ಶಿವ ಜ್ಯೋತಿಯಂತೆ ಸರ್ವವ್ಯಾಪಕ, ಬೆಳಕು ಕೊಡುವವನು, ಭಕ್ತರ ಮನದ ಕತ್ತಲೆಯನ್ನು ತನ್ನ ಬೆಳಕಿನಿಂದ ಕಳೆಯುವವನು. ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದರ್ಶಿನ ಪಡೆದರೆ ಪರಮೇಶ್ವರನ ಕೃಪೆ ದೊರೆತು ಮೋಕ್ಷ ಲಭಿಸುವುದು ಎಂಬುದು ನಂಬಿಕೆ. ಜ್ಯೋತಿರ್ಲಿಂಗವು ಶಿವನನ್ನು ಪೂಜಿಸಲು ಮೀಸಲಾಗಿರುವ ಪವಿತ್ರ ದೇವಾಲಯ . ಈ ದೇವಾಲಯಗಳು ಶಿವನನ್ನು ಬೆಳಕು ಅಥವಾ ಜ್ಯೋತಿರ್ಲಿಂಗಂ ರೂಪದಲ್ಲಿ ಪೂಜಿಸಲಾಗುತ್ತದೆ. ಮೂಲತಃ 64 ಜ್ಯೋತಿರ್ಲಿಂಗಗಳಿವೆಯೆಂದು ನಂಬಲಾಗಿದ್ದು ಆದರೆ ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತಿ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.