾಡಲಾಗಿದೆ.
ಆಹಾರ ತಣ್ಣಗಾಗುವವರೆಗೆ ಜನರು ಮೊಬೈಲ್ ಬಳಸುತ್ತಾರೆ
ಈ ರೆಸ್ಟೋರೆಂಟ್ ನಲ್ಲಿ, ದಿನವಿಡಿ ಹೆಚ್ಚು ಜನಸಂದಣಿಯಾಗುತ್ತಿತ್ತು, ಇದು ಏಕೆ ಎಂದು ಸಿಬ್ಬಂದಿ ಗಮನಿಸಿದರು. ಅವರು ಗಮನಿಸಿದಂತೆ ದೀರ್ಘಕಾಲದವರೆಗೆ ಉಳಿಯುವ ಜನರು ರಾಮೆನ್ ನೂಡಲ್ ತಣ್ಣಗಾಗುವವರೆಗೂ ಫೋನ್ ಚಾಲನೆ ಮಾಡುವುದನ್ನು ನೋಡಿದರು. ಅಷ್ಟೇ ಅಲ್ಲದೇ, ಫೋಟೋಗಳನ್ನು ತೆಗೆಯುತ್ತಾ, ಜನರು ಊಟದ ಕಡೆಗೆ ಹೆಚ್ಚು ಗಮನ ಹರಿಸದೆ, ಹೆಚ್ಚು ಸಮಯ ತೆರೆದುಕೊಳ್ಳುವುದರಿಂದ, ಹೊಟೇಲ್ ಹೊರಗೆ ಕಾಯುವವರ ಸಂಖ್ಯೆ ಹೆಚ್ಚುತ್ತಿತ್ತು. ಅದಕ್ಕಾಗಿ ಈ ನಿಯಮ ಜಾರಿಗೆ ಬಂತು.
ಕೇವಲ 1 ಮಿಲಿಮೀಟರ್ ಅಗಲವಿರುವ ಹಕಟಾ ರಾಮೆನ್ ಸರ್ವ್ ಮಾಡುವುದಾಗಿ ರೆಸ್ಟೋರೆಂಟ್ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತುಂಬಾ ತೆಳ್ಳಗಿರುವುದರಿಂದ, ಅದು ಬೇಗನೆ ವಿಸ್ತರಿಸುತ್ತದೆ ಮತ್ತು ತಕ್ಷಣ ಹಾಳಾಗುತ್ತದೆ. ಇದರಿಂದ ಅದು ತಣ್ಣಗಾದ ಮೇಲೆ ತಿಂದವರಿಗೆ ಹಾನಿಯನ್ನುಂಟುಮಾಡುತ್ತದೆ.
ಇದೆಲ್ಲವನ್ನೂ ನೋಡಿದ ರೆಸ್ಟೋರೆಂಟ್ ಮೊಬೈಲ್ ನಿಷೇಧಿಸಿತು. ಒಳಗೆ ಊಟ ಮಾಡುವಾಗ 30 ಜನರು ಮೊಬೈಲ್ ಬಳಸಿದರೆ, 10 ಜನರು ಹೊರಗೆ ಕಾಯಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಫೋನ್ ನಿಷೇಧಿಸುವ ನಿಯಮದ ಯಾವುದೇ ಪೋಸ್ಟರ್ ಹಾಕಿಲ್ಲ. ಉದ್ಯೋಗಿಗಳು ಸ್ವತಃ ಹೋಗಿ ಫೋನ್ ಬಳಸದಂತೆ ಜನರಿಗೆ ಹೇಳುತ್ತಾರೆ. ಜಪಾನ್ ನ ಈ ರೆಸ್ಟೋರೆಂಟ್ ನ ನಿಯಮಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಗ ಜನರು ಅಲ್ಲಿ ತಮ್ಮ ಆಹಾರವನ್ನು ಆನಂದಿಸುತ್ತಿರುವುದನ್ನು (people enjoy their food) ಕಾಣಬಹುದು.